ಮಡಿಕೇರಿಯಲ್ಲಿ ಕೋವಿಡ್ ಕೇರ್ ಕೇಂದ್ರದಿಂದ ಮೂವರು ತಪ್ಪಿಸಿಕೊಂಡಿರುವುದಕ್ಕೆ ಜಿಲಾಡಳಿತದ ನಿರ್ಲಕ್ಷ್ಯ ಕಾರಣವೇ?
ಅವರು ತಪ್ಪಿಸಿಕೊಂಡಿದ್ದು ಕೇವಲ ಪ್ರಮಾದ ಮಾತ್ರವಲ್ಲ ಅಪರಾಧವೂ ಹೌದು. ಅವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದವರು ಸಹ ನಾಪತ್ತೆಯಾಗಿದ್ದಾರೆ. ಜಾರ್ಖಂಡ್ ಮೂಲದವರಾದ ಅವರೆಲ್ಲರನ್ನು ಟ್ರೇಸ್ ಮಾಡುವ ಕೆಲಸ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಕೇರ್ ಕೇಂದ್ರದಿಂದ (Covid Care Centre) ಸೋಂಕಿತರು ತಪ್ಪಿಸಿಕೊಳ್ಳುವುದು ಹೊಸ ಆಯಾಮವೇನೂ ಅಲ್ಲ. ಕೆಲವರು ಸೋಂಕಿತರ ತಮ್ಮ ಬದುಕು ಕೈದಿಗಳಂತಾಗಿದೆ ಅಂತ ಭಾವಿಸಿ ಪಲಾಯನಗೈಯುತ್ತಾರೆ. ಬೇರೆಯವರು ಊಟ ಸರಿಯಿಲ್ಲ, ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಮೊದಲಾದ ಸಬೂಬುಗಳನ್ನು ಹೇಳಿ ತಪ್ಪಿಸಿಕೊಂಡು ಬಿಡುತ್ತಾರೆ. ಇಂಥದ್ದೇ ಒಂದು ಪ್ರಸಂಗ ಮಡಿಕೇರಿಯಲ್ಲಿ ನಡೆದಿದೆ. ಮೂವರು ಸೋಂಕಿತರು ಪರಾರಿಯಾಗಿದ್ದಾರೆ. ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಒಂದು ಬೃಹತ್ ಕಾಂಪ್ಲೆಕ್ಸ್ ನಲ್ಲಿ (Complex) ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಮಾಡಿರುವ ಈ ಏರ್ಪಾಟು ಸರಿಯಿಲ್ಲ ಅನ್ನೋದು ನೋಡಿದಾಕ್ಷಣ ಗೊತ್ತಾಗುತ್ತದೆ. ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿರುವುದರಿಂದ ಅಲ್ಲಿ ತೇವಾಂಶ (dampness) ಇರುತ್ತದೆ. ಹಾಗೆಯೇ, ಗೋಡೆಗಳಿಲ್ಲದ ಓಪನ್ ಸ್ಥಳದಲ್ಲಿ ಸೋಂಕಿತರು ಮಲಗಿದ್ದಾರೆ. ಚಳಿಗಾಲ ಇನ್ನೂ ಮುಗಿದಿಲ್ಲ ಮತ್ತು ಮಡಿಕೇರಿಯ ವಾತಾವರಣ ಹೇಗಿರುತ್ತದೆ ಅಂತ ಎಲ್ಲರಿಗೂ ಗೊತ್ತಿದೆ.
ಸೋಂಕಿತರು ಇಲ್ಲಿಂದ ಓಡಿಹೋಗಿರುವುದಕ್ಕೆ ಇದು ಸಮರ್ಥನೆ ಅಲ್ಲ. ಅವರು ತಪ್ಪಿಸಿಕೊಂಡಿದ್ದು ಕೇವಲ ಪ್ರಮಾದ ಮಾತ್ರವಲ್ಲ ಅಪರಾಧವೂ ಹೌದು. ಅವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದವರು ಸಹ ನಾಪತ್ತೆಯಾಗಿದ್ದಾರೆ. ಜಾರ್ಖಂಡ್ ಮೂಲದವರಾದ ಅವರೆಲ್ಲರನ್ನು ಟ್ರೇಸ್ ಮಾಡುವ ಕೆಲಸ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದರೆ ಹೊರಗಡೆ ಬಂದ ನಂತರ ಅವರು ಅದೆಷ್ಟು ಜನರಿಗೆ ಸೋಂಕು ತಾಕಿಸಿದ್ದಾರೋ?
ಕೋವಿಡ್ ಕೇಂದ್ರಗಳ ಸುತ್ತ ಭದ್ರತೆಯನ್ನು ಹೆಚ್ಚಿಸಬೇಕಾದ ಅವಶ್ಯಕತೆಯೂ ಇದೆ. ಸಾಮಾನ್ಯವಾಗಿ ಸೆಂಟರ್ ಹೊರಭಾಗದಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಾದರೂ ಮಡಿಕೇರಿಯಲ್ಲಿ ಅದನ್ನು ಮಾಡಿಲ್ಲ ಅನಿಸುತ್ತದೆ. ಇನ್ನಾದರೂ ಪಾಳಿಯ ಮೇಲೆ ಪೊಲೀಸರನ್ನು ನಿಯೋಜಿಸಿವುದು ಒಳಿತು.
ಇದನ್ನೂ ಓದಿ: ನಾಗ ಚೈತನ್ಯ ತುಂಬಾನೇ ಮುಗ್ಧ ಎಂದು ಹೊಗಳಿದ್ದ ಸಮಂತಾ; ವೈರಲ್ ಆಗುತ್ತಿದೆ ಹಳೆಯ ವಿಡಿಯೋ