Kareena Kapoor: ಗಣರಾಜ್ಯೋತ್ಸವಕ್ಕೆ ತೈಮೂರ್ ಶುಭಕೋರಿದ್ದು ಹೇಗೆ? ಕರೀನಾ ಹಂಚಿಕೊಂಡ ಫೋಟೋ ಇಲ್ಲಿದೆ

Taimur Ali Khan: ಬಾಲಿವುಡ್ ನಟಿ ಕರೀನಾ ಕಪೂರ್ ಸದ್ಯ ತಮ್ಮ ಪುತ್ರರ ಪೋಷಣೆಯಲ್ಲಿ ನಿರತರಾಗಿದ್ದಾರೆ. ಮೊದಲ ಪುತ್ರ ತೈಮೂರ್ ಇಂದು ವಿಶೇಷ ರೀತಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿದ್ದು, ಕರೀನಾ ಚಿತ್ರ ಹಂಚಿಕೊಂಡಿದ್ದಾರೆ.

Kareena Kapoor: ಗಣರಾಜ್ಯೋತ್ಸವಕ್ಕೆ ತೈಮೂರ್ ಶುಭಕೋರಿದ್ದು ಹೇಗೆ? ಕರೀನಾ ಹಂಚಿಕೊಂಡ ಫೋಟೋ ಇಲ್ಲಿದೆ
ತೈಮೂರ್ ಸಿದ್ಧಪಡಿಸಿದ್ದರ ಫೋಟೋ ಹಂಚಿಕೊಂಡ ಕರೀನಾ (ಎಡ ಚಿತ್ರ), ಪುತ್ರನೊಂದಿಗೆ ಕರೀನಾ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on:Jan 26, 2022 | 3:00 PM

ಇಂದು ದೇಶದೆಲ್ಲೆಡೆ ಗಣರಾಜ್ಯೋತ್ಸವವನ್ನು (Republic Day 2022) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳು ವಿಶೇಷ ದಿನಕ್ಕೆ ಶುಭಕೋರುತ್ತಿದ್ದಾರೆ. ಬಾಲಿವುಡ್ ತಾರೆಯರೂ ಇದಕ್ಕೆ ಹೊರತಾಗಿಲ್ಲ. ನಟಿ ಕರೀನಾ ಕಪೂರ್ (Kareena Kapoor) ಕೂಡ ವಿಶೇಷ ಚಿತ್ರದ ಮೂಲಕ ಶುಭ ಕೋರಿದ್ದಾರೆ. ಅದರಲ್ಲಿ ಅವರು ಪುತ್ರ ತೈಮೂರ್​ನ ಸೃಜನಶೀಲತೆಯನ್ನು ಬಿಂಬಿಸುವ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲ ಪುತ್ರ ತೈಮೂರ್ (Taimur Ali Khan) ತನ್ನದೇ ವಿಧಾನದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದಾನೆ. ಹೌದು. ಕಿತ್ತಳೆ, ಸೇಬು ಹಾಗೂ ಕಿವಿ ಹಣ್ಣುಗಳಿಂದ ಭಾರತದ ಧ್ವಜದ ತ್ರಿವರ್ಣವನ್ನು ರಚಿಸಲು ಪ್ರಯತ್ನಿಸುವ ಮೂಲಕ ತೈಮೂರ್ ನಮನ ಸಲ್ಲಿಸಲು ಮುಂದಾಗಿದ್ದಾನೆ. ಪುತ್ರ ಮಾಡಿದ ಈ ಕೆಲಸವನ್ನು ಚಿತ್ರ ಸಮೇತ ಹಂಚಿಕೊಂಡಿರುವ ಕರೀನಾ ‘ಟಿಮ್ (ತೈಮೂರ್) ರಚಿಸಿದ ತ್ರಿವರ್ಣದ ಬ್ರೇಕ್​ಫಾಸ್ಟ್’ ಎಂದು ಬರೆದುಕೊಂಡಿದ್ದಾರೆ. ಕರೀನಾ ಹಂಚಿಕೊಂಡಿರುವ ಈ ಚಿತ್ರ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳ ಖಾತೆಗಳಲ್ಲಿ ಮರುಹಂಚಿಕೆಯಾಗುತ್ತಿದೆ.

ಗಣರಾಜ್ಯೋತ್ಸವಕ್ಕೆ ಸೆಲೆಬ್ರಿಟಿಗಳು ಶುಭಕೋರಿದ್ದು ಹೇಗೆ? 73ನೇ ಗಣರಾಜ್ಯೋತ್ಸವಕ್ಕೆ ಬಾಲಿವುಡ್​ನ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ನಟ ವಿಕ್ಕಿ ಕೌಶಲ್ ‘ಸರ್ದಾರ್ ಉಧಾಮ್’ ಚಿತ್ರದ ಫೋಟೋ ಒಂದನ್ನು ಹಂಚಿಕೊಂದು ಶುಭ ಕೋರಿದ್ದಾರೆ. ನಟಿ ಕಂಗನಾ ರಣಾವತ್ ಹಾಗೂ ಕರೀನಾ ಕಪೂರ್ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಚಿತ್ರ ಹಂಚಿಕೊಂಡು ಅಭಿಮಾನಿಗಳಿಗೆ ಶುಭಕೋರಿದ್ದಾರೆ.

ಸೆಲೆಬ್ರಿಟಿಗಳು ಹಂಚಿಕೊಂಡ ಚಿತ್ರಗಳು ಇಲ್ಲಿವೆ:

Kareena Kangana and Vicky Kaushal wishes to Republic Day

ಗಣರಾಜ್ಯೋತ್ಸವಕ್ಕೆ ಕರೀನಾ, ಕಂಗನಾ ಹಾಗೂ ವಿಕ್ಕಿ ಕೌಶಲ್ ಶುಭಕೋರಿದ್ದು ಹೀಗೆ..

ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಶುಭ ಕೋರಿ, ‘ಮೌಲ್ಯಗಳನ್ನು ಎತ್ತಿಹಿಡಿದು ಎಲ್ಲರನ್ನೂ ಒಗ್ಗಟ್ಟಾಗಿಸುವ ದೇಶದ ಸಂವಿಧಾನವನ್ನು ಎತ್ತಿಹಿಡಿಯೋಣ’ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಸಂವಿಧಾನದ ಚಿತ್ರವನ್ನು ಹಂಚಿಕೊಂಡು ಗಣರಾಜ್ಯೋತ್ಸವದ ಶುಭಕೋರಿದ್ದಾರೆ.

ಇದನ್ನೂ ಓದಿ:

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

ಸೈಫ್​-ಕರೀನಾ ಮಾಡಿದ ತಪ್ಪೇನು? ಫೋಟೋ ನೋಡಿ ನಿಮಗೆ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ

Published On - 2:57 pm, Wed, 26 January 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ