Ankita Lokhande: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಂಕಿತಾ- ವಿಕ್ಕಿ ಜೋಡಿ; ಮದುವೆಯ ಸುಂದರ ಚಿತ್ರಗಳು ಇಲ್ಲಿವೆ
Vicky Jain: ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಕಲ್ಯಾಣವು ಮಂಗಳವಾರ ನೆರವೇರಿದೆ. ವಿಶೇಷ ಸಂದರ್ಭದ ಚಿತ್ರಗಳು ಅಭಿಮಾನಿಗಳ ಮನಗೆದ್ದಿವೆ.
Dec 15, 2021 | 10:07 AM
ಖ್ಯಾತ ಕಿರುತೆರೆ ತಾರೆ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಕಲ್ಯಾಣವು ಆಪ್ತರ ಸಮ್ಮುಖದಲ್ಲಿ ಮಂಗಳವಾರ ನೆರವೇರಿದೆ.
ದೀರ್ಘಕಾಲದಿಂದ ಜೊತೆಗೆ ಸುತ್ತಾಡಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮದುವೆಯ ಸಂದರ್ಭದ ಚಿತ್ರಗಳು ಅಭಿಮಾನಿಗಳ ಮನಗೆದ್ದಿದ್ದು, ಶುಭಾಶಯಗಳನ್ನು ತಿಳಿಸಿದ್ದಾರೆ.
ಅಂಕಿತಾ ಮದುವೆಗೆ ಸಖತ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಈ ಸಂದರ್ಭದ ಫೋಟೋ ಇಲ್ಲಿದೆ.
ಮದುವೆಯ ಸಂದರ್ಭದಲ್ಲಿ ಕಿರುತೆರೆ ಹಾಗೂ ಬಾಲಿವುಡ್ನ ಕಲಾವಿದರು ಭಾಗಿಯಾಗಿದ್ದರು.
ಅಂಕಿತಾ ಮದುವೆಗೆ ನಟಿ ಕಂಗನಾ ರಣಾವತ್ ಕೂಡ ಆಗಮಿಸಿ ಗೆಳತಿಗೆ ಶುಭಕೋರಿದ್ದರು.