AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್ ಉದ್ಯೋಗಿಗಳ ಮುಷ್ಕರ: ಸೆಪ್ಟೆಂಬರ್ 26ರಿಂದ ಐದು ದಿನಗಳ ಕಾಲ ಬ್ಯಾಂಕುಗಳು ಬಂದ್

ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಉದ್ಯೋಗಿಗಳಿಂದ ಮುಷ್ಕರ ಇರುವುದರಿಂದ ಬ್ಯಾಂಕ್ ಕಚೇರಿ ಬಂದ್ ಆಗಿರುತ್ತದೆ. ಸೆಪ್ಟೆಂಬರ್ 26 ಮತ್ತು 27ರಂದು ಶನಿವಾರ ಹಾಗೂ ಭಾನುವಾರದ ರಜೆಗಳಿರುವುದರಿಂದ ಸತತ 5 ದಿನ ಬ್ಯಾಂಕುಗಳು ಬಾಗಿಲು ಹಾಕಿರುತ್ತವೆ. ಎಟಿಎಂ, ನೆಟ್​ಬ್ಯಾಂಕಿಂಗ್, ಯುಪಿಐ ಇತ್ಯಾದಿ ಸೇವೆ ಸದಾ ಲಭ್ಯ ಇರುತ್ತವೆ. ಬ್ಯಾಂಕ್ ಕಚೇರಿಗೆ ಹೋಗಲೇಬೇಕಾದ ಕೆಲಸ ಇದ್ದವರು ಮುಂಚಿತವಾಗಿಯೇ ಪ್ಲಾನ್ ಮಾಡಬೇಕಾಗುತ್ತದೆ.

ಬ್ಯಾಂಕ್ ಉದ್ಯೋಗಿಗಳ ಮುಷ್ಕರ: ಸೆಪ್ಟೆಂಬರ್ 26ರಿಂದ ಐದು ದಿನಗಳ ಕಾಲ ಬ್ಯಾಂಕುಗಳು ಬಂದ್
ಉದ್ಯೋಗ ಮತ್ತು ಶಿಕ್ಷಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2026 | 5:44 PM

Share

ನವದೆಹಲಿ, ಸೆಪ್ಟೆಂಬರ್ 21: ಈ ವಾರಾಂತ್ಯದಿಂದ ಶುರುವಾಗಿ ಮುಂದಿನ ಬುಧವಾರದವರೆಗೂ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ. ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತವೆ. ಹೀಗಾಗಿ, ಈ ವಾರ ತುರ್ತು ಬ್ಯಾಂಕ್ ಕೆಲಸ ಇರುವವರು ಮುಂಜಾಗ್ರತೆಯಾಗಿ ಶುಕ್ರವಾರದೊಳಗೆ ಮುಗಿಸಿಕೊಳ್ಳಬಹುದು. ಸೆಪ್ಟೆಂಬರ್ 28ರಂದ ಮೂರು ದಿನಗಳ ಕಾಲ ಬ್ಯಾಂಕ್ ಉದ್ಯೋಗಿಗಳ ಮುಷ್ಕರ (Bank Employees Strike) ಇರುವುದರಿಂದ ಮತ್ತು ಸೆಪ್ಟೆಂಬರ್ 26 ಮತ್ತು 27ರಂದು ಶನಿವಾರ, ಭಾನುವಾರವಾದ್ದರಿಂದ ರಜೆಗಳಿವೆ. ಹೀಗಾಗಿ, ಸತತ ಐದು ದಿನ ಬ್ಯಾಂಕ್ ಕಚೇರಿಗಳು ಬಾಗಿಲು ಬಂದ್ ಮಾಡಿರುತ್ತವೆ.

ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳ ಮಹಾ ಒಕ್ಕೂಟದಿಂದ ಸೆಪ್ಟೆಂಬರ್ 11ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆದಿತ್ತು. ಆದರೆ, ಉದ್ಯೋಗಿಗಳ ಬೇಡಿಕೆಗಳಿಗೆ ಸರ್ಕಾರದ ಸ್ಪಂದನೆ ಸಿಗದೇ ಹೋದ ಕಾರಣ, ಮೊದಲೇ ಯೋಜಿಸಿದಂತೆ ಸೆಪ್ಟೆಂಬರ್ 26, 27 ಮತ್ತು 28, ಈ ಮೂರು ದಿನಗಳಂದು ಮುಷ್ಕರ ನಡೆಸುವುದೆಂದು ಸಂಘಟನೆಗಳು ನಿರ್ಧರಿಸಿವೆ. ಒಂದು ವೇಳೆ, ಸರ್ಕಾರದಿಂದ ಸರಿಯಾದ ಸ್ಪಂದನೆ ಆಗಲೂ ಸಿಗದೇ ಹೋದಲ್ಲಿ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನಕ್ಕೆ ಬ್ಯಾಂಕ್ ಉದ್ಯೋಗಿಗಳು ಬಂದಿದ್ದಾರೆ.

ಇದನ್ನೂ ಓದಿ: Tech Tips: ವೈ-ಫೈ ಹಾಟ್‌ಸ್ಪಾಟ್ ಇಲ್ಲದಿದ್ದರೂ ಫೋನ್‌ನಿಂದ ಇಂಟರ್‌ನೆಟ್ ಹಂಚಿಕೊಳ್ಳಬಹುದು; ಹೇಗೆ ನೋಡಿ

ಭಾರತದ ನಂಬರ್ ಒನ್ ಬ್ಯಾಂಕ್ ಆಗಿರುವ ಎಸ್​ಬಿಐ ತನ್ನ ಗ್ರಾಹಕರಿಗೆ ಅಡ್ವೈಸರಿ ಬಿಡುಗಡೆ ಮಾಡಿದ್ದು, ಮುಷ್ಕರ ಆರಂಭವಾಗುವುದರೊಳಗೆ ಬ್ಯಾಂಕ್ ವಹಿವಾಟುಗಳ್ಯಾವುದಾದರೂ ಇದ್ದರೆ ಮುಗಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.

ಕಚೇರಿ ಮುಚ್ಚಿದ್ದರೂ ಈ ಬ್ಯಾಂಕಿಂಗ್ ಸೇವೆಗಳು ಲಭ್ಯ

  • ಕ್ಯಾಷ್ ಬೇಕೆಂದರೆ ಎಟಿಎಂ, ಎಡಿಡಬ್ಲ್ಯುಎಂಗಳನ್ನು ಬಳಸಬಹುದು. ಇವು 24 ಗಂಟೆಯೂ ತೆರೆದಿರುತ್ತವೆ.
  • ಕಸ್ಟಮರ್ ಸರ್ವಿಸ್ ಪಾಯಿಂಟ್​ಗಳನ್ನು ಬಳಸಬಹುದು.
  • ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಡಿಜಿಟಲ್ ಚಾನಲ್​ಗಳನ್ನು ಬಳಸಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಮೇಲಿನ ಸಲಹೆಗಳನ್ನು ತನ್ನ ಅಡ್ವೈಸರಿಯಲ್ಲಿ ನೀಡಿದೆ.

ಇದನ್ನೂ ಓದಿ: ಆಪಲ್​ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಎರಡು ತಿಂಗಳಲ್ಲಿ ಎರಡನೇ ಬಾರಿ ಲೇಆಫ್

ಯಾವ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿ?

ಚೆಕ್ ಡೆಪಾಸಿಟ್ ಮಾಡಲು, ಚೆಕ್ ಎನ್​ಕ್ಯಾಷ್ ಮಾಡಲು, ಆರ್​ಟಿಜಿಎಸ್ ಮಾಡಲು ಇತ್ಯಾದಿ ಬ್ಯಾಂಕಿಂಗ್ ಕೆಲಸಗಳಿಗೆ ಕಚೇರಿ ಹೋಗಲೇಬೇಕಾಗುತ್ತದೆ. ಇಂಥ ಕೆಲಸಗಳು ಆಗಬೇಕಿದ್ದವರು ಸೆಪ್ಟೆಂಬರ್ 25ರೊಳಗೆ ಅಥವಾ ಅಕ್ಟೋಬರ್ 1ರಿಂದ ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು