ಸಲ್ಮಾನ್ ಕಡೆಗೆ ವಿಚಿತ್ರ ಲುಕ್ ನೀಡಿದ ದೀಪಿಕಾ; ಎಲ್ಲಕ್ಕೂ ಕಾರಣ ಭಾಯಿ ಇಟ್ಟ ಹೊಸ ಹೆಸರು!

Deepika Padukone | Salman Khan: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ನ 15 ಸೀಸನ್ ಮುಕ್ತಾಯವಾಗಲು ದಿನಗಣನೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ತಾರೆಯರು ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಕಡೆಗೆ ವಿಚಿತ್ರ ಲುಕ್ ನೀಡಿದ ದೀಪಿಕಾ; ಎಲ್ಲಕ್ಕೂ ಕಾರಣ ಭಾಯಿ ಇಟ್ಟ ಹೊಸ ಹೆಸರು!
ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on: Jan 26, 2022 | 7:00 AM

ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ 15 (Big Boss 15) ಮುಕ್ತಾಯದ ಹಂತಕ್ಕೆ ಸಮೀಪಿಸುತ್ತಿದೆ. ಜನರ ಕುತೂಹಲವನ್ನು ಕೆರಳಿಸುತ್ತಿರುವ ಈ ಬಾರಿಯ ಶೋನಲ್ಲಿ ಪ್ರಶಸ್ತಿ ಗೆಲ್ಲಲು ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ವಿಶೇಷ ಅತಿಥಿ ಆಗಮನದ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದ್ದು, ಕುತೂಹಲ ಕೆರಳಿಸಿದೆ. ಕಲರ್ಸ್ ವಾಹಿನಿ ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಕಾರ್ಯಕ್ರಮದ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ದೀಪಿಕಾ ಪಡುಕೋಣೆ (Deepika Padukone) ಫಿನಾಲೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೀಗ ಶೋನ ಪ್ರೋಮೋದಲ್ಲಿ ದೀಪಿಕಾಗೆ ಸಲ್ಮಾನ್ ಹೊಸ ಹೆಸರನ್ನಿಟ್ಟಿದ್ದು, ವೀಕ್ಷಕರ ಮುಖದಲ್ಲಿ ನಗು ಮೂಡಲು ಕಾರಣವಾಗಿದೆ. ಅಷ್ಟಕ್ಕೂ ದೀಪಿಕಾ ಪಡುಕೋಣೆ ಎಂಬ ಹೆಸರಿನ ಬದಲಾಗಿ ಸಲ್ಮಾನ್ ಇಟ್ಟ ಹೆಸರೇನು? ಇಲ್ಲಿದೆ ಕುತೂಹಲಕರ ಮಾಹಿತಿ.

ಪ್ರೋಮೋನಲ್ಲಿ ತೋರಿಸಲಾಗಿರುವಂತೆ ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರನ್ನು ಸಲ್ಮಾನ್ ಪರಿಚಯಿಸಿಕೊಡುತ್ತಾ, ‘‘ದೀಪಿಕಾ ರಣವೀರ್ ಪಡುಕೋಣೆ ಸಿಂಗ್’ ಎಂದಿದ್ದಾರೆ. ದೀಪಿಕಾ ಪತಿ ರಣವೀರ್ ಅವರ ಸಂಪೂರ್ಣ ಹೆಸರನ್ನೂ ಸೇರಿಸಿ ಹೊಸ ಹೆಸರನ್ನು ಸಲ್ಮಾನ್ ಖಾನ್ ನಾಮನಕರಣ ಮಾಡಿದ್ದು, ದೀಪಿಕಾ ಮುಖದಲ್ಲೂ ನಗು ತರಿಸಿದೆ. ಅದಕ್ಕೆ ಅವರು ವಿಚಿತ್ರವಾಗಿ ಸಲ್ಮಾನ್ ಕಡೆಗೆ ನೋಡಿದ್ದಾರೆ. ಇದು ಶೋನಲ್ಲಿ ಮತ್ತಷ್ಟು ನಗು ಮೂಡಲು ಕಾರಣವಾಗಿದೆ.

ವಾಹಿನಿ ಹಂಚಿಕೊಂಡ ಪ್ರೋಮೋ ಇಲ್ಲಿದೆ:

View this post on Instagram

A post shared by ColorsTV (@colorstv)

ಬಿಗ್ ಬಾಸ್ ಫಿನಾಲೆ ಯಾವಾಗ?: ಇತ್ತೀಚೆಗೆ ವಾಹಿನಿ ಮತ್ತೊಂದು ಪ್ರೋಮೋ ಹಂಚಿಕೊಂಡಿತ್ತು. ಅದರಲ್ಲಿ ಈ ವಾರಾಂತ್ಯ ಅಂದರೆ ಜನವರಿ 29 ಹಾಗೂ 30ರಂದು ರಾತ್ರಿ 8 ಗಂಟೆಗೆ ಬಿಗ್ ಬಾಸ್ ಫಿನಾಲೆ ಪ್ರಸಾರವಾಗಲಿದೆ ಎಂದು ತಿಳಿಸಲಾಗಿತ್ತು. ದೀಪಿಕಾ ಪಡುಕೋಣೆಯಲ್ಲದೇ ಹಲವಾರು ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬಿಗ್ ಬಾಸ್ 15ರಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳೂ ಭಾಗವಹಿಸಲಿದ್ದಾರೆ.

ಅಂತಿಮ ಸುತ್ತಿಗೆ ಮನೆಯಲ್ಲಿ ಉಳಿದುಕೊಂಡಿರುವವರು ಯಾರೆಲ್ಲಾ? ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ, ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ರಾಖಿ ಸಾವಂತ್, ನಿಶಾಂತ್ ಭಟ್, ರಶ್ಮಿ ದೇಸಾಯಿ ಮತ್ತು ಪ್ರತೀಕ್ ಸೆಹಜ್ಪಾಲ್ ಉಳಿದುಕೊಂಡಿದ್ದು, ಫೈನಲ್​ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೊದಲು ಜನವರಿ ಮೊದಲ ಭಾಗದಲ್ಲಿ ಬಿಗ್​ ಬಾಸ್ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ವಾಹಿನಿಯು ಇದನ್ನು ಎರಡು ವಾರಗಳ ಕಾಲ ಮುಂದೂಡಿತ್ತು. ಆದರೆ ಬಿಗ್ ಬಾಸ್ ಫಿನಾಲೆ ಮುಂದೂಡಲು ಕಾರಣವನ್ನು ನಿರ್ಮಾಪಕರು ಅಥವಾ ವಾಹಿನಿ ನೀಡಿರದಿದ್ದರೂ, ಕೊರೊನಾ ಕಾರಣ ಸದ್ಯ ಹೊಸ ಶೋ ಪ್ರಾರಂಭಿಸುವುದು ಕಷ್ಟವಾದ್ದರಿಂದ ಬಿಗ್ ಬಾಸ್ ಮುಂದುವರೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮಮಗಳು ವರದಿ ಮಾಡಿದ್ದವು. ಅಂತಿಮವಾಗಿ ಈ ವಾರ ಫಿನಾಲೆ ನಡೆಯಲಿದೆ.

ಇದನ್ನೂ ಓದಿ:

Sonu Nigam: ಖ್ಯಾತ ಗಾಯಕ ಸೋನು ನಿಗಮ್​ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ

ಈ ವರ್ಷ ಮದುವೆಯಾಗುತ್ತೇನೆ ಎಂದ ಶಮಿತಾ; ಆದರೆ ಹುಡುಗ ಯಾರು ಎಂಬುದೇ ಅನುಮಾನವಂತೆ!

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್