AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Simbu Health Update: ಈಗ ಹೇಗಿದೆ ಸಿಂಬು ಆರೋಗ್ಯ? ಹೆಲ್ತ್​​ ಅಪ್​ಡೇಟ್​ ನೀಡಿದ ನಟ

ಸಿಂಬು ಅವರಿಗೆ ಡಿಸೆಂಬರ್​ 11ರಂದು ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊವಿಡ್​ ಕಾಣಿಸಿಕೊಂಡಿರಬಹುದು ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವರದಿ ನೆಗೆಟಿವ್​ ಬಂದಿತ್ತು.

Simbu Health Update: ಈಗ ಹೇಗಿದೆ ಸಿಂಬು ಆರೋಗ್ಯ? ಹೆಲ್ತ್​​ ಅಪ್​ಡೇಟ್​ ನೀಡಿದ ನಟ
TV9 Web
| Edited By: |

Updated on: Dec 13, 2021 | 7:38 PM

Share

ತಮಿಳಿನ ಖ್ಯಾತ ನಟ ಸಿಂಬು ಅವರು ಡಿಸೆಂಬರ್ 11ರಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈರಲ್​ ಇನ್​ಫೆಕ್ಷನ್​ ಆಗಿದೆ ಎಂದು ವೈದ್ಯರು ತಿಳಿಸಿದ್ದರು. ಅವರ ಆರೋಗ್ಯದ ಬಗ್ಗೆ ಈಗ ಹೊಸ ಅಪ್​ಡೇಟ್​ ಸಿಕ್ಕಿದೆ. ಈ ಬಗ್ಗೆ ಖುದ್ದು ಸಿಂಬು ಅವರೇ ಮಾಹಿತಿ ನೀಡಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಮನೆಗೆ ಮರಳಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಿಂಬು ಅವರಿಗೆ ಡಿಸೆಂಬರ್​ 11ರಂದು ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊವಿಡ್​ ಕಾಣಿಸಿಕೊಂಡಿರಬಹುದು ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ವರದಿ ನೆಗೆಟಿವ್​ ಬಂದಿತ್ತು. ಆ ಬಳಿಕ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರಿದ್ದರು. ಈ ಪ್ರಾರ್ಥನೆ ಈಗ ಫಲಿಸಿದೆ. ಸಿಂಬು ಅವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಮನೆಗೆ ಮರಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ‘ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು. ನಾನು ಮನೆಗೆ ಮರಳಿದ್ದೇನೆ ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನಂತರದಲ್ಲಿ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ಕಣ್ಣೀರು ಹಾಕಿದ್ದ ಸಿಂಬು..

ಇತ್ತೀಚೆಗೆ ‘ಮಾನಾಡು’ ಸಿನಿಮಾ ರಿಲೀಸ್​ ಆಗಿತ್ತು. ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್​ ಆಗುವುದಕ್ಕೂ ಮೊದಲೇ ಅವರು ಕಣ್ಣೀರು ಹಾಕಿದ್ದರು. ವೇದಿಕೆಯಲ್ಲಿ ಮಾತು ಆರಂಭಿಸುವಾಗಲೇ ಸಿಂಬು ಎಮೋಷನಲ್​ ಆಗಿದ್ದರು. ‘ನಾನು ತುಂಬ ಸಮಸ್ಯೆ ಎದುರಿಸಿದ್ದೇನೆ. ಅವರು ತೊಂದರೆ ಕೊಡುತ್ತಲೇ ಇದ್ದಾರೆ. ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ. ನೀವು ನನ್ನ ಕಾಳಜಿ ವಹಿಸಿ’ ಎಂದು ಅಭಿಮಾನಿಗಳಲ್ಲಿ ಸಿಂಬು ಮನವಿ ಮಾಡಿಕೊಂಡಿದ್ದರು.

ಸಿಂಬು ನಟಿಸಿರುವ ‘ಮಾನಾಡು’ ಚಿತ್ರದಲ್ಲಿ ಟೈಮ್ ಟ್ರಾವೆಲಿಂಗ್​ ಕಥೆ ಇದೆ. ಜೊತೆಗೆ ಇಂದಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಈ ಚಿತ್ರದಲ್ಲಿ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕಲ್ಯಾಣಿ ಪ್ರಿಯದರ್ಶನ್​, ಎಸ್​.ಜೆ. ಸೂರ್ಯ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: Trisha Krishnan Birthday: 38ನೇ ವಸಂತಕ್ಕೆ ಕಾಲಿಟ್ಟ ತ್ರಿಶಾ; ದಕ್ಷಿಣದ ಸ್ಟಾರ್​ ನಟಿಯ 5 ದಿ ಬೆಸ್ಟ್​ ಪಾತ್ರಗಳು ಇಲ್ಲಿವೆ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್