AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಒಂದೇ ಸಮಯದಲ್ಲಿ ಟೀಂ ಇಂಡಿಯಾಕ್ಕೆ 2 ಪಂದ್ಯಗಳು

ಸೆಪ್ಟೆಂಬರ್ 22 ರಂದು ಭಾರತೀಯ ಕ್ರಿಕೆಟ್ ಪ್ರಿಯರಿಗೆ ಡಬಲ್ ಧಮಾಕ. ಭಾರತ ಮಹಿಳಾ ತಂಡ ಶ್ರೀಲಂಕಾ ವಿರುದ್ಧ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯವಾಡಲಿದೆ. ಅದೇ ದಿನ, ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಪುರುಷರ ಟಿ20 ತಂಡ ಜಪಾನ್ ವಿರುದ್ಧ ಏಕೈಕ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸೋನಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು.

ಒಂದೇ ದಿನ ಒಂದೇ ಸಮಯದಲ್ಲಿ ಟೀಂ ಇಂಡಿಯಾಕ್ಕೆ 2 ಪಂದ್ಯಗಳು
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Sep 21, 2026 | 6:34 PM

Share

ಸೆಪ್ಟೆಂಬರ್ 22 ರ ಮಂಗಳವಾರದಂದು ಭಾರತದ ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಎರಡು ತಂಡಗಳು ಟಿ20 ಪಂದ್ಯಗಳನ್ನಾಡಲಿವೆ. ಒಂದೆಡೆ ಏಷ್ಯನ್ ಗೇಮ್ಸ್ ಕ್ರಿಕೆಟ್​ನಲ್ಲಿ ಭಾರತ ಮಹಿಳಾ ತಂಡ ಫೈನಲ್​ಗೇರಿದ್ದು, ಅಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡ ಜಪಾನ್ ತಂಡದ ವಿರುದ್ಧ ಏಕೈಕ ಟಿ20 ಪಂದ್ಯವನ್ನಾಡಲು ಸಜ್ಜಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಎರಡು ಪಂದ್ಯಗಳು ಒಂದೇ ಸಮಯದಲ್ಲಿ ನಡೆಯಲಿವೆ. ಮಹಿಳಾ ತಂಡದ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾದರೆ, ಇನ್ನೊಂದು ಪಂದ್ಯ ಒಂದು ಗಂಟೆ ಮುಂಚಿತವಾಗಿ ಆರಂಭವಾಗಲಿದೆ.

ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದ ವಿವರ ಇಂತಿದೆ

ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯನ್ ಗೇಮ್ಸ್ 2026 ರ ಫೈನಲ್ ಪಂದ್ಯ ಸೆಪ್ಟೆಂಬರ್ 22, ಮಂಗಳವಾರ ನಡೆಯಲಿದೆ. ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಪ್ರಾರಂಭವಾಗಲಿದೆ. ಈ ಫೈನಲ್ ಪಂದ್ಯವನ್ನು ನೀವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಗುಣಲನ್ ಕಮಲಿನಿ, ಹರ್ಮನ್‌ಪ್ರೀತ್ ಕೌರ್(ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಾಧಾ ಯಾದವ್.

ಶ್ರೀಲಂಕಾ ಮಹಿಳಾ ತಂಡ: ಚಾಮರಿ ಅಟಾಪಟು (ನಾಯಕ), ಕೌಶಾನಿ ನುತ್ಯಾಂಗನಾ (ವಿಕೆಟ್‌ಕೀಪರ್), ಇಮೇಶಾ ದುಲಾನಿ, ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಮಿಥಾಲಿ ಅಯೋಧ್ಯಾ, ಕಾವ್ಯಾ ಕವಿಂದಿ, ಚಾಮುದಿ ಪ್ರಬೋದಾ, ಸುಗಂದಿಕಾ ಕುಮಾರಿ, ರಶ್ಮಿಕಾ ಸೇವಂಡಿ, ನಿಮಾಶಾ ಮೀಪಗೆ, ಸಂಜನಾ ಕವಿಂದಿ, ಅನುಷ್ಕಾ ಸಂಜೀವನಿ.

ಭಾರತ- ಜಪಾನ್ ಏಕೈಕ ಟಿ20 ಪಂದ್ಯದ ಪೂರ್ಣ ವಿವರ ಇಲ್ಲಿದೆ

ಭಾರತ ಹಾಗೂ ಜಪಾನ್ ನಡುವಿನ ಏಕೈಕ ಟಿ20 ಪಂದ್ಯವು ಸೆಪ್ಟೆಂಬರ್ 22 ರ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದೆ. ಜಪಾನ್‌ನ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನು ಫ್ಯಾನ್‌ಕೋಡ್ ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಯಶ್ ಠಾಕೂರ್, ವಿಪ್ರಾಜ್ ನಿಗಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ