AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸದಾಗಿ ಖರೀದಿಸಿದ ಹಿಟಾಚಿ ಕೆಟ್ಟುಹೋಯ್ತೆಂದು ಶೋರೂಮ್​ಗೇ ಬೀಗ ಹಾಕಿದ ಗ್ರಾಹಕ!

ತುಮಕೂರು, ಫೆಬ್ರವರಿ 10: ಹಿಟಾಚಿ ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಗ್ರಾಹಕನೊಬ್ಬ ಶೋರೂಂಗೆ ಬೀಗ ಹಾಕಿದ ಘಟನೆ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿಯ ಟಾಟಾ ಹಿಟಾಚಿ ಶೋರೂಂನಲ್ಲಿ ನಡೆದಿದೆ. ಬೆಳಗ್ಗೆ ಶೋರೂಮ್​ಗೆ ಬಂದ ಗ್ರಾಹಕ ಸಿಬ್ಬಂದಿಯನ್ನೆಲ್ಲ ಹೊರ ಕಳುಹಿಸಿ ಬೀಗ ಜಡಿದಿದ್ದಾರೆ.

Jagadisha B
| Edited By: |

Updated on:Feb 11, 2026 | 12:31 PM

Share
ಗುಬ್ಬಿ ಮೂಲದ ಗಿರೀಶ್ ಎಂಬವರು ಐದು ತಿಂಗಳ ಹಿಂದೆ ಸುಮಾರು 52 ಲಕ್ಷ ರೂಪಾಯಿ ನೀಡಿ ಹೊಸ ಹಿಟಾಚಿ ಖರೀದಿಸಿದ್ದರು. 7 ಲಕ್ಷ ರೂಪಾಯಿ ಡೌನ್ ಪೇಮೆಂಟ್ ನೀಡಿ, ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಕಟ್ಟುತ್ತಿದ್ದರು. ಆದರೆ ಯಂತ್ರ ಖರೀದಿಸಿದ ಮೂರೇ ತಿಂಗಳಲ್ಲಿ ದೋಷ ಕಾಣಿಸಿಕೊಂಡು ಕೆಲಸ ಮಾಡದೇ ನಿಂತಿದೆ ಎಂದು ಅವರು ಆರೋಪಿಸಿದ್ದಾರೆ.

1 / 6
ಯಂತ್ರದಲ್ಲಿ ಸಮಸ್ಯೆ ಉಂಟಾದ ಬಳಿಕ ಹಲವು ಬಾರಿ ಶೋರೂಂ ಹಾಗೂ ಕಂಪನಿಯನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅಲೆದಾಡಿದರೂ ಹಿಟಾಚಿ ಸರಿಪಡಿಸಲಾಗಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 / 6
ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲು ಗಿರೀಶ್ ಬೆಳಿಗ್ಗೆ ಶೋರೂಂಗೆ ಭೇಟಿ ನೀಡಿದರು. ಆದರೆ ತಕ್ಷಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಶೋರೂಂ ಬಾಗಿಲಿಗೆ ಹಿಟಾಚಿ ಯಂತ್ರವನ್ನು ಅಡ್ಡಲಾಗಿ ನಿಲ್ಲಿಸಿ ಗಮನ ಸೆಳೆದರು.

3 / 6
‘ಹಿಟಾಚಿ ಸರಿಪಡಿಸಿ ಕೊಡಬೇಕು, ಇಲ್ಲವಾದರೆ ನಾವು ಕಟ್ಟಿದ ಹಣವನ್ನು ವಾಪಸ್ ನೀಡಬೇಕು. ಯಂತ್ರ ಖರೀದಿ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇನೆ. ಕಂಪನಿ ಹೇಳುವುದೊಂದು, ಖರೀದಿಸಿದ ನಂತರ ಮಾಡುವುದೊಂದು’ ಎಂದು ಗಿರೀಶ್ ಆರೋಪಿಸಿದ್ದಾರೆ.

4 / 6
ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಗ್ರಾಹಕ ಶೋರೂಂಗೆ ಬೀಗ ಹಾಕಿರುವುದನ್ನು ನೋಡಲು ಜನ ಆಗಮಿಸುತ್ತಿದ್ದಾರೆ. ಈ ಬಗ್ಗೆ ಶೋರೂಂ ಹಾಗೂ ಟಾಟಾ ಕಂಪನಿ ಇನ್ನಷ್ಟೇ ಅಧಿಕೃತ ಪ್ರತಿಕ್ರಿಯೆ ನೀಡಬೇಕಿದೆ.

5 / 6
ಮತ್ತೊಂದೆಡೆ, ಶೋರೂಮ್​ಗೇ ಬೀಗ ಜಡಿದು ಪ್ರತಿಭಟಿಸಿದರೂ ಕಂಪನಿ ಸ್ಪಂದಿಸಿಲ್ಲ ಎಂದು ಗ್ರಾಹಕ ಆರೋಪಿಸಿದ್ದಾರೆ. ಅಲ್ಲದೆ, ಶೋರೂಮ್ ಎದುರು ಶಾಮಿಯಾನ ಹಾಕಿಕೊಂಡು ಧರಣಿ ಕುಳಿತಿದ್ದಾರೆ. ಇದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಟಾಟಾ ಕಂಪನಿ ಹಾಗೂ ಗ್ರಾಹಕನ ನಡುವಣ ಸಂಘರ್ಷ ಮುಂದೆ ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.

6 / 6

Published On - 9:10 am, Tue, 10 February 26

Jagadisha B
Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು

'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ

ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ