AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ದಿಢೀರ್ ಮಳೆರಾಯನ ಎಂಟ್ರಿ: ಸಂಜೆ ವೇಳೆ ರಸ್ತೆಗಿಳಿದ ವಾಹನ ಸವಾರರು ತತ್ತರ

ನ. 24ರಂದು ಬೆಂಗಳೂರಿನಲ್ಲಿ ದಿಢೀರ್ ಮಳೆ ಸುರಿದು, ಕಚೇರಿ ಮುಗಿಸಿ ಹೊರಟ ಸವಾರರಿಗೆ ತೊಂದರೆಯಾಯಿತು. ರಿಚ್ಮಂಡ್, ನಂಜಪ್ಪ ಸರ್ಕಲ್ ಸುತ್ತ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ (IMD) ಪ್ರಕಾರ, ದಕ್ಷಿಣ ಒಳನಾಡಿನ ಪ್ರಭಾವದಿಂದ ನವೆಂಬರ್ 25ರವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ವಾಹನ ಸವಾರರು ಎಚ್ಚರಿಕೆ ವಹಿಸಲು ಮತ್ತು ಮಳೆಗಾಲದ ಉಪಕರಣಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ದಿಢೀರ್ ಮಳೆರಾಯನ ಎಂಟ್ರಿ: ಸಂಜೆ ವೇಳೆ ರಸ್ತೆಗಿಳಿದ ವಾಹನ ಸವಾರರು ತತ್ತರ
ಬೆಂಗಳೂರಿನಲ್ಲಿ ಮಳೆ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Nov 24, 2026 | 4:23 PM

Share

ಬೆಂಗಳೂರು, ನ.24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಮಂಗಳವಾರ, ನವೆಂಬರ್ 24) ಸಂಜೆ ವೇಳೆಗೆ ದಿಢೀರ್ ಮಳೆರಾಯನ ಎಂಟ್ರಿಯಾಗಿದ್ದು, ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ವರುಣ ತಂಪೆರೆದಿದ್ದಾನೆ. ಇಂದು ಮುಂಜಾನೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಬೀಸುತ್ತಿತ್ತು. ಸಂಜೆಯಾಗುತ್ತಿದ್ದಂತೆಯೇ ದಟ್ಟ ಮೋಡಗಳು ಆವರಿಸಿ ಏಕಾಏಕಿ ಮಳೆ ಸುರಿಯಲು ಆರಂಭಿಸಿದೆ. ನಗರದ ಹೃದಯಭಾಗವಾದ ರಿಚ್ಮಂಡ್, ನಂಜಪ್ಪ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಸಂಜೆ ಕಚೇರಿ ಹಾಗೂ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಸವಾರರು ಮತ್ತು ದ್ವಿಚಕ್ರ ವಾಹನ ಸವಾರರು ಯಾವುದೇ ಮುನ್ಸೂಚನೆಯಿಲ್ಲದೆ ಸುರಿದ ದಿಢೀರ್ ಮಳೆಯಿಂದಾಗಿ ಕೆಲಕಾಲ ಪರದಾಡುವಂತಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಸವಾರರು ಮೆಟ್ರೋ ನಿಲ್ದಾಣಗಳು, ಫ್ಲೈಓವರ್ ಕೆಳಗೆ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು. ಪ್ರಮುಖ ಜಂಕ್ಷನ್‌ಗಳಲ್ಲಿ ಮಳೆಯಿಂದಾಗಿ ವಾಹನ ಸಂಚಾರ ಕೊಂಚ ನಿಧಾನಗತಿಯಲ್ಲಿ ಸಾಗಿದೆ.

ಇದನ್ನೂ ಓದಿ: ಹಾಸನ ಡಿಸಿ ಕಚೇರಿ ಲಂಚದ ವಾಟ್ಸಪ್ ಚಾಟ್ ಪ್ರಕರಣ: ಕೇಂದ್ರ ಸಚಿವ ಹೆಚ್​​​.ಡಿ. ಕುಮಾರಸ್ವಾಮಿಗೆ ಸೈಬರ್ ಕಮಾಂಡ್ ಸೆಂಟರ್‌ನಿಂದ ನೋಟಿಸ್ ಜಾರಿ

ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?

ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ದಕ್ಷಿಣ ಒಳನಾಡಿನ ಮೇಲೆ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ಪೂರ್ವ ಮಾರುತಗಳ ಪ್ರಭಾವದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಹಾಗೂ ನಾಳೆ (ನವೆಂಬರ್ 25) ಕೂಡ ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ನಗರದಲ್ಲಿ ಗರಿಷ್ಠ ತಾಪಮಾನ 29°C ಹಾಗೂ ಕನಿಷ್ಠ ತಾಪಮಾನ 18°C ಆಸುಪಾಸಿನಲ್ಲಿ ದಾಖಲಾಗುವ ನಿರೀಕ್ಷೆಯಿದ್ದು, ಮುಂಜಾನೆ ವೇಳೆ ಕೆಲವೆಡೆ ಮಂಜು ಕವಿದ ವಾತಾವರಣ ಇರಲಿದೆ. ಸಂಜೆ ಮತ್ತು ರಾತ್ರಿ ವೇಳೆ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ರೈನ್‌ಕೋಟ್ ಅಥವಾ ಛತ್ರಿ ಜೊತೆಯಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಅಂಬರೀಷ್ 8ನೇ ವರ್ಷದ ಪುಣ್ಯಸ್ಮರಣೆ; ಅಂಬಿ ಸಮಾಧಿಗೆ ವಿಶೇಷ ಪೂಜೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಆಟ ಶುರು; ಸ್ಪರ್ಧಿಗಳಿಗೆ ಶುರುವಾಗಿದೆ ಭಯ
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಆಟ ಶುರು; ಸ್ಪರ್ಧಿಗಳಿಗೆ ಶುರುವಾಗಿದೆ ಭಯ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ