ಅಕ್ಷಯ್​ ಕುಮಾರ್​ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್​

Akshay Kumar Remuneration: ಅಕ್ಷಯ್​ ಕುಮಾರ್​ ಜೊತೆ ಟೈಗರ್​ ಶ್ರಾಫ್​​ ಕೂಡ ಅಭಿನಯಿಸಲಿದ್ದಾರೆ. ಕಲಾವಿದರ ಸಂಭಾವನೆ ಮತ್ತು ಮೇಕಿಂಗ್​ ಖರ್ಚು ಸೇರಿದರೆ ಈ ಸಿನಿಮಾದ ಬಜೆಟ್​ 250 ಕೋಟಿ ರೂ. ಮೀರಲಿದೆ.

ಅಕ್ಷಯ್​ ಕುಮಾರ್​ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್​
ಅಕ್ಷಯ್ ಕುಮಾರ್

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದಾರೆ. ಅವರು ಸಿನಿಮಾಗಳಿಗೆ ಹಣ ಹೂಡಿದರೆ ಖಂಡಿತಾ ನಷ್ಟ ಆಗುವುದಿಲ್ಲ ಎಂಬ ನಂಬಿಕೆ ಎಲ್ಲ ನಿರ್ಮಾಪಕರಿಗೂ ಬಂದಿದೆ. ಎಂಥ ಕಷ್ಟದ ಸಂದರ್ಭದಲ್ಲಿಯೂ ಅವರ ಸಿನಿಮಾಗಳು (Akshay Kumar Movies) ಮಿನಿಮಮ್​​ ಬಿಸ್​ನೆಸ್​ ಖಂಡಿತಾ ಮಾಡುತ್ತವೆ. ಹಾಗಾಗಿ ನಿರ್ಮಾಪಕರ ಪಾಲಿಗೆ ಅಕ್ಷಯ್​ ಕುಮಾರ್​ ನೆಚ್ಚಿನ ಹೀರೋ ಆಗಿದ್ದಾರೆ. ಈಗ ಅವರ ಹೊಸ ಸಿನಿಮಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹರಿದಾಡುತ್ತಿದೆ. ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಚಿತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಲಿದ್ದಾರೆ ಎನ್ನಲಾಗಿದೆ. ಆ ಚಿತ್ರಕ್ಕೆ ಅವರು ಬರೋಬ್ಬರಿ 170 ಕೋಟಿ ರೂಪಾಯಿ ಸಂಭಾವನೆ (Akshay Kumar Remuneration) ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತವೆ ಎಂಬುದರಲ್ಲಿ ಅನುಮಾನವೇ ಬೇಡ. ಹಾಗಾಗಿ ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಮುಂದಿರುತ್ತಾರೆ. ಆದರೆ ಈ ಬಾರಿ ಅಕ್ಷಯ್​ ಕುಮಾರ್​ ಡಿಮ್ಯಾಂಡ್​​ ಮಾಡುತ್ತಿರುವುದು ತುಂಬ ದೊಡ್ಡ ಮೊತ್ತ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಟೈಗರ್​ ಶ್ರಾಫ್​​ ಕೂಡ ಅಭಿನಯಿಸಲಿದ್ದು, ಅವರು ಸಹ ಕೋಟ್ಯಂತರ ರೂ. ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ.

ಕಲಾವಿದರ ಸಂಭಾವನೆ ಮತ್ತು ಮೇಕಿಂಗ್​ ಖರ್ಚು ಸೇರಿದರೆ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಬಜೆಟ್​ 250 ಕೋಟಿ ರೂ. ಮೀರಲಿದೆ. ಇಷ್ಟೆಲ್ಲ ಖರ್ಚು ಮಾಡಲು ನಿರ್ಮಾಪಕರು ಸಿದ್ಧರಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಾಜೆಕ್ಟ್​ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಅಕ್ಷಯ್​ ಕುಮಾರ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಾರೆ. ಸಮಯ ಪಾಲನೆಯಲ್ಲಿ ಅವರು ತುಂಬ ಕಟ್ಟುನಿಟ್ಟು. ಅನಗತ್ಯವಾಗಿ ಚಿತ್ರೀಕರಣ ವಿಳಂಬ ಆಗುವುದನ್ನು ಅವರು ಸಹಿಸುವುದಿಲ್ಲ. ಹಾಗಾಗಿ ಅವರ ಸಿನಿಮಾಗೆ ಬಂಡವಾಳ ಹೂಡಲು ಎಲ್ಲ ನಿರ್ಮಾಪಕರು ಮುಂದೆ ಬರುತ್ತಾರೆ. ಕಳೆದ ವರ್ಷ ಲಾಕ್​ಡೌನ್​ನಂತರ ಕಠಿಣ ಪರಿಸ್ಥಿತಿಯಲ್ಲೂ ಅವರ ‘ಬೆಲ್​ಬಾಟಂ’ ಚಿತ್ರ ನಿರ್ಮಾಣವಾಗಿ ಬಿಡುಗಡೆಯಾಯಿತು. ಈಗ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ‘ಗೋರ್ಕಾ’, ‘ರಾಮ್​ ಸೇತು’, ‘ರಕ್ಷಾ ಬಂಧನ್​’ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮನೆ ಮಾಡಿದೆ.

ಇದನ್ನೂ ಓದಿ:

Sooryavanshi: ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ‘ಸೂರ್ಯವಂಶಿ’; ದಿನದ 24 ಗಂಟೆಯೂ ಅಕ್ಷಯ್​ ಕುಮಾರ್​ ಚಿತ್ರ ಪ್ರದರ್ಶನ

Samantha: ಮನೆಗೆ ಕನ್ನ ಹಾಕಲು ಬಂದ ಅಕ್ಷಯ್​ಗೆ ತಕ್ಕ ಶಾಸ್ತಿ ಮಾಡಿದ ಸಮಂತಾ!; ಹೇಗೆ? ಮಜವಾದ ವಿಡಿಯೋ ನೋಡಿ

Click on your DTH Provider to Add TV9 Kannada