AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ಗನ್​​ ಹಿಡಿದು ಕಾಂಗ್ರೆಸ್​​ ಮುಖಂಡನ ಡ್ಯಾನ್ಸ್​: ವಿಡಿಯೋ ವೈರಲ್​

ಮದುವೆಯಲ್ಲಿ ಗನ್​​ ಹಿಡಿದು ಕಾಂಗ್ರೆಸ್​​ ಮುಖಂಡನ ಡ್ಯಾನ್ಸ್​: ವಿಡಿಯೋ ವೈರಲ್​

ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Feb 10, 2026 | 12:50 PM

Share

ಅಫಜಲ್ಪುರ ಕಾಂಗ್ರೆಸ್ ನಾಯಕ ಮತಿನ್ ಅಹ್ಮದ್ ಪಟೇಲ್ ಅವರು ಕಲ್ಬುರ್ಗಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ದುರಂಧರ್ ಹಾಡಿಗೆ ಪಿಸ್ತೂಲ್ ಹಿಡಿದು ಹೆಜ್ಜೆ ಹಾಕಿದ್ದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಕಾನೂನುಬಾಹಿರವಾಗಿದ್ದು, ವೈರಲ್ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಿಸ್ತೂಲ್ ನೈಜತೆ ಮತ್ತು ಪರವಾನಿಗೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಕಲಬುರಗಿ, ಫೆಬ್ರವರಿ 10: ಮದುವೆ ಸಮಾರಂಭವೊಂದರಲ್ಲಿ ಅಫಜಲ್ಪುರ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಪಿಸ್ತೂಲ್ ಹಿಡಿದು ದುರಂಧರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಶಾಸಕ ಎಂ.ವೈ.ಪಾಟೀಲ್ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಮತಿನ್ ಪಟೇಲ್ ಅವರ ಈ ಶೋ ಆಫ್ ನಡೆ ಕಾನೂನುಬಾಹಿರ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಅಪರಾಧ. ಅದರಲ್ಲೂ ಮದುವೆ ಸಮಾರಂಭದಂತಹ ಜನಸಂದಣಿಯ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಬಿಲ್ಡಪ್ ನೀಡಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿ ಈ ಸಂಬಂಧ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಮತಿನ್ ಪಟೇಲ್ ಬಳಸಿದ ಪಿಸ್ತೂಲ್ ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ಹಾಗೂ ಅದಕ್ಕೆ ಪರವಾನಿಗೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.