- TV9 Kannada Kannada News Photos Anushree Birthday Anchor Anushree without makeup and Beautiful photos
Anushree Birthday: ಆ್ಯಂಕರ್ ಅನುಶ್ರೀಗೆ ಜನ್ಮದಿನ; ಮೇಕಪ್ ಇಲ್ಲದೆಯೂ ಇಷ್ಟವಾಗುತ್ತಾರೆ ಇವರು, ಇಲ್ಲಿವೆ ಫೋಟೋಗಳು
ಅನುಶ್ರೀ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರಿದೆ. ಜೀ ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಿಗೆ ಇವರೇ ಆ್ಯಂಕರ್. ಅನುಶ್ರೀ ಆ್ಯಂಕರಿಂಗ್ಅನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.
Updated on: Jan 25, 2022 | 12:09 PM

ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಅವರದ್ದು ದೊಡ್ಡ ಹೆಸರು. ಅವರ ಆ್ಯಂಕರಿಂಗ್ಗೆ ಫಿದಾ ಆಗದೇ ಇದ್ದವರೇ ಇಲ್ಲ. ಅವರ ಮಾತಿನಲ್ಲಿ ಪಳಗಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಆ್ಯಂಕರ್ ಅನುಶ್ರೀಗೆ ಇಂದು (ಜನವರಿ 25) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಅನುಶ್ರೀಗೆ ಶುಭಾಶಯ ತಿಳಿಸುತ್ತಿದ್ದಾರೆ.

ಅನುಶ್ರೀ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರಿದೆ. ಜೀ ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಿಗೆ ಇವರೇ ಆ್ಯಂಕರ್. ಅನುಶ್ರೀ ಆ್ಯಂಕರಿಂಗ್ಅನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ. ಹೀಗಾಗಿ, ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.

ಇನ್ಸ್ಟಾಗ್ರಾಮ್ನಲ್ಲಿ ಅನುಶ್ರೀ ಅವರನ್ನು ಬರೋಬ್ಬರಿ 18 ಲಕ್ಷ ಮಂದಿ ಹಿಂಬಾಲಿಸುತ್ತಾರೆ. ದಿನ ಕಳೆದಂತೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಜೀ ಕನ್ನಡದ ‘ಸರಿಗಮಪ..’ ಸೇರಿ ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರದ್ದು.

ಮೇಕಪ್ ಇಲ್ಲದೆಯೂ ಅನುಶ್ರೀ ಅವರು ಸುಂದರವಾಗಿ ಕಾಣಿಸುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಮೇಕಪ್ ಇಲ್ಲದೆ ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಅನುಶ್ರೀ ಅವರು ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ದೊಡ್ಡದೊಡ್ಡ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿ ಅದರಲ್ಲಿ ಪೋಸ್ಟ್ ಮಾಡುತ್ತಾರೆ. ಈ ಚಾನೆಲ್ಗೆ ಲಕ್ಷಾಂತರ ಮಂದಿ ಸಬ್ಸ್ಕ್ರೈಬರ್ ಇದ್ದಾರೆ.

ಆ್ಯಂಕರ್ ಅನುಶ್ರೀ

ಆ್ಯಂಕರ್ ಅನುಶ್ರೀ

TV9 Kannada
Read More



