AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ತೊಂದರೆ ಕೊಡ್ತಿದ್ದಾರೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಟಾರ್​ ನಟ ಸಿಂಬು

Maanaadu press meet: ವೇದಿಕೆಯಲ್ಲಿ ಮಾತು ಆರಂಭಿಸುವಾಗಲೇ ಸಿಂಬು ಎಮೋಷನಲ್​ ಆಗಿದ್ದರು. ಚಿತ್ರರಂಗದಲ್ಲಿ ತಮಗೆ ಅನೇಕರು ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.

‘ಎಲ್ಲರೂ ತೊಂದರೆ ಕೊಡ್ತಿದ್ದಾರೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಟಾರ್​ ನಟ ಸಿಂಬು
ಸಿಂಬು
TV9 Web
| Edited By: |

Updated on: Nov 19, 2021 | 9:42 AM

Share

ಸಿನಿಮಾ ಎಂದರೆ ಮೋಜು ಮಸ್ತಿಯ ಜಗತ್ತು ಎಂಬ ಭಾವನೆ ಹಲವರಲ್ಲಿದೆ. ಆದರೆ ಪರದೆ ಮೇಲೆ ಕಾಣುವ ಕಲರ್​ಫುಲ್​ ಜಗತ್ತು ಪರದೆ ಹಿಂದೆ ಇರುವುದಿಲ್ಲ. ತೆರೆ ಹಿಂದೆ ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಇರುವ ಹಾಗೆಯೇ ಚಿತ್ರರಂಗದಲ್ಲೂ ಕೆಟ್ಟ ರಾಜಕೀಯ ಇದೆ. ಒಬ್ಬರನ್ನು ತುಳಿಯಲು ಇನ್ನೊಬ್ಬರು ಕಾಯುತ್ತಾ ಇರುತ್ತಾರೆ ಎಂಬುದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಕ್ಕಿವೆ. ನಟ ಸುಶಾಂತ್​ ಸಿಂಗ್​ ರಜಪೂತ್​ ಅವರು ಹಲವರಿಂದ ತಿರಸ್ಕಾರಕ್ಕೆ ಒಳಪಟ್ಟಿದ್ದರು. ಇತ್ತೀಚೆಗೆ ನಟ ಕಾರ್ತಿಕ್​ ಆರ್ಯನ್​ ಅವರನ್ನೂ ಒಂದು ಪ್ರಭಾವಿ ಗುಂಪು ಟಾರ್ಗೆಟ್​ ಮಾಡುತ್ತಿರುವ ಬಗ್ಗೆ ಸುದ್ದಿ ಆಗಿತ್ತು. ಅದೇ ರೀತಿ ಈಗ ಕಾಲಿವುಡ್ (Kollywood)​ ಸ್ಟಾರ್​ ನಟ ಸಿಂಬು (Simbu) ಅವರು ಕಷ್ಟ ಅನುಭವಿಸುತ್ತಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಸಿಂಬು ಅವರೇ ಈ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಬಾಲನಟ ಆಗಿದ್ದಾಗಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯ ಆಗಿರುವವರು ಸಿಂಬು. ಸಿನಿಮಾ ಕ್ಷೇತ್ರದ ಆಳ-ಅಗಲವನ್ನು ಅವರು ತಿಳಿದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕಾಂಟ್ರವರ್ಸಿ ಮಾಡಿಕೊಂಡಿದ್ದೇ ಹೆಚ್ಚು ಎಂಬಂತಾಗಿದೆ. ಬಹುನಿರೀಕ್ಷಿತ ‘ಮಾನಾಡು’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದ ನಿರ್ಮಾಪಕರ ಜೊತೆಗೂ ಸಿಂಬು ಕಿರಿಕ್​ ಮಾಡಿಕೊಂಡು ಚಿತ್ರತಂಡದಿಂದ ಹೊರನಡೆದಿದ್ದರು. ಮತ್ತೆ ಸಂಧಾನ ಮಾಡಿಕೊಂಡು ಚಿತ್ರತಂಡವನ್ನು ಸೇರಿಕೊಂಡರು. ಈಗ ಈ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ನಡೆದಿದೆ. ಆ ವೇದಿಕೆಯಲ್ಲಿ ಸಿಂಬು ಕಣ್ಣೀರು ಹಾಕಿದ್ದಾರೆ.

ವೇದಿಕೆಯಲ್ಲಿ ಮಾತು ಆರಂಭಿಸುವಾಗಲೇ ಸಿಂಬು ಎಮೋಷನಲ್​ ಆಗಿದ್ದರು. ಚಿತ್ರರಂಗದಲ್ಲಿ ಸಿಂಬುಗೆ ಅನೇಕರು ತೊಂದರೆ ಕೊಡುತ್ತಿದ್ದಾರಂತೆ. ಆದರೆ ಯಾರ ಹೆಸರನ್ನೂ ಅವರು ಬಹಿರಂಗ ಪಡಿಸಿಲ್ಲ. ‘ನಾನು ತುಂಬ ಸಮಸ್ಯೆ ಎದುರಿಸಿದ್ದೇನೆ. ಅವರು ತೊಂದರೆ ಕೊಡುತ್ತಲೇ ಇದ್ದಾರೆ. ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ. ನೀವು ನನ್ನ ಕಾಳಜಿ ವಹಿಸಿ’ ಎಂದು ಅಭಿಮಾನಿಗಳಲ್ಲಿ ಸಿಂಬು ಮನವಿ ಮಾಡಿಕೊಂಡಿದ್ದಾರೆ.

ಸಿಂಬು ನಟಿಸಿರುವ ‘ಮಾನಾಡು’ ಚಿತ್ರದಲ್ಲಿ ಟೈಮ್ ಟ್ರಾವೆಲಿಂಗ್​ ಕಥೆ ಇದೆ. ಜೊತೆಗೆ ಇಂದಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಈ ಚಿತ್ರದಲ್ಲಿ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನ.25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕಲ್ಯಾಣಿ ಪ್ರಿಯದರ್ಶನ್​, ಎಸ್​.ಜೆ. ಸೂರ್ಯ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

ಮದುವೆಗೂ ಮುನ್ನ ಬುರ್ಕಾ ಧರಿಸುತ್ತಿದ್ದ ದೀಪಿಕಾ; ಯಾರಿಗೂ ತಿಳಿದಿರದ ರಹಸ್ಯ ಈಗ ಬಯಲಾಯ್ತು

ಬಹುನಿರೀಕ್ಷಿತ 3 ಕನ್ನಡ ಸಿನಿಮಾಗಳು ರಿಲೀಸ್​; ಈ ಚಿತ್ರಗಳ ವಿಶೇಷತೆ ಏನು?

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!