AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’; ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ

Naga Chaitanya: ನಾಗ ಚೈತನ್ಯ ಹಾಗೂ ಸಮಂತಾ ಕಳೆದ ವರ್ಷದ ಅಕ್ಟೋಬರ್​ನಲ್ಲಿ ಬ್ರೇಕಪ್ ಘೋಷಿಸಿದ್ದರು. ಇದೇ ಮೊದಲ ಬಾರಿಗೆ ನಾಗ ಚೈತನ್ಯ ಬ್ರೇಕಪ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

Samantha: ‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’; ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ
ಸಮಂತಾ-ನಾಗ ಚೈತನ್ಯ
TV9 Web
| Updated By: shivaprasad.hs|

Updated on: Jan 13, 2022 | 8:14 AM

Share

ಟಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾಗಿದ್ದ ನಾಗ ಚೈತನ್ಯ (Naga Chaitanya)ಹಾಗೂ ಸಮಂತಾ (Samantha) ಕಳೆದ ವರ್ಷದ ಅಕ್ಟೋಬರ್ 2ರಂದು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ ಈ ಜೋಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬರೆದುಕೊಂಡು, ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನ್ನಿಸಿತ್ತು. ನಂತರ ಈರ್ವರೂ ತಮ್ಮ ತಮ್ಮ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಸಮಂತಾ ಹಲವೆಡೆ ಬ್ರೇಕಪ್ ಕುರಿತು ಮುಕ್ತವಾಗಿ ಮಾತನಾಡಿದ್ದರು. ಆದರೆ ನಾಗ ಚೈತನ್ಯ ಎಲ್ಲೂ ಸಾರ್ವಜನಿಕವಾಗಿ ಈ ವಿಚಾರದ ಕುರಿತು ಮಾತನಾಡಿರಲಿಲ್ಲ. ಇದೀಗ ಅವರ ನೂತನ ‘ಬಂಗಾರ್ರಾಜು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತಾ, ಬ್ರೇಕಪ್ ಕುರಿತೂ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆ ಎದುರಿಸಿದಿರಿ, ಇದನ್ನೆಲ್ಲಾ ಹೇಗೆ ಎದುರಿಸಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗ ಚೈತನ್ಯ, ‘‘ಆ ನಿರ್ಧಾರವನ್ನು ಇಬ್ಬರೂ ಸೇರಿ ತೆಗೆದುಕೊಂಡಿದ್ದು. ಆಕೆ (ಸಮಂತಾ) ಖುಷಿಯಾಗಿದ್ದರೆ ನನಗೂ ಖುಷಿ’’ ಎಂದಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ನಾವು ತೆಗೆದುಕೊಂಡ ಉತ್ತಮ ನಿರ್ಧಾರ ಅದಾಗಿತ್ತು ಎಂದೂ ನಾಗ ಚೈತನ್ಯ ಹೇಳಿದ್ದಾರೆ.

ಸಮಂತಾ ಈ ಹಿಂದೆ ತಮ್ಮ ಬ್ರೇಕಪ್ ಕುರಿತು ಮಾತನಾಡುತ್ತಾ, ಆ ಸಂದರ್ಭವನ್ನು ಎದುರಿಸಿದ್ದನ್ನು ವಿವರಿಸಿದ್ದರು. ‘‘ನಾನು ಇನ್ನು ನನ್ನ ಬದುಕನ್ನು ಬದುಕಬೇಕು. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ನಾನು ಸಮರ್ಥಳಿದ್ದೆ ಎಂಬುದರ ಕುರಿತು ನನಗೆ ಅನುಮಾನವಿತ್ತು. ಆದರೆ ನನಗೇ ಅಚ್ಚರಿಯಾಗುವಂತೆ ಇದನ್ನೆಲ್ಲಾ ಎದುರಿಸಲು ನಾನು ಶಕ್ತಳಿದ್ದೇನೆ. ನಾನು ಇಷ್ಟು ಗಟ್ಟಿಗಿತ್ತಿಯಾಗಿರುವುದಕ್ಕೆ ಹೆಮ್ಮೆ ಇದೆ’’ ಎಂದಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ, ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಹಲವು ಕಾರಣಕ್ಕೆ ಸದ್ದು ಮಾಡುತ್ತಿದೆ. ನಾಗಾರ್ಜುನ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ದೊಡ್ಡ ತಾರಾಗಣ ಇರುವ ಚಿತ್ರ ಇದಾಗಿದ್ದು, ಕೃತಿ ಶೆಟ್ಟಿ, ರಮ್ಯಾ ಕೃಷ್ಣ ಮೊದಲಾದವರು ಬಣ್ಣಹಚ್ಚಿದ್ದಾರೆ. ಕಲ್ಯಾಣ್ ಕೃಷ್ಣ ಕುರಸಲ ನಿರ್ದೇಶಿಸಿದ್ದಾರೆ. ನಾಗಾರ್ಜುನ ಸದ್ಯ ‘ಲವ್​ಸ್ಟೋರಿ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡ ಶೇಖರ್ ಕಮ್ಮುಲ ನಿರ್ದೇಶನದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೂ ಸಂಕ್ರಾಂತಿಯ ಸಂದರ್ಭದಲ್ಲಿ ಚಿತ್ರವನ್ನು ತೆರೆಕಾಣಿಸಲು ‘ಬಂಗಾರ್ರಾಜು’ ಚಿತ್ರತಂಡ ನಿರ್ಧರಿಸಿದೆ. ನಾಗ ಚೈತನ್ಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅಮೆಜಾನ್ ಪ್ರೈಮ್​ ನಿರ್ಮಿಸುತ್ತಿರುವ ಹಾರರ್ ವೆಬ್ ಸೀರೀಸ್ ಒಂದರಲ್ಲೂ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಅಕ್ಷಯ್​ ಕುಮಾರ್​ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್​

Salman Khan: ಸಲ್ಮಾನ್- ಸಮಂತಾ ಜತೆಯಿರುವ ಚಿತ್ರಗಳು ವೈರಲ್; ಏನಿದು ಸಮಾಚಾರ?

ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
ಉತ್ಸಾಹದಿಂದ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ ಗಮನಹರಿಸುವರೇ?
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
VIDEO: ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಚಾರ್ಲಿ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
ಹಾಸನ ಜಿಲ್ಲಾಸ್ಪತ್ರೆಯನ್ನು ಮುಚ್ಚುವುದೇ ಒಳಿತು: ರೇವಣ್ಣ, ಶಾಸಕ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ