‘ಜೇಮ್ಸ್’ ರಿಲೀಸ್ ಡೇಟ್ ಬಗ್ಗೆ ಇದ್ದ ಅನುಮಾನಗಳು ಕ್ಲಿಯರ್; ನಿರ್ಮಾಪಕರು ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ

James | Puneeth Rajkumar: ಪುನೀತ್ ರಾಜ್​ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ರಿಲೀಸ್ ಡೇಟ್ ಬಗ್ಗೆ ಇದ್ದ ಅನುಮಾನಗಳನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಬಗೆಹರಿಸಿದ್ದಾರೆ. ಈ ಕುರಿತು ಟಿವಿ9ನೊಂದಿಗೆ ಅವರು ಮಾತನಾಡಿದ್ದಾರೆ.

‘ಜೇಮ್ಸ್’ ರಿಲೀಸ್ ಡೇಟ್ ಬಗ್ಗೆ ಇದ್ದ ಅನುಮಾನಗಳು ಕ್ಲಿಯರ್; ನಿರ್ಮಾಪಕರು ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ
ಜೇಮ್ಸ್ ಚಿತ್ರದ ಪೋಸ್ಟರ್ (ಎಡ), ನಿರ್ಮಾಪಕ ಕಿಶೋರ್ ಪತ್ತಿಕೊಂಡ (ಬಲ)
Follow us
TV9 Web
| Updated By: shivaprasad.hs

Updated on: Jan 26, 2022 | 8:14 PM

ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ಕೊನೆಯ ಚಿತ್ರವಾದ ‘ಜೇಮ್ಸ್​​’ನ (James) ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಯೋಧನ ಲುಕ್​ನಲ್ಲಿ ಕಾಣಿಸಿಕೊಂಡಿರುವ ಪುನೀತ್​ ಪೋಸ್ಟರ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿ ವಲಯದಲ್ಲಿ ಜೇಮ್ಸ್ ರಿಲೀಸ್ ಬಗ್ಗೆ ಪ್ರಶ್ನೆ ಮೂಡಿತ್ತು. ಅಲ್ಲದೇ ಪುನೀತ್ ಜನ್ಮದಿನವಾದ ಮಾರ್ಚ್ 17ರಂದೇ ಚಿತ್ರ ತೆರೆಕಾಣಿಸಬೇಕು ಹಾಗೂ ಅದನ್ನು ಅಂದು ಕಣ್ತುಂಬಿಕೊಳ್ಳಬೇಕು ಎಂಬುದು ಎಲ್ಲರ ಒತ್ತಾಸೆಯಾಗಿತ್ತು. ಆದರೆ ಈ ಕುರಿತು ಚಿತ್ರತಂಡ ಸೂಕ್ಷ್ಮವಾಗಿ ತಿಳಿಸಿದ್ದರೂ ಅಧಿಕೃತವಾಗಿ ತಿಳಿಸಿರಲಿಲ್ಲ. ಇದೀಗ ‘ಜೇಮ್ಸ್’ ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಟಿವಿ9 ಜತೆ ಮಾತನಾಡಿದ್ದು, ಚಿತ್ರದ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

‘ಜೇಮ್ಸ್​​’ಗೆ ಧ್ವನಿ ಯಾರದ್ದು?: ನಿರ್ಮಾಪಕ ಕಿಶೋರ್ ಪತ್ತಿಕೊಂಡ ಟಿವಿ9 ಜತೆ ಮಾತನಾಡಿ, ಪ್ರಸ್ತುತ ಜೇಮ್ಸ್​​ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಭರದಿಂದ ಸಾಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಚಿತ್ರಕ್ಕೆ ಯಾರ ಧ್ವನಿಯಿರುತ್ತದೆ ಎಂಬುದರ ಕುರಿತು ಮಾಹಿತಿ ನೀಡಿರುವ ಅವರು, ಹೈದರಾಬಾದ್, ಲಂಡನ್ ಸೇರಿದಂತೆ ಹಲವೆಡೆಯ ತಂತ್ರಜ್ಞರಲ್ಲಿಗೆ ಚಿತ್ರೀಕರಣದ ವೇಳೆ ಪುನೀತ್ ಧ್ವನಿ ನೀಡಿದ್ದನ್ನು ಕಳುಹಿಸಲಾಗಿದೆ. ಈಗ ತಂತ್ರಜ್ಞಾನ ಮುಂದುವರೆದಿದ್ದು, ಒಂದು ವೇಳೆ ಎಲ್ಲವೂ ಸರಿಯಾದರೆ ಚಿತ್ರಕ್ಕೆ ಪುನೀತ್ ಅವರ ಧ್ವನಿಯೇ ಇರಲಿದೆ ಎಂದಿದ್ದಾರೆ.

ಜೇಮ್ಸ್ ತೆರೆಗೆ ಯಾವಾಗ?: ಫೆಬ್ರವರಿ ಕೊನೆಯ ವೇಳೆಗೆಲ್ಲಾ ಚಿತ್ರದ ಕೆಲಸಗಳು ಮುಕ್ತಾಯವಾಗುತ್ತದೆ ಎಂದಿರುವ ನಿರ್ಮಾಪಕ ಕಿಶೋರ್, ಮಾರ್ಚ್​​ 17ಕ್ಕೆ ಚಿತ್ರವನ್ನು ತೆರೆಗೆ ತರಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದಿದ್ದಾರೆ. ಇದಕ್ಕೆ ಕಾರಣಗಳನ್ನೂ ವಿವರಿಸಿರುವ ಅವರು, ‘‘ಪುನೀತ್ ಅವರಿದ್ದಾಗಲೇ ಮಾರ್ಚ್ 17ಕ್ಕೆ ತೆರೆಗೆ ತರಲು ಮಾತುಕತೆ ಮಾಡಿದ್ದೆವು. ದೇವರ ದಯೆಯಿಂದ ಕೊವಿಡ್, ಕೊರೊನಾ ನಿಯಮಗಳು ಕಡಿಮೆಯಾದರೆ ಚಿತ್ರ ಮಾರ್ಚ್ 17ಕ್ಕೆ ತೆರೆಗೆ ಬರಲಿದೆ’’ ಎಂದಿದ್ದಾರೆ.

ಚಿತ್ರಮಂದಿರಗಳಲ್ಲಿ 50 ಪ್ರತಿಶತ ಅವಕಾಶವಿದ್ದರೂ ತೆರೆಗೆ ತರಲು ಸಿದ್ಧ ಎಂದೂ ಕಿಶೋರ್ ನುಡಿದಿದ್ದಾರೆ. ‘‘ಆದರೆ ಚಿತ್ರ ಪ್ರದರ್ಶಕರು ಪುನೀತ್ ಅವರ ಚಿತ್ರಕ್ಕೆ 100 ಪ್ರತಿಶತ ಅವಕಾಶವಿದ್ದಾಗಲೂ ಜನರನ್ನು ನಿಯಂತ್ರಿಸುವುದು ಕಷ್ಟ. 50 ಪ್ರತಿಶತವಿದ್ದಾಗ ಬಹಳ ಕಷ್ಟವಾಗುತ್ತದೆ. ಆದ್ದರಿಂದ ದಯವಿಟ್ಟು ನಿರ್ಧಾರವನ್ನು ಪರಾಮರ್ಶಿಸಿ ಎಂದು ಕೋರಿಕೊಂಡಿದ್ದಾರೆ. ಆದ್ದರಿಂದ ಈ ಕುರಿತು ಚಿಂತನೆ ನಡೆದಿದೆ’’ ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ. ಒಂದು ವೇಳೆ 100 ಪ್ರತಿಶತ ಅವಕಾಶ ಸಿಕ್ಕರೆ ಬಹಳ ಚೆನ್ನಾಗಿರುತ್ತದೆ ಎಂದು ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ.

ಆರ್​ಆರ್​ಆರ್​- ಜೇಮ್ಸ್ ರಿಲೀಸ್ ಬಗ್ಗೆ ಕಿಶೋರ್ ಹೇಳಿದ್ದೇನು?: ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಮಾರ್ಚ್ 18ರಂದು ತೆರೆಗೆ ಬರುವ ನಿರೀಕ್ಷೆ ಇದೆ. ‘ಜೇಮ್ಸ್’ ಮಾರ್ಚ್ 17ರಂದು ತೆರೆಗೆ ಬಂದರೆ ಸಮಸ್ಯೆಯಾಗಲಿದೆಯೇ ಎಂಬ ಪ್ರಶ್ನೆಗೆ ಕಿಶೋರ್ ಉತ್ತರಿಸಿದ್ದಾರೆ. ‘‘ನಾವು ಮೊದಲಿನಿಂದಲೂ ಈ ದಿನಾಂಕದ ಬಗ್ಗೆ ಯೋಚಿಸಿದ್ದೇವೆ. ರಾಜಮೌಳಿ ಅವರ ಬಳಿ ಒಮ್ಮೆ ಮಾತನಾಡಿ, ಪ್ರಯತ್ನಿಸುತ್ತೇನೆ. ಮುಂದೆ ನೋಡೋಣ’’ ಎಂದಿದ್ದಾರೆ.

ನಿರ್ಮಾಪಕರ ಮಾತಿನ ಮೂಲಕ ‘ಜೇಮ್ಸ್’ ಬಿಡುಗಡೆ ಕುರಿತು ಮೂಡಿದ್ದ ಗೊಂದಲಗಳು ನಿವಾರಣೆಯಾಗಿದೆ. ಕಿಶೋರ್ ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ