Janhvi Kapoor: ಬಾಲಿವುಡ್ ಕಡೆ ಮುಖಮಾಡಿದ ದಿನೇಶ್ ಕಾರ್ತಿಕ್; ಏನಿದು ಹೊಸ ಸಮಾಚಾರ?

Dinesh Karthik | Mr and Mrs Mahi: ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ‘ಮಿಸ್ಟರ್ & ಮಿಸಸ್ ಮಹಿ’ ಚಿತ್ರ ನಿರ್ಮಾಣವಾಗುತ್ತಿದೆ. ಇದೀಗ ದಿನೇಶ್ ಕಾರ್ತಿಕ್ ಚಿತ್ರತಂಡದ ಜತೆ ಕಾಣಿಸಿಕೊಂಡಿದ್ದಾರೆ. ಕಾರಣವೇನು?

Janhvi Kapoor: ಬಾಲಿವುಡ್ ಕಡೆ ಮುಖಮಾಡಿದ ದಿನೇಶ್ ಕಾರ್ತಿಕ್; ಏನಿದು ಹೊಸ ಸಮಾಚಾರ?
ಜಾಹ್ನವಿ ಕಪೂರ್, ದಿನೇಶ್ ಕಾರ್ತಿಕ್ (Credits: Janhvi Kapoor/ Instagram)
Follow us
TV9 Web
| Updated By: shivaprasad.hs

Updated on: Jan 26, 2022 | 5:56 PM

ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ (Dharma Productions) ಕಳೆದ ವರ್ಷ ಕ್ರಿಕೆಟ್ ಕತಾ ವಸ್ತುವಿರುವ ಚಿತ್ರವೊಂದನ್ನು ಘೋಷಿಸಿತ್ತು. ಆ ಚಿತ್ರಕ್ಕೆ ಮಿಸ್ಟರ್ & ಮಿಸೆಸ್ ಮಹಿ (Mr and Mrs Mahi) ಎಂದು ಹೆಸರಿಡಲಾಗಿತ್ತು. ಬಾಲಿವುಡ್​ನಲ್ಲಿ ಭರವಸೆ ಮೂಡಿಸುತ್ತಿರುವ ನಟಿ ಜಾಹ್ನವಿ ಕಪೂರ್ (Janhvi Kapoor) ನಾಯಕಿಯಾಗಿ ಹಾಗೂ ರಾಜ್​ಕುಮಾರ್ ರಾವ್ ನಾಯಕನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನೂ ಘೋಷಿಸಲಾಗಿತ್ತು. ಇದೀಗ ಭಾರತ ಕ್ರಿಕೆಟ್ ತಾರೆ ದಿನೇಶ್ ಕಾರ್ತಿಕ್ (Dinesh Karthik) ಚಿತ್ರತಂಡ ಕೂಡಿಕೊಂಡಿದ್ದಾರೆ. ಅರೇ! ಅವರಿನ್ನೂ ವೃತ್ತಿಪರ ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವಾಗ ಬಾಲಿವುಡ್​ಗೂ ಕಾಲಿಟ್ಟರೇ ಎಂದು ಯೋಚಿಸಬೇಡಿ. ದಿನೇಶ್ ಚಿತ್ರತಂಡ ಸೇರಿಕೊಂಡಿದ್ದು ಕೋಚ್ ಆಗಿ. ಹೌದು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ದಿನೇಶ್ ಕಾರ್ತಿಕ್ ನಾಯಕಿ ಜಾಹ್ನವಿ ಕಪೂರ್​ಗೆ ಕ್ರಿಕೆಟ್ ಹೇಳಿಕೊಡಲು ಕೋಚ್ ಆಗಿ ಆಗಮಿಸಿದ್ದಾರೆ. ಈ ಚಿತ್ರಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಜಾಹ್ನವಿ, ‘ಕ್ರಿಕೆಟ್ ಕ್ಯಾಂಪ್’ ಎಂದು ಶೀರ್ಷಿಕೆ ನೀಡಿದ್ದಾರೆ. ಇದರಲ್ಲಿ ದಿನೇಶ್ ಕಾರ್ತಿಕ್ ಹಾಗೂ ನಿರ್ದೇಶಕ ಶರಣ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ ಕ್ರಿಕೆಟಿಗರಾದ ಅಭಿಷೇಕ್ ನಾಯರ್, ವಿಕ್ರಾಂತ್ ಎಲಿಗತಿ ಮತ್ತು ಹಲವರು ತಂಡದಲ್ಲಿದ್ದಾರೆ.

ಜಾಹ್ನವಿ ಕಪೂರ್ ಹಂಚಿಕೊಂಡ ಚಿತ್ರಗಳು ಇಲ್ಲಿವೆ:

ಕಾಮೆಂಟ್​ನಲ್ಲಿ ಹಲವು ಅಭಿಮಾನಿಗಳು ರಾಜ್​ಕುಮಾರ್ ರಾವ್ ಎಲ್ಲಿ ಎಂದು ಕೇಳಿದ್ದಾರೆ. ಈ ಕುರಿತು ಜಾಹ್ನವಿ ಅಥವಾ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಮಿಸ್ಟರ್ & ಮಿಸಸ್ ಮಹಿ’ ಚಿತ್ರ ರಾಜ್​ಕುಮಾರ್ ರಾವ್ ಹಾಗೂ ಜಾಹ್ನವಿ ಕಪೂರ್ ‘ರೂಹಿ’ ನಂತರ ಜತೆಯಾಗಿ ನಟಿಸುತ್ತಿರುವ ಚಿತ್ರ. ನಿರ್ದೇಶಕ ಶರಣ್ ಶರ್ಮಾ ಈಗಾಗಲೇ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಮೂಲಕ ಗುರುತಿಸಿಕೊಂಡಿದ್ದಾರೆ.

ಕಳೆದ ವರ್ಷ ಅನೌನ್ಸ್ ಆಗಿದ್ದ ಮಿಸ್ಟರ್ & ಮಿಸಸ್ ಮಹಿ: ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಕಳೆದ ವರ್ಷ ಅನೌನ್ಸ್ ಆಗಿತ್ತು. ಚಿತ್ರವನ್ನು ಅನೌನ್ಸ್ ಮಾಡಿದ್ದ ಚಿತ್ರತಂಡ 2022ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ ಎಂದೂ ಹೇಳಿಕೊಂಡಿತ್ತು. ಕ್ರಿಕೆಟ್ ಕುರಿತ ಕತೆ ಇದಾಗಿರಲಿದ್ದು, ನಾಯಕ- ನಾಯಕಿ ಒಂದೇ ಗುರಿಯೆಡೆಗೆ ಸಾಗುವ ಪಯಣವನ್ನು ಚಿತ್ರ ಕಟ್ಟಿಕೊಡಲಿದೆ. ಜಾಹ್ನವಿ ಮಹಿಮಾ ಪಾತ್ರದಲ್ಲಿ ಹಾಗೂ ರಾಜ್​ಕುಮಾರ್ ರಾವ್ ಮಹೇಂದ್ರ ಎಂಬ ಪಾತ್ರಗಳಲ್ಲಿ ಬಣ್ಣಹಚ್ಚಲಿದ್ದಾರೆ. ಈಗಾಗಲೇ ಚಿತ್ರತಂಡ ನಿರೀಕ್ಷೆ ಮೂಡಿಸಿದ್ದು, ಇದೀಗ ದಿನೇಶ್ ಕಾರ್ತಿಕ್ ಕಲಾವಿದರಿಗೆ ತರಬೇತಿ ನೀಡುತ್ತಿರುವುದು ಚಿತ್ರದ ಕುರಿತು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕಳೆದ ವರ್ಷ ಜಾಹ್ನವಿ ಹಂಚಿಕೊಂಡಿದ್ದ ಪೋಸ್ಟ್:

ಈ ಚಿತ್ರದ ಹೊರತಾಗಿ ಜಾಹ್ನವಿ ಕಪೂರ್ ‘ಮಿಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರವನ್ನು ಅವರ ತಂದೆ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಥ್ರಿಲ್ಲರ್ ಚಿತ್ರ ಇದಾಗಿದ್ದು, ಚಿತ್ರೀಕರಣ ಮುಕ್ತಾಯಗೊಂಡಿದೆ. ಮಾತುಕುಟ್ಟಿ ಕ್ಸೇವಿಯರ್ ನಿರ್ದೇಶನ ಮಾಡುತ್ತಿದ್ದು, ಮಲಯಾಳಂನ ‘ಹೆಲೆನ್’ ಚಿತ್ರದ ರಿಮೇಕ್ ಇದಾಗಿದೆ.

ಇದನ್ನೂ ಓದಿ:

Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ

ಮಿನ್ನಲ್​ ಮುರಳಿ ಚಿತ್ರದ ಹೀರೋನಂತೆ ರೆಡಿಯಾಗಿ ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ ವರ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ