Kumaraswamy Press Meet: ರಾಜ್ಯ ನಡೆಸುವವರಿಗೆ ತಲೆ ಇರಬೇಕು, ಯಾವ ಸಿದ್ಧಾಂತವೂ ಇಲ್ಲ -ಹೆಚ್ಡಿ ಕುಮಾರಸ್ವಾಮಿ
2005ರಲ್ಲಿ ಪಾಂಚಜನ್ಯ ಮೊಳಗಿಸಿದ್ದರೂ ಕಾಂಗ್ರೆಸ್ ಸೋಲು. 2013ರಲ್ಲಿ ಬಿಜೆಪಿ ಸೋಲಿಗೆ ಸಿದ್ದರಾಮಯ್ಯ ಕಾರಣ ಅಲ್ಲ. ಜೆಡಿಎಸ್ ಹೋರಾಟದಿಂದ ಬಿಜೆಪಿ ಸೋಲನುಭವಿಸಿತ್ತು. 2018ರಲ್ಲಿ ಕಾಂಗ್ರೆಸ್ 78 ಸ್ಥಾನಗಳಿಗೆ ಕುಸಿದಿದ್ದು ಯಾಕೆ?
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮ ಪಕ್ಷದಿಂದ ಯಾರು ಹೋಗುತ್ತಾರೆ ಎಂಬುದು ಗೊತ್ತಿದೆ. ಅದರಿಂದ ನಮಗೇನೂ ಆತಂಕ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2005ರಲ್ಲಿ ಪಾಂಚಜನ್ಯ ಮೊಳಗಿಸಿದ್ದರೂ ಕಾಂಗ್ರೆಸ್ ಸೋಲು. 2013ರಲ್ಲಿ ಬಿಜೆಪಿ ಸೋಲಿಗೆ ಸಿದ್ದರಾಮಯ್ಯ ಕಾರಣ ಅಲ್ಲ. ಜೆಡಿಎಸ್ ಹೋರಾಟದಿಂದ ಬಿಜೆಪಿ ಸೋಲನುಭವಿಸಿತ್ತು. 2018ರಲ್ಲಿ ಕಾಂಗ್ರೆಸ್ 78 ಸ್ಥಾನಗಳಿಗೆ ಕುಸಿದಿದ್ದು ಯಾಕೆ? 2023ರ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ತಿಳಿಯುತ್ತೆ. ಅಧಿಕಾರದಲ್ಲಿ ಇದ್ದಾಗ ಒಂದು, ಇಲ್ಲದೇ ಇದ್ದಾಗ ಒಂದು. ರಾಜ್ಯ ನಡೆಸುವವರಿಗೆ ತಲೆ ಇರಬೇಕು. ಯಾರಿಗೂ ಯಾವ ಸಿದ್ಧಾಂತ ಇಲ್ಲ, ಅಧಿಕಾರ ಅಷ್ಟೇ ಸಿದ್ಧಾಂತ. ಅಧಿಕಾರಕ್ಕಾಗಿ ಅವರಿವರನ್ನು ಕರೆಯುತ್ತಿದ್ದಾರೆ ಅಷ್ಟೆ. ಸರ್ಕಾರಕ್ಕೆ ಪುಟಗಟ್ಟಲೆ ಜಾಹೀರಾತು ನೀಡೋದೆ ಕೆಲಸ ಅಲ್ಲ. ಜೆಡಿಎಸ್ ಪಕ್ಷವನ್ನು ಬಿಟ್ಟು ನೀವು ಏನೂ ಮಾಡಲು ಆಗಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ತಿಳಿಸಿದ್ದಾರೆ.
ನಮ್ಮ ಪಕ್ಷದ ಕೆಲವು ಶಾಸಕರು ಪಾಪ ಸಿದ್ದರಾಮಯ್ಯನವರ ಶ್ರಮದಿಂದ ಗೆದ್ದಿದ್ದಾರೆ. ಅವರಿಂದ ಗೆದ್ದಿದ್ದಕ್ಕೆ ಶಾಸಕರು ಸಿದ್ದರಾಮಯ್ಯ ಸಂಪರ್ಕದಲ್ಲಿ ಇರ್ತಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಂದ ಗೆದ್ದಿದ್ದೇವೆಂದು ನಮ್ಮವರು ಹೇಳಿದ್ರು. ಅವರ ಗೆಲುವಿಗೆ ಎಷ್ಟು ಕಷ್ಟ ಪಟ್ಟಿದ್ದೇವೆಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯರಿಂದ ಗೆದ್ದವರಿಗೆ 2023ರಲ್ಲಿ ಗೊತ್ತಾಗುತ್ತೆ ಎಂದು ಹೆಸರೇಳದೆ ಶಿವಲಿಂಗೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.