AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಖಿಲ್​ ಕುಮಾರ್ ಹೊಸ ಚಿತ್ರಕ್ಕೆ ಸಿಕ್ತು ಚಾಲನೆ; ಯಶ್​ ಚಿತ್ರದಲ್ಲಿ ಕೆಲಸ ಮಾಡಿದವರೇ  ಈಗ ಡೈರೆಕ್ಟರ್​

ನಿಖಿಲ್ ಹಾಗೂ ಮಂಜು ಅಥರ್ವ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಕುಮಾರ್​ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡ ಅಪ್​​ಡೇಟ್ ನೀಡಿದೆ.‌

ನಿಖಿಲ್​ ಕುಮಾರ್ ಹೊಸ ಚಿತ್ರಕ್ಕೆ ಸಿಕ್ತು ಚಾಲನೆ; ಯಶ್​ ಚಿತ್ರದಲ್ಲಿ ಕೆಲಸ ಮಾಡಿದವರೇ  ಈಗ ಡೈರೆಕ್ಟರ್​
ಹೊಸ ಚಿತ್ರ ತಂಡದೊಂದಿಗೆ ನಿಖಿಲ್​
TV9 Web
| Edited By: |

Updated on: Jan 15, 2022 | 1:58 PM

Share

ನಿಖಿಲ್​ ಕುಮಾರ್ (Nikhil Kumar) ನಟನೆಯ ‘ರೈಡರ್​’ ಸಿನಿಮಾ (Rider Movie) ಕಳೆದ ವರ್ಷಾಂತ್ಯಕ್ಕೆ ತೆರೆಕಂಡಿತ್ತು. ಈ ಸಿನಿಮಾ ರಿಲೀಸ್​ ಆಗಿ ಒಂದು ತಿಂಗಳು ಪೂರ್ಣಗೊಂಡಿಲ್ಲ. ಆಗಲೇ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ ನಿಖಿಲ್​ ಕುಮಾರ್​. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಈ ಬಗ್ಗೆ ಅಪ್​ಡೇಟ್​ ನೀಡಲಾಗಿದೆ. ಇನ್ನೂ ಶೀರ್ಷಿಕೆ​ ಇಡದ ಈ ಚಿತ್ರದಲ್ಲಿ ನಿಖಿಲ್​ ಬಣ್ಣ ಹಚ್ಚುತ್ತಿದ್ದಾರೆ. ಕೆವಿಎನ್​ ಪ್ರೊಡಕ್ಷನ್ (KVN Production)​ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಚಿತ್ರದ ಟೈಟಲ್​ ಘೋಷಣೆ ಆಗಲಿದೆ. ಹಾಗಾದರೆ, ಈ ಸಿನಿಮಾ ನಿರ್ದೇಶನ ಮಾಡುತ್ತಿರುವವರು ಯಾರು? ಆ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ.

ನಿಖಿಲ್ ಕುಮಾರ್ ಹೊಸ ಸಿನಿಮಾದ ಶೂಟಿಂಗ್​ಗೆ ಇಳಿದಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿ ಇದ್ದಾರೆ. ಯಶ್​ ನಟನೆಯ ‘ಮಾಸ್ಟರ್‌ ಪೀಸ್‌’, ಶಿವರಾಜ್​ಕುಮಾರ್​ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಡೈರೆಕ್ಟರ್​ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಅವರು ನಿಖಿಲ್‌ ಅವರ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ.

ನಿಖಿಲ್ ಹಾಗೂ ಮಂಜು ಅಥರ್ವ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಕುಮಾರ್​ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡ ಅಪ್​​ಡೇಟ್ ನೀಡಿದೆ.‌ ಈ ಸಿನಿಮಾದಲ್ಲಿ ಆ್ಯಕ್ಷನ್ ಇರಲಿದ್ದು, ಇದರ ಜತೆಗೆ ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟ ಆಗುವ​ ವಿಚಾರವೂ ಇರಲಿದೆ. ಈ ಚಿತ್ರಕ್ಕೆ ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಈ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದು, ‘ಮಫ್ತಿ’, ‘ಮದಗಜ’ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಮೊದಲ ಹಂತದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಚಿತ್ರತಂಡ ಸದ್ಯದಲ್ಲಿಯೇ ಟೈಟಲ್ ಅನೌನ್ಸ್​ ಮಾಡಲಿದೆ. ಜತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ನೀಡಲಿದೆ.

ಇದನ್ನೂ ಓದಿ: ‘ಚಿತ್ರರಂಗಕ್ಕೆ ಪುನೀತ್​ ರೀತಿಯ ನಟ ಬೇಕು; ನಿಖಿಲ್​ ಹೆಚ್ಚು ಸಿನಿಮಾ ಮಾಡಲಿ’: ಎಚ್​​.ಡಿ. ಕುಮಾರಸ್ವಾಮಿ

‘ರೈಡರ್​’ ಚಿತ್ರ ನೋಡಿ ಜನ ಹೇಗೆ ಕಮೆಂಟ್​ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್​

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ