Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ

Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ
ಮೌನಿ ರಾಯ್, ಸೂರಜ್ ನಂಬಿಯಾರ್

Mouni Roy Haldi Ceremony | Suraj Nambiar: ಬಾಲಿವುಡ್ ಬೆಡಗಿ ಮೌನಿ ರಾಯ್ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮದ ಚಿತ್ರಗಳು ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

TV9kannada Web Team

| Edited By: shivaprasad.hs

Jan 26, 2022 | 7:31 PM

ಕೆಜಿಎಫ್​ 1ರ ‘ಗಲಿ ಗಲಿ’ ಹಾಡಿನಲ್ಲಿ ಸೊಂಟ ಬಳುಕಿಸಿ ಸಖತ್ ಸುದ್ದಿಯಾಗಿದ್ದ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ಸದ್ದಿಲ್ಲದೇ ಹಸೆಮಣೆ ಏರಲು ತಯಾರಾಗಿದ್ದಾರೆ. ಮದುವೆ ಶಾಸ್ತ್ರದ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿದ್ದು, ಸಿದ್ಧತೆಗಳು ನಡೆಯುತ್ತಿವೆ. ಗುರುವಾರ ನಡೆಯುವ ವಿವಾಹದಲ್ಲಿ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ಮೌನಿ ವರಿಸಲಿದ್ದಾರೆ. ಇಂದು ಅರಿಶಿನ ಶಾಸ್ತ್ರ ನೆರವೇರಿದ್ದು, ಅದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಮೌನಿ ಅಥವಾ ಸೂರಜ್ (Suraj Nambiar) ಅಧಿಕೃತವಾಗಿ ಚಿತ್ರಗಳನ್ನುನ ಹಂಚಿಕೊಂಡಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರರು ಹಂಚಿಕೊಂಡಿದ್ದ ಚಿತ್ರಗಳು ಮೌನಿ ಅಭಿಮಾನಿ ಬಳಗಕ್ಕೆ ಲಭ್ಯವಾಗಿದ್ದು, ಸದ್ಯ ಸಖತ್ ಸದ್ದು ಮಾಡುತ್ತಿದೆ. ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರದ ಚಿತ್ರಗಳು ಹಾಗೂ ವಿಡಿಯೋಗಳು ಲಭ್ಯವಾಗಿವೆ.

ಅರಿಶಿನ ಶಾಸ್ತ್ರದಲ್ಲಿ ಮೌನಿ ಬಿಳಿ ಬಣ್ಣದ ದಿರಿಸು ಧರಿಸಿ ಮಿಂಚಿದ್ದು, ಸೂರಜ್ ಕೂಡ ಮ್ಯಾಚಿಂಗ್ ಉಡುಗೆಯ ಮೂಲಕ ಮಿಂಚಿದ್ದಾರೆ. ಈ ಸಂದರ್ಭದ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.

View this post on Instagram

A post shared by @mounixworld

View this post on Instagram

A post shared by @mounixworld

ಮೌನಿ ಹಾಗೂ ಸೂರಜ್ ಜತೆಯಾಗಿ ಸುತ್ತಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು. ಇತ್ತೀಚೆಗಷ್ಟೇ ಪಾಪರಾಜಿಗಳು ಮೌನಿಗೆ ಅಭಿನಂದನೆ ಸಲ್ಲಿಸಿದ್ದಾಗ ಮೌನಿ ಧನ್ಯವಾದ ಎಂದಷ್ಟೇ ಹೇಳಿದ್ದರು. ಮದುವೆಯ ಕುರಿತು ಯಾವುದೇ ಮಾಹಿತಿ ತಿಳಿಸಿರಲಿಲ್ಲ. ಅದಾಗ್ಯೂ ಅವರ ಮದುವೆ ಜನವರಿ ಅಂತ್ಯಕ್ಕೆ ನಡೆಯಲಿದೆ ಎಂದು ಬಿಟೌನ್​ನಲ್ಲಿ ಸುದ್ದಿಯಾಗಿತ್ತು. ಇದೀಗ ಬಂದಿರುವ ಮಾಹಿತಿಯಂತೆ ಗುರುವಾರ ಅಂದರೆ 28ರಂದು ವಿವಾಹ ಸಮಾರಂಭ ನಡೆಯಲಿದೆ ಎಂದು ಎನ್ನಲಾಗಿದೆ.

ಮೌನಿ ಗೆಳೆಯ ಸೂರಜ್ ನಂಬಿಯಾರ್ ಯಾರು? ಮೌನಿ ಗೆಳೆಯ ಸೂರಜ್ ಯಾರು ಎಂಬುದು ಅಭಿಮಾನಿಗಳಿಗೆ ಕುತೂಹಲ ಹುಟ್ಟುಹಾಕಿತ್ತು. ವಾಸ್ತವವಾಗಿ ಅವರ ಬಗ್ಗೆ ಯಾರಿಗೂ ಹೆಚ್ಚಿನ ವಿವರಗಳು ತಿಳಿದಿಲ್ಲ. ಅವರೊಬ್ಬ ಉದ್ಯಮಿ ಎಂಬುದಷ್ಟೇ ಎಲ್ಲರಿಗೂ ತಿಳಿದಿರುವ ವಿಚಾರ. ಮೌನಿಯಾಗಲಿ, ಸೂರಜ್ ಆಗಲಿ ಪರಸ್ಪರ ಜತೆಗಿರುವ ಚಿತ್ರಗಳನ್ನು ಹಂಚಿಕೊಂಡಿಲ್ಲ. ವಿವಾಹದ ನಂತರವಾದರೂ ಮೌನಿ ಪತಿಯ ಬಗ್ಗೆ ಗುಟ್ಟು ಬಿಟ್ಟುಕೊಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಮೌನಿ ರಾಯ್ ಅಪಾರ ಖ್ಯಾತಿ ಗಳಿಸಿದ್ದು ಕಿರುತೆರೆಯ ‘ನಾಗಿನ್’ ಧಾರವಾಹಿಯ ಮೂಲಕ. ನಂತರದಲ್ಲಿ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಪ್ರಸ್ತುತ ‘ಬ್ರಹ್ಮಾಸ್ತ್ರ’ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ಅಮಿತಾಭ್ ಬಚ್ಚನ್ ಮೊದಲಾವದರು ಬಣ್ಣಹಚ್ಚುತ್ತಿರುವ ಈ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಖಳನಾಯಕಿಯಾಗಿ ಮೌನಿ ಬಣ್ಣಹಚ್ಚುತ್ತಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.

ಇದನ್ನೂ ಓದಿ:

Deepika Padukone: ‘ಗೆಹರಾಯಿಯಾ’ ಚಿತ್ರದ ಪ್ರಚಾರದಲ್ಲಿ ಮಿಂಚಿದ ದೀಪಿಕಾ; ಫೋಟೋಗಳು ಇಲ್ಲಿವೆ

Janhvi Kapoor: ಬಾಲಿವುಡ್ ಕಡೆ ಮುಖಮಾಡಿದ ದಿನೇಶ್ ಕಾರ್ತಿಕ್; ಏನಿದು ಹೊಸ ಸಮಾಚಾರ?

Follow us on

Related Stories

Most Read Stories

Click on your DTH Provider to Add TV9 Kannada