AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

ನೀವು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳಲ್ಲಿನ ವಿಳಾಸ ಬದಲಾವಣೆ ಮಾಡಿಕೊಳ್ಳುತ್ತೀರಿ . ಆದರೆ ಈ ಜಾತಿ ಪ್ರಮಾಣ ಪತ್ರದಲ್ಲಿನ ನೇರ ತಿದ್ದುಪಡಿಗೆ ನೇರ ಅವಕಾಶವಿಲ್ಲ. ಹಾಗಾದ್ರೆ ವಿಳಾಸ ಬದಲಾವಣೆ ಹೇಗೆ ಮಾಡುವುದು? ಇದಕ್ಕೆ ಯಾವೆಲ್ಲಾ ದಾಖಲೆಗಳು ಅಗತ್ಯ ಎನ್ನುವ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Jul 20, 2026 | 6:49 PM

Share

ಮುಖ್ಯಾಂಶಗಳು

  • ನೀವು ನಿರ್ದಿಷ್ಟ ಜಾತಿಗೆ ಸೇರಿದ್ದೀರಿ ಎಂಬುವುದನ್ನು ದೃಢೀಕರಿಸುವ ಅಧಿಕೃತ ದಾಖಲೆ ಜಾತಿ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾವಣೆಗೆ ನೇರ ತಿದ್ದುಪಡಿ ಅವಕಾಶವಿಲ್ಲ.
  • ನಾಡಕಚೇರಿ, ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು

ನೀವು ನಿರ್ದಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ್ದೀರಿ ಎಂಬುದನ್ನು ದೃಢೀಕರಿಸುವ ಅಧಿಕೃತ ಸರ್ಕಾರಿ ದಾಖಲೆಯೇ ಈ ಜಾತಿ ಪ್ರಮಾಣ ಪತ್ರ (Caste certificate). ಹೌದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಮೀಸಲಾತಿ ಸೌಲಭ್ಯಗಳಿಗೆ ಸೇರಿದಂತೆ ಇನ್ನಿತ್ತರ ಕೆಲಸ ಕಾರ್ಯಗಳಿಗೆ ಈ ದಾಖಲೆ ನಿಮ್ಮ ಬಳಿ ಇರಲೇಬೇಕು. ಆದರೆ, ಈ ದಾಖಲೆಯಲ್ಲಿ ನೇರ ತಿದ್ದುಪಡಿ ಅವಕಾಶವಿಲ್ಲ, ಹೀಗಾಗಿ ಹೊಸ ವಿಳಾಸಕ್ಕೆ ಅನುಗುಣವಾಗಿ ನೀವು ಹೊಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ಹಳೆಯ ಪ್ರಮಾಣಪತ್ರದ ಜತೆಗೆ ವಿಳಾಸ ಬದಲಾವಣೆಯನ್ನು ದೃಢೀಕರಿಸುವ ಕಾನೂನು ಅಫಿಡವಿಟ್ ಮಾಡಿಸಬೇಕು.

ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಹೊಸ ವಿಳಾಸಕ್ಕೆ ಅನುಗುಣವಾಗಿ ಹೊಸ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ.

ಹಂತ 2: ಜಾತಿ ಪ್ರಮಾಣಪತ್ರ ವಿಳಾಸ ಬದಲಾಯಿಸುವಾಗ ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಹೊಸ ವಿಳಾಸವನ್ನು ಹೊಂದಿರುವ ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ನಿಮ್ಮ ಬಳಿಯಿರಲಿ.

ಹಂತ 3: ನೀವು ಸ್ಥಳಾಂತರಗೊಂಡಿದ್ದೀರಿ ಎಂಬುದನ್ನು ದೃಢೀಕರಿಸಲು, ನೋಟರಿ ಪಬ್ಲಿಕ್ ಮೂಲಕ ಮ್ಯಾಜಿಸ್ಟ್ರೇಟ್ ಅವರಿಂದ ಅಫಿಡವಿಟ್ ಮಾಡಿಸಿ.

ಹಂತ 4: ನಿಮ್ಮ ಬಳಿಯಿರುವ ಹಳೆಯ ಜಾತಿ ಪ್ರಮಾಣಪತ್ರಕ್ಕೆ ಈ ಅಫಿಡವಿಟ್ ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಅವಕಾಶವಿದೆಯೇ?

ಉತ್ತರ: ಈ ಜಾತಿ ಪ್ರಮಾಣ ಪತ್ರದ ದಾಖಲೆಯಲ್ಲಿನ ವಿಳಾಸ ಬದಲಾವಣೆಗೆ ನೇರ ತಿದ್ದುಪಡಿ ಅವಕಾಶವಿಲ್ಲ.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸುವುದು ಹೇಗೆ?

ಉತ್ತರ: ನಿಮ್ಮ ಹತ್ತಿರದ ನಾಡಕಚೇರಿ, ಗ್ರಾಮ ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ನಲ್ಲಿ ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾಯಿಸಬಹುದು.

ಪ್ರಶ್ನೆ: ಜಾತಿ ಪ್ರಮಾಣ ಪತ್ರದ ವಿಳಾಸ ಬದಲಾವಣೆಗೆ ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹಳೆಯ ಜಾತಿ ಪ್ರಮಾಣಪತ್ರದ ಮೂಲ ಪ್ರತಿ, ಆಧಾರ್ ಕಾರ್ಡ್ ಅಥವಾ ಇತರೆ ವಿಳಾಸದ ಪುರಾವೆ ಹಾಗೂ ಸ್ಥಳ ಬದಲಾವಣೆಯ ಕಾರಣವನ್ನು ತಿಳಿಸುವ ಸ್ವಯಂ ಘೋಷಣಾ ಪತ್ರ ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us