ಶೀಘ್ರವೇ ಸಿಂಬು-ನಿಧಿ ಅಗರ್​ವಾಲ್​ ಮದುವೆ? ಹೊರ ಬಿತ್ತು ಹೊಸ ಸುದ್ದಿ

ಸಿಂಬು ಹಾಗೂ ನಿಧಿ ಪರಸ್ಪರ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಆದರೆ, ಇದನ್ನು ಇವರು ಖಚಿತಪಡಿಸಿಲ್ಲ. ಕೆಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ಸುದ್ದಿ ಹರಿದಾಡಲು ಕಾರಣ ಎನ್ನಲಾಗಿದೆ.

 ಶೀಘ್ರವೇ ಸಿಂಬು-ನಿಧಿ ಅಗರ್​ವಾಲ್​ ಮದುವೆ? ಹೊರ ಬಿತ್ತು ಹೊಸ ಸುದ್ದಿ
ಸಿಂಬು-ನಿಧಿ

ಕಾಲಿವುಡ್​ ನಟ ಸಿಂಬು (Simbu) ಸದ್ಯ ‘ಮಾನಾಡು’ ಚಿತ್ರದ (Maanaadu) ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿದೆ. ದಿನ ರಿಪೀಟ್​ ಆಗೋ ಕಥೆಯನ್ನು ಹೊಂದಿರುವ ಈ  ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಈಗ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ವಿಚಾರ ಒಂದು ಕೇಳಿ ಬಂದಿದೆ. ಅವರು ಶೀಘ್ರವೇ ನಟಿ ನಿಧಿ ಅಗರ್​​ವಾಲ್​ ಜತೆ ಮದುವೆ ಆಗುತ್ತಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ನಿಧಿ ಆಪ್ತರು ಇದನ್ನು ಅಲ್ಲಗಳೆದಿದ್ದಾರೆ.

ಸಿಂಬು ಹಾಗೂ ನಿಧಿ ಪರಸ್ಪರ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಹರಿದಾಡುತ್ತಿದೆ. ಆದರೆ, ಇದನ್ನು ಇವರು ಖಚಿತಪಡಿಸಿಲ್ಲ. ಕೆಲವು ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ಸುದ್ದಿ ಹರಿದಾಡಲು ಕಾರಣ ಎನ್ನಲಾಗಿದೆ. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ ಎನ್ನುವ ವದಂತಿ ಹರಿದಾಡಿದೆ. 2022ರ ಆರಂಭದಲ್ಲೇ ಸ್ಟಾರ್​ ಜೋಡಿ ಮದುವೆ ನಡೆಯಲಿದೆ ಎನ್ನುವ ಸುದ್ದಿ ಜೋರಾಗಿದೆ.

‘ಇದು ಹೇಗೆ ಪ್ರಾರಂಭವಾಯಿತು ಎಂದು ನಮಗೆ ತಿಳಿದಿಲ್ಲ. ಆದರೆ ಇದರಲ್ಲಿ ಯಾವುದೇ ಸತ್ಯವಿಲ್ಲ. ‘ಈಶ್ವರನ್’ ಚಿತ್ರದಿಂದ ಇಬ್ಬರಿಗೂ ಪರಸ್ಪರ ಪರಿಚಯ ಆಗಿದೆ. ಅಷ್ಟೇ. ಅದನ್ನು ಬಿಟ್ಟು ಬೇರೇನು ಇಲ್ಲ’ ಎಂದು ನಿಧಿ ಆಪ್ತರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿಧಿ ಬಣ್ಣದ ಲೋಕದ ಪ್ರಯಾಣವನ್ನು 2017ರಲ್ಲಿ ಆರಂಭಿಸಿದರು. ಕಳೆದ ವರ್ಷ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಎರಡನೇ ತಮಿಳು ಸಿನಿಮಾದಲ್ಲಿ ಸಿಂಬು ಜತೆ ನಟಿಸಿದರು. ಕಳೆದ ವರ್ಷ ಸಂಕ್ರಾಂತಿ​ ಸಂದರ್ಭದಲ್ಲಿ ‘ಈಶ್ವರನ್​’ ಚಿತ್ರ ರಿಲೀಸ್​ ಆಗಿತ್ತು. ನಿಧಿ ಹುಟ್ಟಿ ಬೆಳೆದಿದ್ದು ಹೈದರಾಬಾದ್​ನಲ್ಲಿ. ತಮಿಳು, ತೆಲುಗು, ಕನ್ನಡ ಹಾಗೂ ಇತರ ಭಾಷೆಗಳನ್ನು ಅವರು ಮಾತನಾಡುತ್ತಾರೆ. ಈ ಮೊದಲು ಕ್ರಿಕೆಟರ್​ ಕೆ.ಎಲ್​. ರಾಹುಲ್​ ಜತೆ ನಿಧಿ ಡೇಟಿಂಗ್​ ನಡೆಸುತ್ತಿದ್ದರು ಎನ್ನುವ ಮಾತಿದೆ.

ಸಿಂಬು ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಕಳೆದ ವರ್ಷ ತೆರೆಕಂಡ ಅವರ ನಟನೆಯ ‘ಮಾನಾಡು’ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದ ಮೂಲಕ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಸಿನಿಮಾವನ್ನು ಎಲ್ಲರೂ ಕೊಂಡಾಡಿದ್ದಾರೆ.

ಇದನ್ನೂ ಓದಿ: ‘ಎಲ್ಲರೂ ತೊಂದರೆ ಕೊಡ್ತಿದ್ದಾರೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಟಾರ್​ ನಟ ಸಿಂಬು

Simbu Health Update: ಈಗ ಹೇಗಿದೆ ಸಿಂಬು ಆರೋಗ್ಯ? ಹೆಲ್ತ್​​ ಅಪ್​ಡೇಟ್​ ನೀಡಿದ ನಟ

Click on your DTH Provider to Add TV9 Kannada