AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರ ಬೀಸಿ ಪುಂಡರ ಗ್ಯಾಂಗ್​​ ಎಸ್ಕೇಪ್​​: ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡಗಳ ರಚನೆ

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಮಾಸ್ಕ್ ಧರಿಸಿ ಬಂದ ಪುಂಡರ ಗ್ಯಾಂಗ್ ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಎಸ್ಕೇಪ್ ಆಗಿದ್ದು, ಆರೋಪಿಗಳ ಬಂಧನಕ್ಕೆ ಸುಬ್ರಮಣ್ಯಪುರ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅರಹಳ್ಳಿ ಆರ್ಚ್ ಸಮೀಪ ರಸ್ತೆ ಬದಿ ಹೋಟೇಲ್​​ನಲ್ಲಿ ಮೀನೂಟ ಸವಿಯುತ್ತಿದ್ದ ಗ್ರಾಹಕ ಸೇರಿದಂತೆ ಹೋಟೆಲ್​​ ಮಾಲೀಕರ ಕುಟುಂಬದ ಮೇಲೆ ದಾಳಿ ನಡೆಸಿರುವ ಗ್ಯಾಂಗ್​​, ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿಯೂ ಅಟ್ಟಹಾಸ ಮೆರೆದಿದೆ.

ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರ ಬೀಸಿ ಪುಂಡರ ಗ್ಯಾಂಗ್​​ ಎಸ್ಕೇಪ್​​: ಆರೋಪಿಗಳ ಪತ್ತೆಗಾಗಿ 3 ವಿಶೇಷ ತಂಡಗಳ ರಚನೆ
ಪೊಲೀಸರಿಂದ ಸ್ಥಳ ಪರಿಶೀಲನೆImage Credit source: Tv9 Kannada
ಶಿವಪ್ರಸಾದ್​ ಬಿ.
| Edited By: |

Updated on:Sep 21, 2026 | 6:25 PM

Share

ಬೆಂಗಳೂರು, ಸೆಪ್ಟೆಂಬರ್​​ 21: ಮಾಸ್ಕ್​​ ಧರಸಿ ಬಂದ ಪುಂಡರ ಗ್ಯಾಂಗ್​​ ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರ ಬೀಸಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಬೈಕ್​​ನಲ್ಲಿ ಬಂದ ಆರೋಪಿಗಳು ಉತ್ತರಹಳ್ಳಿಯ ಅರಹಳ್ಳಿ ಆರ್ಚ್ ಸಮೀಪ ರಸ್ತೆ ಬದಿ ಹೋಟೇಲ್​​ನಲ್ಲಿ ಮೀನೂಟ ಸವಿಯುತ್ತಿದ್ದ ಗ್ರಾಹಕ ಸೇರಿದಂತೆ ಫಿಶ್​​ ಫ್ರೈ ಮಾಡುತ್ತಿದ್ದ ಮಾಲೀಕ ಮಣಿ, ಅವರ ಹೆಂಡತಿ ಮತ್ತು ಮಗ ರವಿ ಎಂಬಾತನ ಮೇಲೆ ಅಟ್ಯಾಕ್​​ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.

ಇಷ್ಟು ಮಾತ್ರವಲ್ಲದೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿಯೂ ಆರೋಪಿಗಳು ಪುಂಡಾಟ ಮೆರೆದಿದ್ದು, ಕಿರಣ್, ಶಿವು, ಕಿರಣ್ ಎಂಬ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಆಸ್ಪತ್ರೆ ಹಾಗೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸುಬ್ರಮಣ್ಯಪುರ ಪೊಲೀಸರು, ಈ ಪ್ರದೇಶಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಗಾಯಾಳುಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಲಾಗಿದ್ದು, ಅಟ್ಟಹಾಸ ಮೆರೆದ ದುಷ್ಕರ್ಮಿಗಳಿಗಾಗಿ ತಲಾಶ್​​ ಮುಂದುವರಿದಿದೆ.

LIVE TV

ಇದನ್ನೂ ಓದಿ: ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ಟಿಟಿ ವಾಹನ ಅಪಘಾತ: ಓರ್ವ ಸಾವು, ಐವರಿಗೆ ಗಾಯ!

ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳ ರಚನೆ

ಘಟನೆಗಳನ್ನು ದೃಢಪಡಿಸಿದ ನೈಋತ್ಯ ವಿಭಾಗದ ಡಿಸಿಪಿ ಡಾ. ಸೌಮ್ಯಲತಾ ಅವರು, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ನಾಲ್ವರು ಶಂಕಿತರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:24 pm, Mon, 21 September 26

Follow Us