AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಯುಕ್ತಿಕ ಸಾಲ ಪಡೆಯುವ ಪ್ಲ್ಯಾನ್ ನಲ್ಲಿದ್ದೀರಾ? ಹಾಗಾದ್ರೆ ನಿಮ್ಗೆ ಈ ವಿಚಾರ ತಿಳಿದಿರಲಿ

ತುರ್ತು ಹಣಕಾಸಿನ ಸಂದರ್ಭ ಎದುರಾದಾಗ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯತ್ತ ಸಾಲ ಪಡೆಯಲು ಆಸಕ್ತಿ ತೋರುತ್ತಾರೆ. ಹೌದು, ಸುಲಭವಾಗಿ ಸಿಗುವ ವೈಯುಕ್ತಿಕ ಸಾಲವನ್ನೇ ಹೆಚ್ಚಾಗಿ ಪಡೆಯುತ್ತಾರೆ. ಆದರೆ ಈ ವೈಯಕ್ತಿಕ ಸಾಲವು ಯಾವುದೇ ಭದ್ರತೆಯಿಲ್ಲದೆ ನೀಡುವ ಅಸುರಕ್ಷಿತ ಸಾಲವಾಗಿದೆ. ಹೀಗಾಗಿ ನೀವು ಸಾಲ ಪಡೆದುಕೊಳ್ಳುವ ಮುನ್ನ ಬಡ್ಡಿದರ, ಅವಧಿ, ಮರುಪಾವತಿ ಮೊತ್ತ ಈ ಎಲ್ಲವನ್ನು ಗಮನಿಸುವುದು ಸೂಕ್ತ. ಇದು ನಿಮಗೆ ಆರ್ಥಿಕ ಹೊರೆಯನ್ನು ಉಂಟು ಮಾಡುವುದಿಲ್ಲ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವೈಯುಕ್ತಿಕ ಸಾಲ ಪಡೆಯುವ ಪ್ಲ್ಯಾನ್ ನಲ್ಲಿದ್ದೀರಾ? ಹಾಗಾದ್ರೆ ನಿಮ್ಗೆ ಈ ವಿಚಾರ ತಿಳಿದಿರಲಿ
ಬ್ಯಾಂಕ್‌ ಸಾಲImage Credit source: Getty Images
ಸಾಯಿನಂದಾ
|

Updated on:Jul 21, 2026 | 5:45 PM

Share

ಮುಖ್ಯಾಂಶಗಳು

  • ಹೆಚ್ಚಿನವರು ಬ್ಯಾಂಕುಗಳಲ್ಲಿ ವೈಯುಕ್ತಿಕ ಸಾಲವನ್ನೇ ಪಡೆಯಲು ಮುಂದಾಗುತ್ತಾರೆ
  • ವೈಯುಕ್ತಿಕ ಸಾಲ ಪಡೆಯುವ ಮುನ್ನ ನೀವು ಬಡ್ಡಿದರ ತಿಳಿಯುವುದು ಸೂಕ್ತ
  • ಸಿಬಿಲ್ ಸ್ಕೂಲ್ 750 ಕ್ಕಿಂತ ಹೆಚ್ಚಿದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ.

ಹಣಕಾಸಿನ ಸಮಸ್ಯೆ (financial problem) ಎದುರಾದಾಗ ಸಾಲ ತೆಗೆದುಕೊಳ್ಳುವತ್ತ ಅಲೋಚಿಸುತ್ತಾರೆ. ಹೌದು, ಹೆಚ್ಚಿನವರು ಬ್ಯಾಂಕುಗಳಲ್ಲಿ ವೈಯುಕ್ತಿಕ ಸಾಲ ಪಡೆಯುತ್ತಾರೆ. ಆದರೆ ವೈಯುಕ್ತಿಕ ಸಾಲ (personal loan) ಪಡೆಯಲು ಮುನ್ನ ಇಎಂಐ, ಬಡ್ಡಿದರ, ಮರುಪಾವತಿ ಎಷ್ಟು ವರ್ಷ ಹೀಗೆ ಎಲ್ಲಾ ವಿಚಾರಗಳತ್ತ ಗಮನ ಹರಿಸುವುದು ಸೂಕ್ತ. ಇಲ್ಲದಿದ್ದರೆ ತೊಂದರೆ ಅನುಭವಿಸಬಹುದು ಹೆಚ್ಚಿನ ಬಡ್ಡಿಯಿಂದಾಗಿ ಸಂಕಷ್ಟಕ್ಕೆ ಈಡಾಗುವಿರಿ.

ವೈಯುಕ್ತಿಕ ಸಾಲ ಪಡೆಯುವ ಮುನ್ನ ಈ ವಿಷ್ಯಗಳು ತಿಳಿದಿರಲಿ

ತಿಂಗಳ ಇಎಂಐ ಮೊತ್ತ: ನೀವು ಪ್ರತಿ ತಿಂಗಳು ಕಟ್ಟುವ ಇಎಂಐ ಮೊತ್ತ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಸೂಕ್ತ. ಇದು ನಿಮ್ಮ ಒಟ್ಟು ಮಾಸಿಕ ಆದಾಯದ ಶೇ. 40% ರಷ್ಟು ಮೀರದಂತೆ ಇರಲಿ. ಇಲ್ಲದಿದ್ದರೆ ವೈಯುಕ್ತಿಕ ಸಾಲ ಆರ್ಥಿಕ ಹೊರೆಯಾಗಬಹುದು.

ಸಾಲದ ಅವಧಿ: ಸಾಲದ ಅವಧಿ ಎಷ್ಟಿದೆ ಎಂದು ನೋಡಿ. ಅವಧಿ ಹೆಚ್ಚಾದಂತೆ ಇಎಂಐ ಕಡಿಮೆಯಾಗುತ್ತದೆ. ಆದರೆ ಬಡ್ಡಿ ಹೆಚ್ಚಾಗುತ್ತದೆ. ಹೀಗಾಗಿ ಸಾಲದ ಅವಧಿ ಕಡಿಮೆ ತೆಗೆದುಕೊಂಡು ಇಎಂಐ ಮೊತ್ತ ಹೆಚ್ಚು ಪಾವತಿಸುವುದು ಸೂಕ್ತ.

ಬಡ್ಡಿದರ: ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚು. ಸಾಮಾನ್ಯವಾಗಿ ಈ ಸಾಲಗಳಲ್ಲಿ ಬಡ್ಡಿದರ 11% ರಿಂದ 23% ವರೆಗೆ ಇರುತ್ತದೆ. ಹೀಗಾಗಿ ನೀವು ವೈಯುಕ್ತಿಕ ಸಾಲ ಪಡೆಯುವಾಗ ಬಡ್ಡಿದರ ಎಷ್ಟಿದೆ ಎಂದು ವಿಚಾರಿಸಿಕೊಂಡೆ ಮುಂದಿನ ನಿರ್ಧಾರ ಕೈಗೊಳ್ಳಿ.

ಪ್ರೊಸೆಸಿಂಗ್ ಶುಲ್ಕ ಹಾಗೂ ಇತರ ಶುಲ್ಕಗಳು: ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ ಪ್ರೊಸೆಸಿಂಗ್ ಶುಲ್ಕ ಹಾಗೂ ಇತರ ಶುಲ್ಕಗಳನ್ನು ವಿಧಿಸುತ್ತವೆ. ಸಾಲ ತೆಗೆದುಕೊಳ್ಳುವ ಮೊದಲು, ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ ಹಾಗೂ ಇತರ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ. ಕಡಿಮೆ ಶುಲ್ಕ ವಿರುವ ಬ್ಯಾಂಕ್ ಗಳನ್ನೇ ಆಯ್ಕೆ ಮಾಡಿ.

ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿ. ಸಿಬಿಲ್ ಸ್ಕೂಲ್ 750 ಕ್ಕಿಂತ ಹೆಚ್ಚಿದ್ದರೆ ಕಡಿಮೆ ಬಡ್ಡಿದರದಲ್ಲಿ ಬಹುಬೇಗನೆ ಸಾಲ ದೊರೆಯುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ವೈಯುಕ್ತಿಕ ಸಾಲ ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಬಡ್ಡಿ ದರ ಹೆಚ್ಚಿದ್ದು, ಸಾಲದ ಹೊರೆ ಹೆಚ್ಚಾಗಬಹುದು.

ಇದನ್ನೂ ಓದಿ: Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ವೈಯುಕ್ತಿಕ ಸಾಲ ಪಡೆಯುವ ಮುನ್ನ ಏನೆಲ್ಲಾ ತಿಳಿದಿರಬೇಕು?

ಉತ್ತರ: ವೈಯುಕ್ತಿಕ ಸಾಲ ಪಡೆಯಲು ಮುನ್ನ ಬಡ್ಡಿದರ, ಕ್ರೆಡಿಟ್ ಸ್ಕೋರ್, ಸಾಲದ ಅವಧಿ, ಇತರ ಶುಲ್ಕಗಳ ಮಾಹಿತಿ ಪಡೆಯಿರಿ.

ಪ್ರಶ್ನೆ: ವೈಯುಕ್ತಿಕ ಸಾಲದಲ್ಲಿ ಎಷ್ಟು ಬಡ್ಡಿದರ ವಿಧಿಸಲಾಗುತ್ತದೆ?

ಉತ್ತರ: ವೈಯುಕ್ತಿಕ ಸಾಲಗಳಲ್ಲಿ ಬಡ್ಡಿದರ 11% ರಿಂದ 23% ವರೆಗೆ ಇರುತ್ತದೆ.

ಪ್ರಶ್ನೆ: ಸಿಬಿಲ್ ಸ್ಕೋರ್ ಎಷ್ಟಿದರೆ ಸಾಲದ ಮೇಲಿನ ಬಡ್ಡಿದರ ಕಡಿಮೆ?

ಉತ್ತರ: ಸಿಬಿಲ್ ಸ್ಕೂಲ್ 750 ಕ್ಕಿಂತ ಹೆಚ್ಚಿದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 21 July 26

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ