ಸಮಂತಾ ಹಾಗೂ ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು. ಇಬ್ಬರ ನಡುವೆ ಒಳ್ಳೆಯ ಆಪ್ತತೆ ಇತ್ತು ಆದರೆ, ಅವರು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ‘ನಂಬರ್ 1. ಯಾರಿ ವಿತ್ ರಾಣಾ’ ಶೋನಲ್ಲಿ ಸಮಂತಾ ಪಾಲ್ಗೊಂಡಿದ್ದರು. ಈ ವೇಳೆ ಅವರು ನಾಗ ಚೈತನ್ಯ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
View this post on Instagram
ಸಮಂತಾ ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡುತ್ತಾರೆ. ಸದಾ ಜಿಮ್ನಲ್ಲಿ ಅವರು ಸಮಯ ಕಳೆಯುತ್ತಾರೆ. ಅವರಿಗೆ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇದೆ. ಹಾಗಾದರೆ, ಸಮಂತಾಗೆ ಫಿಟ್ನೆಸ್ಗೆ ಸ್ಫೂರ್ತಿ ಯಾರು ಎಂದು ಕೇಳಿದ ಪ್ರಶ್ನೆಗೆ ಅವರು ನಾಗ ಚೈತನ್ಯ ಹೆಸರನ್ನು ಹೇಳಿದ್ದರು. ಇದರ ಜತೆಗೆ ರಾಣಾ ಮತ್ತೊಂದು ಪ್ರಶ್ನೆ ಕೇಳಿದ್ದರು. ಇದಕ್ಕೂ ಅವರು ನಾಗ ಚೈತನ್ಯ ಅವರ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದರು.
‘ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಂತ ಮುಗ್ಧ ಹೀರೋ ಯಾರು? ಆ ಬಿರುದನ್ನು ಯಾರಿಗೆ ಕೊಡ್ತೀರಿ’ ಎಂದು ರಾಣಾ ಅವರು ಕೇಳಿದರು. ಇದಕ್ಕೆ ಉತ್ತರಿಸಿದ್ದ ಸಮಂತಾ, ನಾಗ ಚೈತನ್ಯ ಅವರ ಹೆಸರನ್ನು ಹೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: Samantha: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಮಂತಾರನ್ನು ಹೊಗಳಿದ ನಾಗ ಚೈತನ್ಯ
‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?