Samantha: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಮಂತಾರನ್ನು ಹೊಗಳಿದ ನಾಗ ಚೈತನ್ಯ
ನಾಗ ಚೈತನ್ಯ ಹಾಗು ಸಮಂತಾ ಒಟ್ಟಾಗಿ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಇವರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೇ ಅಭಿಪ್ರಾಯವನ್ನು ನಾಗ ಚೈತನ್ಯ ಹೊಂದಿದ್ದಾರೆ.
ಚಿತ್ರರಂಗದ (Cinema Industry) ಪಾಲಿಗೆ ವಿಚ್ಛೇದನ ಎಂಬುದು ಒಂದು ಸಾಮಾನ್ಯ ವಿಚಾರ. ಸಾಕಷ್ಟು ಸೆಲೆಬ್ರಿಗಳು ಮದುವೆ ಆಗಿ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದ ಉದಾಹರಣೆ ಸಾಕಷ್ಟಿದೆ. ವಿಶೇಷ ಎಂದರೆ, ಮದುವೆ ಬಳಿಕವೂ ಅವರು ಒಟ್ಟಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹುಟ್ಟುಹಬ್ಬದ ದಿನ ವಿಶ್ ಮಾಡುತ್ತಾರೆ. ಪತಿಯ ಚಿತ್ರಕ್ಕೆ ಹೆಂಡತಿಯೇ ಬಂಡವಾಳ ಹೂಡಿದ ಉದಾಹರಣೆ ಕೂಡ ಸಾಕಷ್ಟಿದೆ. ಆದರೆ, ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ (Samantha)ವಿಚ್ಛೇದನ ಪಡೆದ ನಂತರದಲ್ಲಿ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ವಿಶ್ ಮಾಡಿಕೊಂಡಿಲ್ಲ. ನಾಗ ಚೈತನ್ಯ ಜನ್ಮದಿನದಂದು ಸಮಂತಾ ವಿಶ್ ಮಾಡಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿರಲಿಲ್ಲ. ಇತ್ತೀಚೆಗೆ ನಾಗ ಚೈತನ್ಯ ಅವರು ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದರು. ಈಗ ಸಮಂತಾ ಬಗ್ಗೆ ಅವರು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಈ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಿದೆ.
ಸಮಂತಾ ಹಾಗೂ ನಾಗ ಚೈತನ್ಯ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಪ್ರೀತಿ ಹುಟ್ಟಿದ್ದು ಕೂಡ ಸಿನಿಮಾ ಸೆಟ್ನಲ್ಲೇ. ನಾಗ ಚೈತನ್ಯ ಹಾಗು ಸಮಂತಾ ಒಟ್ಟಾಗಿ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಇವರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೇ ಅಭಿಪ್ರಾಯವನ್ನು ನಾಗ ಚೈತನ್ಯ ಹೊಂದಿದ್ದಾರೆ.
ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಸಿನಿಮಾ ಜನವರಿ 14ರಂದು ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸ್ಗೂ ಮೊದಲೇ ಕೆಲ ಬಾಲಿವುಡ್ ಮೀಡಿಯಾಗಳ ಜತೆ ನಾಗ ಚೈತನ್ಯ ಮಾತನಾಡಿದ್ದಾರೆ. ಈ ವೇಳೆ ಆ ಮಾಧ್ಯಮಗಳು ‘ನೀವು ತೆರೆಮೇಲೆ ಯಾವ ನಟಿಯ ಜತೆ ಉತ್ತಮ ಕೆಮಿಸ್ಟ್ರಿ’ ಹೊಂದಿದ್ದೀರಿ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ನಾಗ ಚೈತನ್ಯ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಏಕೆಂದರೆ, ಅವರು ತೆಗೆದುಕೊಂಡಿದ್ದು ಸಮಂತಾ ಅವರ ಹೆಸರನ್ನು! ಸಮಂತಾ ಬಗ್ಗೆ ಅವರು ಹೇಳಿದ ಒಳ್ಳೆಯ ಮಾತನ್ನು ಕೇಳಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
ಇತ್ತೀಚೆಗೆ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತನಾಡಿದ್ದರು. ಈ ವೇಳೆ ‘ಅವಳು ಖುಷಿಯಾಗಿದ್ದಾಳೆ ಎಂದರೆ ನನಗೂ ಸಂತೋಷವೇ’ ಎನ್ನುವ ಮಾತನ್ನು ನಾಗ ಚೈತನ್ಯ ಹೇಳಿದ್ದರು.
ಇದನ್ನೂ ಓದಿ: ಚಿತ್ರರಂಗದ ಅನಿಶ್ಚಿತತೆ ನಡುವೆ ಹೊಸ ಸಾಹಸಕ್ಕೆ ಮುಂದಾದ ಅಕ್ಕಿನೇನಿ ನಾಗಾರ್ಜುನ-ನಾಗ ಚೈತನ್ಯ
Samantha: ‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’; ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ