Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್ಲೈನ್ನಲ್ಲೇ ಪರಿಶೀಲಿಸಿ
How to verify authenticity of Income Tax notice: ಐಟಿಆರ್ನಲ್ಲಿ ನೀವು ಸಲ್ಲಿಸಿದ ಆದಾಯ ತೆರಿಗೆ ವಿವರಕ್ಕೂ, ನಿಮ್ಮ ನಿಜ ಆದಾಯ ಗಳಿಕೆಗೂ ಬಹಳಷ್ಟು ಅಂತರ ಇದ್ದರೆ ಇಲಾಖೆಯಿಂದ ನೋಟೀಸ್ ಬರುತ್ತದೆ. ವಂಚಕರು ಈ ಸಂದರ್ಭದಲ್ಲಿ ಸುಳ್ಳು ನೋಟೀಸ್ ನೀಡಿ ಜನರನ್ನು ಯಾಮಾರಿಸಲು ಯತ್ನಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ಕಮ್ ಟ್ಯಾಕ್ಸ್ ನೋಟೀಸ್ ಇಲಾಖೆಯಿಂದಲೇ ಬಂದಿದ್ದಾ ಎಂದು ಆನ್ಲೈನ್ನಲ್ಲೇ ಪರಿಶೀಲಿಸಬಹುದು.

ನವದೆಹಲಿ, ಜುಲೈ 21: ಆದಾಯ ತೆರಿಗೆ ರಿಟರ್ನ್ಸ್ (ITR- Income Tax Returns) ಸಲ್ಲಿಸುವ ಸೀಸನ್ ಇದು. ಐಟಿಆರ್ ಸಲ್ಲಿಕೆ, ಅಧಿಕಾರಿಗಳಿಂದ ಪರಿಶೀಲನೆ, ರೀಫಂಡ್ ಇತ್ಯಾದಿ ಪ್ರಕ್ರಿಯೆಗಳು ಚಾಲೂ ಇವೆ. ಐಟಿ ರಿಟರ್ನ್ಸ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಸಮಯದಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ನೋಟೀಸ್ ಬಂದರೆ ಆತಂಕಪಡುವುದು ಸಹಜ. ಇದನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ನೋಟೀಸ್‌ಗಳನ್ನು ಕಳುಹಿಸಿ ಹಣ ಅಥವಾ ಓಟಿಪಿ (OTP), ಬ್ಯಾಂಕ್ ವಿವರಗಳನ್ನು ಕದಿಯಲು ಯತ್ನಿಸುತ್ತಾರೆ. ಆದ್ದರಿಂದ, ಯಾವುದೇ ನೋಟೀಸ್‌ಗೆ ಪ್ರತಿಕ್ರಿಯಿಸುವ ಅಥವಾ ಹಣ ಪಾವತಿಸುವ ಮೊದಲು ಅದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ನೋಟೀಸ್ನಲ್ಲಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ ಇದೆಯಾ?
2019ರ ಅಕ್ಟೋಬರ್ನಿಂದ ಜಾರಿಗೆ ಬಂದ ನಿಯಮದಂತೆ, ಆದಾಯ ತೆರಿಗೆ ಇಲಾಖೆಯು ನೀಡುವ ಪ್ರತಿಯೊಂದು ಅಧಿಕೃತ ನೋಟೀಸ್ ಅಥವಾ ಪತ್ರವು ಪ್ರತ್ಯೇಕ DIN (Document Identification Number) ಅನ್ನು ಹೊಂದಿರುತ್ತದೆ. DIN ಇಲ್ಲದ ಯಾವುದೇ ನೋಟೀಸ್ ಅಸಿಂಧುವಾಗಿರುತ್ತದೆ. ಸುಳ್ಳು ಡಿಐಎನ್ ಹಾಕಿದ್ದರೆ ಏನು ಮಾಡಬೇಕು? ಅದರ ಕ್ರಮ ಇಲ್ಲಿ ಕೆಳಕಂಡಂತೆ ಇರುತ್ತದೆ.
ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ
ಅಧಿಕೃತ ಪೋರ್ಟಲ್ ಮೂಲಕ ನೋಟೀಸ್ ಪರಿಶೀಲಿಸಿ
ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ (Income Tax e-filing portal) ಲಾಗ್-ಇನ್ ಆಗದೆಯೇ ನೋಟೀಸ್ ಪರಿಶೀಲಿಸಬಹುದು. ಪೋರ್ಟಲ್ನ ಮುಖ್ಯಪುಟಕ್ಕೆ ಹೋದರೆ ಅಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದಾಗ ಕ್ವಿಕ್ ಲಿಂಕ್ಸ್ ಭಾಗ ಸಿಗುತ್ತದೆ. ಅದರಲ್ಲಿ ‘Authenticate the Notice/order issued by ITD’ ಅನ್ನು ಕ್ಲಿಕ್ ಮಾಡಬೇಕು. ಇಲ್ಲಿ ಪೋರ್ಟಲ್‌ಗೆ ನೀವು ಲಾಗಿನ್ ಆಗುವ ಅವಶ್ಯಕತೆ ಇರುವುದಿಲ್ಲ.
ಈ ಹಂತದಲ್ಲಿ ನೋಟೀಸ್ನ ಅಧಿಕೃತತೆ ಪರಿಶೀಲಿಸುವ ಮುಂದಿನ ಪ್ರಕ್ರಿಯೆಗೆ ಎರಡು ಆಯ್ಕೆಗಳು ಇರುತ್ತವೆ. ಪ್ಯಾನ್ ಮೂಲಕ, ಮತ್ತು ಡಿಐಎನ್ ಮೂಲಕ ಪರಿಶೀಲನೆ ಮಾಡಬಹುದು. ಮೊಬೈಲ್ ನಂಬರ್ ನೀಡುವಾಗ ಇಫೈಲಿಂಗ್ಗೆ ನೊಂದಾಯಿತವಾದ ನಂಬರನ್ನೇ ನೀಡಬೇಕೆಂದಿಲ್ಲ. ನಿಮ್ಮ ಬಳಿ ಇರುವ ಯಾವುದೇ ಮೊಬೈಲ್ ನಂಬರ್ ಹಾಕಿ, ಅದರಿಂದ ಒಟಿಪಿ ಪಡೆದು ನಮೂದಿಸಿ ಈ ಕೆಲಸ ಮಾಡಬಹುದು. ನೋಟೀಸ್ ಪರಿಶೀಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಗೆ 15 ನಿಮಿಷಗಳ ಕಾಲಾವಧಿಯ OTP ಬರುತ್ತದೆ, ತಾಳ್ಮೆ ಇರಲಿ.
ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ನ ವಿಳಾಸ ಇಂತಿದೆ: www.incometax.gov.in/iec/foportal
ನೋಟೀಸ್ ಅಥೆಂಟಿಕೇಟ್ ಮಾಡಲು ನೇರ ಲಿಂಕ್: eportal.incometax.gov.in/iec/foservices/#/pre-login/authenticate-notice-issued-by-itd
ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು
ಸುರಕ್ಷತಾ ಸಲಹೆ: ಆದಾಯ ತೆರಿಗೆ ಇಲಾಖೆಯು ಎಂದಿಗೂ ಫೋನ್ ಕರೆ ಅಥವಾ ನಕಲಿ ಲಿಂಕ್‌ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ PIN, CVV ಅಥವಾ OTP ಯನ್ನು ಕೇಳುವುದಿಲ್ಲ. ಯಾವುದೇ ನಕಲಿ ಬೆದರಿಕೆಗಳಿಗೆ ಹೆದರದೆ ಅಧಿಕೃತ ಪೋರ್ಟಲ್‌ನಲ್ಲಷ್ಟೇ ಮಾಹಿತಿ ಪರಿಶೀಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




