Sign In

By signing in or creating an account, you agree with Associated Broadcasting Company's Terms & Conditions and Privacy Policy.

Malaika Arora: ಬ್ರೇಕಪ್ ಮಾಡಿಕೊಂಡ್ರಾ ಮಲೈಕಾ- ಅರ್ಜುನ್? ವೈರಲ್ ಆಗಿರೋ ಈ ಸುದ್ದಿಯ ಅಸಲಿಯತ್ತು ಇಲ್ಲಿದೆ

Malaika and Arjun Breakup Rumours: ಬಾಲಿವುಡ್​ನ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕಪ್ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಯ ಅಸಲಿಯತ್ತೇನು?

Malaika Arora: ಬ್ರೇಕಪ್ ಮಾಡಿಕೊಂಡ್ರಾ ಮಲೈಕಾ- ಅರ್ಜುನ್? ವೈರಲ್ ಆಗಿರೋ ಈ ಸುದ್ದಿಯ ಅಸಲಿಯತ್ತು ಇಲ್ಲಿದೆ
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್
Follow us
TV9 Web
| Updated By: shivaprasad.hs

Updated on:Jan 12, 2022 | 6:51 PM

ಬಾಲಿವುಡ್​ನಲ್ಲಿ ಸಖತ್ ಅಭಿಮಾನಿ ಬಳಗವನ್ನು ಹೊಂದಿರುವ ತಾರಾ ಜೋಡಿಗಳಲ್ಲಿ ಅರ್ಜುನ್ ಕಪೂರ್ (Arjun Kapoor) ಹಾಗೂ ಮಲೈಕಾ ಅರೋರಾ (Malaika Arora) ಜೋಡಿ ಕೂಡ ಒಂದು. ಈರ್ವರು ಇನ್ನೂ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ. ಆದರೆ ಈ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂಬಂಧದ ಕುರಿತು ಈರ್ವರೂ ಹೇಳಿಕೊಂಡಿದ್ದರು. ಇದೀಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಖಾಸಗಿ ಮಾಧ್ಯಮವೊಂದು ಈರ್ವರೂ ಬೇರೆಯಾಗಿದ್ದಾರೆ ಎಂಬ ವರದಿಯನ್ನು ಬಿತ್ತರಿಸಿದೆ. ಇತ್ತೀಚೆಗೆಷ್ಟೇ ಹೊಸ ವರ್ಷವನ್ನು ಜತೆಯಾಗಿ ಆಚರಿಸಿದ್ದ ಮಲೈಕಾ- ಅರ್ಜುನ್ ಕೇವಲ 12 ದಿನಗಳ ಅಂತರದಲ್ಲಿ ಬೇರೆಯಾಗುವ ನಿರ್ಧಾರ ತಳೆದಿದ್ದಾರೆ ಎಂಬ ವಿಚಾರವನ್ನು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗಿಲ್ಲ. ಅಲ್ಲದೇ ಈ ವಿಚಾರ ಟ್ವಿಟರ್​ನಲ್ಲಿ ಟ್ರೆಂಡ್ ಕೂಡ ಆಗಿದೆ. ಸಾಕಷ್ಟು ಚರ್ಚೆಯಾಗುತ್ತಿರುವ ಈ ವಿಚಾರದ ಅಸಲಿಯತ್ತಿನ ಕುರಿತೇ ಪ್ರಶ್ನೆಗಳೆದ್ದಿವೆ. ಅಷ್ಟಕ್ಕೂ ಈ ವದಂತಿ ಹುಟ್ಟಲು ಕಾರಣವೇನು?

ವಾಸ್ತವವಾಗಿ ಮಲೈಕಾ ಹಾಗೂ ಅರ್ಜುನ್ ಬ್ರೇಕಪ್ ವಿಚಾರ ಹುಟ್ಟಿಕೊಳ್ಳಲು ಕಾರಣ, ಮಲೈಕಾ ಕಳೆದ ಆರು ದಿನಗಳಿಂದ ಮನೆಯಿಂದ ಹೊರ ಬಂದಿಲ್ಲ. ಹೊರ ಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡಿರುವ ಅವರು ಯಾರನ್ನೂ ಭೇಟಿಯೂ ಆಗಿಲ್ಲ. ಇಷ್ಟೆಲ್ಲಾ ಆದರೂ ಗೆಳೆಯ ಅರ್ಜುನ್ ಅವರ ಮನೆಗೆ ತೆರಳಿ ವಿಚಾರಿಸಿಲ್ಲ. ಇದಲ್ಲದೇ, ಇತ್ತೀಚೆಗಷ್ಟೇ ಅರ್ಜುನ್ ಕಪೂರ್ ರಿಯಾ ಕಪೂರ್ ಮನೆಗೆ ಔತಣಕ್ಕೆ ತೆರಳಿದ್ದರು. ಮಲೈಕಾ ಮನೆ ಅಲ್ಲೇ ಪಕ್ಕದಲ್ಲಿದೆ. ಆದರೆ ಅಲ್ಲಿಗೆ ತೆರಳಿ ಮಲೈಕಾರನ್ನು ಭೇಟಿಯಾಗಿಲ್ಲ. ಈ ವಿಚಾರ ಗಾಸಿಪ್​ ಹುಟ್ಟಿಕೊಳ್ಳಲು ಕಾರಣವಾಗಿದೆ.

ಬ್ರೇಕಪ್ ವಿಚಾರದ ಅಸಲಿಯತ್ತೇನು? ಮಲೈಕಾ ಬ್ರೇಕಪ್​ನಿಂದ ದುಃಖಿತರಾಗಿದ್ದು, ಆದ್ದರಿಂದಲೇ ಅವರು ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಆದರೆ ಹಲವು ಮಾಧ್ಯಮ ವರದಿಗಳು ಇದನ್ನು ನಿರಾಕರಿಸಿವೆ. ಅಲ್ಲದೇ ಅಂತಹ ಯಾವುದೇ ಯೋಚನೆಯನ್ನು ತಾರಾ ಜೋಡಿ ಹೊಂದಿಲ್ಲ ಎಂದಿವೆ. ಇದೀಗ ಸ್ವತಃ ಅರ್ಜುನ್ ಕಪೂರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಮಲೈಕಾ ಜತೆಯಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಯಾವುದೇ ರೂಮರ್​​ಗೆ ಅವಕಾಶವಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅರ್ಜುನ್ ಪೋಸ್ಟ್ ಅಭಿಮಾನಿಗಳಿಗೆ ಸಮಾಧಾನ ನೀಡಿದೆ.

ಅರ್ಜುನ್ ಕಪೂರ್ ಪೋಸ್ಟ್ ಇಲ್ಲಿದೆ:

View this post on Instagram

A post shared by Arjun Kapoor (@arjunkapoor)

ಇದನ್ನೂ ಓದಿ:

Reba Monica John: ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ರತ್ನನ್ ಪ್ರಪಂಚ’ ಬೆಡಗಿ ರೆಬಾ ಮೋನಿಕಾ ಜಾನ್

ಮನಸ್ಸು ಬದಲಾಯಿಸಿದ ಕೆಜಿಎಫ್ ಬೆಡಗಿ; ಭಾರತದ ಸಮುದ್ರ ತಟದಲ್ಲೇ ನೆರವೇರಲಿದೆ ಅದ್ದೂರಿ ಕಲ್ಯಾಣ

Published On - 6:43 pm, Wed, 12 January 22