‘ಟಿಪ್ ಟಿಪ್ ಬರ್ಸ್ ಪಾನಿ,’ ಹಾಡಿನಲ್ಲಿ ರವೀನಾ ಮುಖದ ಮೇಲೆ ಕಂಡಿದ್ದ ಕಳೆ 25 ವರ್ಷಗಳ ನಂತರವೂ ಉಳಿದುಕೊಂಡಿದೆ!!

ರವೀನಾ ಧರಿಸಿರುವ ಕಪ್ಪು ಬಣ್ಣದ ಅನಾರ್ಕಲಿ ಸೂಟ್ ಸೆಟ್​ನ ಕುರ್ತಾ ಪೀಸಂಟ್ ತೋಳು, ಕನ್ನಡಿಗಳು ಮತ್ತು ನೊಗದ ಮೇಲೆ ವರ್ಣರಂಜಿತ ಎಳೆಗಳನ್ನು ಹೊಂದಿರುವ ಕಸೂತಿಯನ್ನು ಒಳಗೊಂಡಿದೆ. ತೋಳುಗಳ ಕಫ್​ಗಳು ಸಹ ಇದೇ ರೀತಿಯ ಕಸೂತಿಯನ್ನು ಪ್ರದರ್ಶಿಸುತ್ತವೆ. ಟಸೆಲ್‌ಗಳಿಂದ ನೇತಾಡುವ ಚಿಪ್ಪುಗಳು ಪೂರ್ಣ ಬೋಹೋ ವೈಬ್‌ಗಳನ್ನು ನೀಡುತ್ತವೆ.

TV9kannada Web Team

| Edited By: shivaprasad.hs

Jan 21, 2022 | 7:06 AM

ತೊಂಬತ್ತರ ದಶಕದಲ್ಲಿ ಅತ್ಯಂತ ಹಾಟ್ ಎನಿಸಿಕೊಂಡಿದ್ದ ನಾಯಕಿಯರಲ್ಲಿ ರವಿನಾ ಟಂಡನ್ (Raveena Tandon) ಸಹ ಒಬ್ಬರು. ‘ಮೊಹ್ರಾ’ ಚಿತ್ರದಲ್ಲಿ ಅಕ್ಷಯ ಕುಮಾರ-ರವೀನಾ ಮೇಲೆ ಚಿತ್ರಿಸಿದ ಸೆನ್ಸುಯಲ್ ಹಾಡು ‘ಟಿಪ್ ಟಿಪ್ ಬರ್ಸಾ ಪಾನಿ…’ ಬಹಳಷ್ಟು ಜನರ ನಿದ್ದೆಗೆಡಿಸಿತ್ತು ಮಾರಾಯ್ರೇ…ವಯಸ್ಸು 47 ಆದರೂ ರವೀನಾ ಮುಖದ ಮೇಲೆ ಈಗಲೂ 25 ವರ್ಚಗಳ ಹಿಂದಿನ ಚಾರ್ಮ್ ಇದೆ. ರವಿವಾರದಂದು ಖ್ಯಾತ ನೃತ್ಯ ನಿರ್ದೇಶಕಿ ಮತ್ತು ನಿರ್ದೇಶಕಿ ಫರ್ಹಾ ಖಾನ್ (Farha Khan) ಜೊತೆ ಕಪಿಲ್ ಶರ್ಮ ಶೋನಲ್ಲಿ (The Kapil Sharma Show) ಭಾಗವಹಿಸಿದ್ದ ಅವರು ತಮ್ಮ ಮಾಸದ ಚೆಲುವಿನಿಂದ ವೀಕ್ಷಕರನ್ನು ದಂಗುಬಡಿಸಿದರು. ಯೌವನದ ಮೋಹಕತೆಯನ್ನು ರವೀನಾ ಇನ್ನೂ ಕಾಯ್ದುಕೊಂಡಿದ್ದಾರೆ. ಸಿನಿಮಾ ಡಿಸ್ಟ್ರಿಬ್ಯೂಟರ್ ಅನಿಲ್ ಥದಾನಿ ಅವರನ್ನು ಮದುವೆಯಾಗಿರುವ (2004) ಚೆಲುವೆಗೆ ನಾಲ್ಕು ಮಕ್ಕಳು. ಅನಿಲ್ ಅವರಿಂದ ಎರಡು ಮಕ್ಕಳನ್ನು ಪಡೆದಿರುವ ರವೀನಾ ಮದುವೆಗೆ ಬಹಳ ಮೊದಲು 1995 ರಲ್ಲಿ ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದು ಪೋಷಣೆ ಮಾಡುತ್ತಿದ್ದರು.

ಸರಿ ವಿಷಯಕ್ಕೆ ಬರೋಣ. ರವೀನಾಗೆ ಎಲ್ಲ ಬಗೆಯ ಡ್ರೆಸ್​ಗಳು ಸೂಟ್ ಆಗುತ್ತವೆ. ಸಾಂಪ್ರದಾಯಿಕ, ಮಾಡ್, ಎಥ್ನಿಕ್-ನೀವು ಯಾವುದನ್ನೇ ಹೆಸರಿಸಿ, ಅವರಿಗದು ಒಪ್ಪುತ್ತದೆ. ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ ಅವರು ಖ್ಯಾತ ಫ್ಯಾಶನ್ ಡಿಸೈನರ್ ಕರಿಷ್ಮಾ ಖಂದೂಜಾ ವಿನ್ಯಾಸಗೊಳಿಸಿರುವ ಬೊಹೊ-ಚಿಕ್ ಮತ್ತು ಕಪ್ಪು ವರ್ಣದ ಕುಸುರಿ ಕೆಲಸ ಮಾಡಿರುವ ಅನಾರ್ಕಲಿ ಸೆಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ ಅವರು ಬೇರೆ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಆದರೆ, ಅನಾರ್ಕಲಿ ಸೆಟ್​ನಲ್ಲಿ ಅವರು ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ‘ನನ್ನ ದೇಸಿ ಪ್ರೈಡ್ ಡ್ರೆಸ್​ಗಳನ್ನು ನಾನು ಬಹಳ ಸಲ ಧರಿಸುತ್ತೇನೆ,’ ಅಂತ ಶೀರ್ಷಿಕೆಯನ್ನು ಅವರು ತಮ್ಮ ಪೋಸ್ಟ್​​​​ಗೆ ನೀಡಿದ್ದಾರೆ.

ರವೀನಾ ಧರಿಸಿರುವ ಕಪ್ಪು ಬಣ್ಣದ ಅನಾರ್ಕಲಿ ಸೂಟ್ ಸೆಟ್​ನ ಕುರ್ತಾ ಪೀಸಂಟ್ ತೋಳು, ಕನ್ನಡಿಗಳು ಮತ್ತು ನೊಗದ ಮೇಲೆ ವರ್ಣರಂಜಿತ ಎಳೆಗಳನ್ನು ಹೊಂದಿರುವ ಕಸೂತಿಯನ್ನು ಒಳಗೊಂಡಿದೆ. ತೋಳುಗಳ ಕಫ್​ಗಳು ಸಹ ಇದೇ ರೀತಿಯ ಕಸೂತಿಯನ್ನು ಪ್ರದರ್ಶಿಸುತ್ತವೆ. ಟಸೆಲ್‌ಗಳಿಂದ ನೇತಾಡುವ ಚಿಪ್ಪುಗಳು ಪೂರ್ಣ ಬೋಹೋ ವೈಬ್‌ಗಳನ್ನು ನೀಡುತ್ತವೆ. ಪ್ಯಾಂಟ್‌ ಫಿಟ್ಟಿಂಗ್ ಸರಳವಾಗಿದೆ ಮತ್ತು ಬಹು-ವರ್ಣದದ ಎಳೆಗಳೊಂದಿಗೆ ಸಂಕೀರ್ಣವಾದ ಕಸೂತಿಯನ್ನು ಒಳಗೊಂಡಿದೆ. ಕಪ್ಪು ವರ್ಣದ ಜೂತಿಯೊಂದಿಗೆ ಅವರು ತಮ್ಮ ಡ್ರೆಸಿಂಗ್ ಪೂರ್ತಿಗೊಳಿತ್ತಾರೆ

ಅವರ ಆಕ್ಸೆಸರಿಗಳನ್ನು ನೋಡುವುದಾದರೆ, ಬುಡಕಟ್ಟು ಮಹಿಳೆಯರು ಧರಿಸುವ ಜುಮ್ಕಿ, ಬೆರಳಲ್ಲಿ ಉಂಗುರ ಮತ್ತು ಮಣಿಕಟ್ಟಿನಲ್ಲಿ ಬೆಳ್ಳಿಯ ಬ್ರೇಸ್ಲೆಟ್ ರಾರಾಜಿಸುತ್ತಿವೆ. ಅವರ ಮೇಕಪ್ ಸರಳವಾಗಿದೆ. ತುಟಿಗೆ ಮರೂನ್ ಬಣ್ಣದ ಲಿಪ್ಸ್ಟಿಕ್ ಮೆತ್ತಿಕೊಂಡಿದ್ದಾರೆ ಮತ್ತು ಕಣ್ಣುಗಳನ್ನು ಕಪ್ಪು ಸ್ಮೋಕಿ ಮಾಡಿಕೊಂಡಿದ್ದಾರೆ. ಕೂದಲನ್ನು ಬನ್ನಲ್ಲಿ ಬಿಗಿದು ಹಣೆಗೆ ಒಂದು ಚಿಕ್ಕ ಬಿಂದಿಯನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:    ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರೇಯಸಿಗೆ ಪ್ರಪೋಸ್​ ಮಾಡಿದ ಯುವಕ: ವಿಡಿಯೋ ವೈರಲ್​ 

Follow us on

Click on your DTH Provider to Add TV9 Kannada