AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ

‘ಪಾರ್ಟಿ ಮಾಡಬಹುದು ಅಂತ ನಾನು ಮದುವೆ ಆಗಿದ್ದೇನೆ. ನಾವು ಮೂರು ದಿನಕ್ಕೊಮ್ಮೆ ಪಾರ್ಟಿ ಮಾಡುತ್ತೇವೆ. ಒಟ್ಟಿನಲ್ಲಿ ನಾವು ದುಡ್ಡು ಖರ್ಚು ಮಾಡಬೇಕು’ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ.

‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ
ಅಂಕಿತಾ ಲೋಖಂಡೆ, ವಿಕ್ಕಿ ಜೈನ್​, ಸುಶಾಂತ್​ ಸಿಂಗ್​ ರಜಪೂತ್​
TV9 Web
| Edited By: |

Updated on: Jan 26, 2022 | 8:11 AM

Share

ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಹಲವು ಕಾರಣಗಳಿಂದಾಗಿ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಮಾಜಿ ಪ್ರೇಯಸಿ ಎಂಬ ಕಾರಣಕ್ಕೆ ಅವರ ಮೇಲೆ ನೆಟ್ಟಿಗರು ಹೆಚ್ಚಿನ ಗಮನ ಇಟ್ಟಿರುತ್ತಾರೆ. ಸುಶಾಂತ್​ ಮತ್ತು ಅಂಕಿತಾ ಸಂಬಂಧ ಬಹಳ ಹಿಂದೆಯೇ ಮುರಿದುಬಿದ್ದಿತ್ತು. ಆ ಬಳಿಕ ರಿಯಾ ಚಕ್ರವರ್ತಿ ಜೊತೆ ಸುಶಾಂತ್​ ಸುತ್ತಾಟ ಶುರುಮಾಡಿಕೊಂಡರೆ, ವಿಕ್ಕಿ​ ಜೈನ್​ (Vicky Jain) ಜೊತೆ ಅಂಕಿತಾಗೆ ಪ್ರೀತಿ ಚಿಗುರಿತು. ಹಲವು ವರ್ಷಗಳ ಕಾಲ ವಿಕ್ಕಿ ಜೈನ್​ ಮತ್ತು ಅಂಕಿತಾ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ ಡಿಸೆಂಬರ್​ನಲ್ಲಿ ಈ ಜೋಡಿ ಹಸೆಮಣೆ ಏರಿತು. ಮದುವೆ ಕುರಿತಂತೆ ಅಂಕಿತಾ ಈಗೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾವು ಮದುವೆ ಆಗಿದ್ದೇ ಪಾರ್ಟಿ ಮಾಡಿ ಹಣ ಖರ್ಚು ಮಾಡಲು ಎಂದು ಅವರು ಹೇಳಿದ್ದಾರೆ. ಮದುವೆ ಬಳಿಕ ನಟಿಯರ ಬದುಕು ಬದಲಾಗುತ್ತದೆ. ಕೆಲವರು ನಟನೆಯಿಂದ ದೂರ ಉಳಿದುಕೊಳ್ಳುತ್ತಾರೆ. ಆದರೆ ಅಂಕಿತಾ ಬದುಕಿನಲ್ಲಿ ಅಂಥ ಯಾವುದೇ ಬದಲಾವಣೆ ಆಗಿಲ್ಲ. ಆ ಕುರಿತು ಅವರು ಮಾತನಾಡಿದ್ದಾರೆ.

‘ಮದುವೆ ನಂತರ ನನ್ನ ಬದುಕಿನಲ್ಲಿ ಏನೂ ಬದಲಾಗಿಲ್ಲ. ನಾನು ಮತ್ತು ವಿಕ್ಕಿ ಜೈನ್​ ಹಲವು ವರ್ಷದಿಂದ ಫ್ರೆಂಡ್ಸ್​ ಆಗಿದ್ದೆವು. ತುಂಬ ಎಂಜಾಯ್​ ಮಾಡಿದ್ದೇವೆ. ನನ್ನ ಕಷ್ಟದ ಸಂದರ್ಭದಲ್ಲಿ ಬೆಂಬಲವಾಗಿ ನಿಂತವರೇ ವಿಕ್ಕಿ. ಅಂತಹ ಪಾರ್ಟ್ನರ್​ ಪಡೆಯಲು ನಾನು ಪುಣ್ಯ ಮಾಡಿದ್ದೆ. ಕೆಲಸ ಮಾಡಲು ಅವರು ಪ್ರೇರಣೆ ನೀಡುತ್ತಾರೆ’ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ.

‘ಪಾರ್ಟಿ ಮಾಡಬಹುದು ಅಂತ ನಾನು ಮದುವೆ ಆಗಿದ್ದೇನೆ. ನಾವು ಮೂರು ದಿನಕ್ಕೊಮ್ಮೆ ಪಾರ್ಟಿ ಮಾಡುತ್ತೇವೆ. ಒಟ್ಟಿನಲ್ಲಿ ನಾವು ದುಡ್ಡು ಖರ್ಚು ಮಾಡಬೇಕು. ಮದುವೆ ಬಳಿಕ ಏನೋ ಬದಲಾಗಿದೆ ಅಂತ ನನಗೆ ಅನಿಸುತ್ತಿಲ್ಲ. ಮದುವೆ ಆದ್ಮೇಲೆ ಯಾವ ರೀತಿ ಬದಲಾವಣೆ ಇರಬೇಕು ಅಂತ ಜನರ ಬಯಸುತ್ತಾರೋ ನನಗೆ ತಿಳಿದಿಲ್ಲ. ನಾನಂತೂ ಬದಲಾಗಿಲ್ಲ. ಕೆಲವರು ಮದುವೆಯನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತಾರೆ. ಅದೊಂದು ಜವಾಬ್ದಾರಿ ಅಲ್ಲ. ಮದುವೆ ಎಂದರೆ ಖುಷಿ. ನಾವಿಬ್ಬರು ಖುಷಿಯಾಗಿದ್ದೇವೆ. ಅದೇ ಮುಖ್ಯವಾಗೋದು’ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ. ಹಿಂದುಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ಅಂಕಿತಾ ಲೋಖಂಡೆ ಅವರಿಗೆ ಹೆಚ್ಚು ಬೇಡಿಕೆ ಇದೆ. ‘ಪವಿತ್ರ ರಿಶ್ತಾ’ ಸೀರಿಯಲ್​ನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ತೆರೆಹಂಚಿಕೊಳ್ಳುವ ಮೂಲಕ ಅವರು ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಆ ಜನಪ್ರಿಯ ಧಾರಾವಾಹಿ ಈಗ ವೆಬ್​ ಸಿರೀಸ್​ ರೂಪದಲ್ಲಿ ಸಿದ್ಧವಾಗಿದ್ದು ‘ಜೀ5’ ಮೂಲಕ ಶೀಘ್ರವೇ ಪ್ರಸಾರ ಆಗಲಿದೆ. ಈ ಬಾರಿ ಅಂಕಿತಾ ಪಾತ್ರದಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎನ್ನುವ ಮೂಲಕ ಅವರು ಕುತೂಹಲ ಮೂಡಿಸಿದ್ದಾರೆ.

ಇದನ್ನೂ ಓದಿ:

Ankita Lokhande: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಂಕಿತಾ- ವಿಕ್ಕಿ ಜೋಡಿ; ಮದುವೆಯ ಸುಂದರ ಚಿತ್ರಗಳು ಇಲ್ಲಿವೆ

Kangana Ranaut: ಅಂಕಿತಾ- ವಿಕ್ಕಿ ಕಲ್ಯಾಣ; ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಕಂಗನಾ- ಚಿತ್ರಗಳನ್ನು ನೋಡಿ