Samantha: ಮನೆಗೆ ಕನ್ನ ಹಾಕಲು ಬಂದ ಅಕ್ಷಯ್ಗೆ ತಕ್ಕ ಶಾಸ್ತಿ ಮಾಡಿದ ಸಮಂತಾ!; ಹೇಗೆ? ಮಜವಾದ ವಿಡಿಯೋ ನೋಡಿ
Akshay Kumar: ಬಹುಭಾಷಾ ನಟಿ ಸಮಂತಾ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಇದೀಗ ಈರ್ವರೂ ಜಾಹಿರಾತೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದು ಅಭಿಮಾನಿಗಳ ಮನಗೆದ್ದಿದೆ.
ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ನಟಿ ಸಮಂತಾ (Samantha) ಮನೆಗೆ ಕನ್ನ ಹಾಕಲು ಹೋಗಿದ್ದಾರೆ! ಅರೇ ಅಕ್ಷಯ್ ಹೀಗೂ ಮಾಡುತ್ತಾರಾ ಎಂದು ತಲೆಕೆಡಿಸಿಕೊಳ್ಳಬೇಡಿ! ಕಾರಣ, ಅಲ್ಲೇ ಇರೋದು ಅಚ್ಚರಿಯ ವಿಚಾರ! ನಟಿ ಸಮಂತಾ ಸದ್ಯ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್ ಕುಮಾರ್ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಈ ಖ್ಯಾತ ತಾರೆಯರು ಮೊತ್ತಮೊದಲ ಬಾರಿಗೆ ಜತೆಯಾಗಿ ಬಣ್ಣಹಚ್ಚಿದ್ದಾರೆ. ಟಿವಿ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿರುವ ಈರ್ವರು, ನೋಡುಗರನ್ನು ಚಕಿತಗೊಳಿಸಿದ್ದಾರೆ. ಅಕ್ಷಯ್ ಕಳ್ಳನಾಗಿ ಕಾಣಿಸಿಕೊಂಡಿದ್ದು, ಸಮಂತಾ ನಿವಾಸಕ್ಕೆ ಕದಿಯಲು ಹೋಗಿದ್ದಾರೆ. ಆದರೆ ಅಲ್ಲಿರುವ ತಿನಿಸನ್ನು ನೋಡಿ ಪರವಶರಾಗುವ ಅಕ್ಷಯ್ ಅಲ್ಲೇ ಉಳಿಯುತ್ತಾರೆ. ಆಮೇಲೇನಾಯ್ತು? ಸಮಂತಾ ಅಕ್ಷಯ್ಗೆ ತಕ್ಕ ಶಾಸ್ತಿ ಮಾಡಿದ್ದು ಹೇಗೆ? ಈ ಮಜವಾದ ವಿಡಿಯೋವನ್ನು ನೋಡಿ.
ಅಕ್ಷಯ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:
Life mein ki pehli baar chori try, aur apna ho gaya bheja fry ? Samantha ke ghar mein nahi tha taala, #Kurkure khaate khaate #AbLagaMasala ?? @Samanthaprabhu2 @KurkureSnacks #Ad pic.twitter.com/iIlVVMnP9d
— Akshay Kumar (@akshaykumar) January 11, 2022
ಹೊಸ ಬೇಡಿಕೆ ಮುಂದಿಟ್ಟ ಅಭಿಮಾನಿಗಳು: ಬಾಲಿವುಡ್ನ ಜನಪ್ರಿಯ ನಾಯಕ ಹಾಗೂ ದಕ್ಷಿಣದ ಸೂಪರ್ ಹಿಟ್ ನಟಿ ಜತೆಯಾಗಿ ಕಾಣಿಸಿಕೊಂಡಿದ್ದನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಒಂದಷ್ಟು ಅಭಿಮಾನಿಗಳು ಹೊಸ ಬೇಡಿಕೆಯೊಂದನ್ನು ಈ ಕಲಾವಿದರ ಮುಂದಿಟ್ಟಿದ್ದಾರೆ. ‘‘ನಾವು ಈ ಜೋಡಿಯನ್ನು ತೆರೆಯ ಮೇಲೆ ನೋಡಬೇಕು’’ ಎಂದು ಒಬ್ಬರು ಬರೆದಿದ್ದರೆ, ಮತ್ತೋರ್ವರು ‘‘ಸಮಂತಾ ಹಾಗೂ ಅಕ್ಷಯ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ನೋಡುಗರಿಗೆ ಭರಪೂರ ಮನೋರಂಜನೆ ಪಕ್ಕಾ’’ ಎಂದಿದ್ದಾರೆ.
ಚಿತ್ರಗಳ ವಿಷಯಕ್ಕೆ ಬಂದರೆ ಅಕ್ಷಯ್ ಬತ್ತಳಿಕೆಯಲ್ಲಿ ಹಲವಾರು ಚಿತ್ರಗಳಿವೆ. ಇತ್ತೀಚೆಗೆ ಅವರು ‘ರಾಮ್ ಸೇತು’ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನುಸ್ರತ್ ಬರೂಚ್ಚಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಚ್ಚನ್ ಪಾಂಡೆ’ ಹಾಗೂ ‘ರಕ್ಷಾ ಬಂಧನ್’ ಚಿತ್ರದ ಚಿತ್ರೀಕರಣವನ್ನು ಅಕ್ಷಯ್ ಈಗಾಗಲೇ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಓಹ್ ಮೈ ಗಾಡ್ 2’ ಹಾಗೂ ‘ಪೃಥ್ವಿರಾಜ್’ ಚಿತ್ರಗಳಲ್ಲೂ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಕೂಡ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ರಾಜ್ ಮತ್ತು ಡಿಕೆ ನಿರ್ದೇಶನದ ವೆಬ್ ಸೀರೀಸ್ ಒಂದರಲ್ಲೂ ಅವರು ಬಣ್ಣಹಚ್ಚಲಿದ್ದಾರೆ.
ಇದನ್ನೂ ಓದಿ:
Vamika Birthday: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಮಗಳು ವಮಿಕಾಗೆ ಮೊದಲ ಹುಟ್ಟುಹಬ್ಬ; ಇಲ್ಲಿವೆ ಫೋಟೋಗಳು
Lata Mangeshkar: ಕೊವಿಡ್ನಿಂದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ
Published On - 1:47 pm, Tue, 11 January 22