ಮನಸ್ಸು ಬದಲಾಯಿಸಿದ ಕೆಜಿಎಫ್ ಬೆಡಗಿ; ಭಾರತದ ಸಮುದ್ರ ತಟದಲ್ಲೇ ನೆರವೇರಲಿದೆ ಅದ್ದೂರಿ ಕಲ್ಯಾಣ

Mouni Roy | Suraj Nambiar: ಬಾಲಿವುಡ್ ಬೆಡಗಿ ಮೌನಿ ರಾಯ್ ವಿವಾಹದ ತಯಾರಿಯಲ್ಲಿದ್ದಾರೆ. ಗೆಳೆಯ ಸೂರಜ್ ನಂಬಿಯಾರ್ ಜತೆ ಹಸೆಮಣೆ ಏರಲಿರುವ ಅವರು, ಭಾರತದಲ್ಲೇ ವಿವಾಹವಾಗಲು ನಿರ್ಧರಿಸಿದ್ದಾರೆ.

ಮನಸ್ಸು ಬದಲಾಯಿಸಿದ ಕೆಜಿಎಫ್ ಬೆಡಗಿ; ಭಾರತದ ಸಮುದ್ರ ತಟದಲ್ಲೇ ನೆರವೇರಲಿದೆ ಅದ್ದೂರಿ ಕಲ್ಯಾಣ
ಮೌನಿ ರಾಯ್
Follow us
TV9 Web
| Updated By: shivaprasad.hs

Updated on:Jan 12, 2022 | 3:58 PM

‘ಕೆಜಿಎಫ್’ (KGF) ಚಿತ್ರದ ಹಿಂದಿ ಅವತರಣಿಕೆಯಲ್ಲಿ ಮೂಡಿ ಬಂದಿದ್ದ ‘ಗಲಿ ಗಲಿ’ (Gali Gali) ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮೌನಿ ರಾಯ್ (Mouni Roy) ಇದೀಗ ಮದುವೆಯ ತಯಾರಿಯಲ್ಲಿದ್ದಾರೆ. ‘ನಾಗಿಣಿ’ಯಾಗಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಮೌನಿ ರಾಯ್ ನಂತರ ಬಾಲಿವುಡ್​ನಲ್ಲಿ ಗುರುತಿಸಿಕೊಂಡರು. ಇತ್ತೀಚೆಗೆ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಜತೆ ಸುತ್ತಾಡುತ್ತಿದ್ದಾರೆ. 2022ರಲ್ಲಿ ಈರ್ವರು ವಿವಾಹವಾಗಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಈ ಜೋಡಿ ‘ಡೆಸ್ಟಿನೇಷನ್ ವೆಡ್ಡಿಂಗ್​’ಗೆ ಪ್ಲಾನ್ ಮಾಡಿತ್ತು. ಅದರಲ್ಲೂ ದುಬೈನಲ್ಲಿಯೇ ಈರ್ವರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಜೋಡಿ ಇದೀಗ ನಿರ್ಧಾರ ಬದಲಿಸಿದೆ. ಅಲ್ಲದೇ ಭಾರತದ ಸಮುದ್ರ ಕಿನಾರೆಯಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಮೌನಿ ಹಾಗೂ ಸೂರಜ್ ಯೋಜಿಸಿದ್ದು, ಪಂಚತಾರಾ ಹೋಟೆಲ್ ಒಂದನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಇದೇ ಜನವರಿ 27ರಂದು ಈರ್ವರೂ ಹಸೆಮಣೆ ಏರಲಿದ್ದಾರೆ. ಈಗಾಗಲೇ ಅತಿಥಿಗಳಿಗೆ ಆಹ್ವಾನ ಹೋಗಿದ್ದು, ಹೊರಗೆಲ್ಲೂ ಹೆಚ್ಚು ಸುದ್ದಿ ಮಾಡದಂತೆ ಸೂಚಿಸಲಾಗಿದೆ ಎಂದು ಮೌನಿ ರಾಯ್ ಆಪ್ತ ಮೂಲಗಳು ತಿಳಿಸಿವೆ.

ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ ಪಶ್ಚಿಮ ಗೋವಾದ ವೆಗೇಟರ್ ಬೀಚ್​ನಲ್ಲಿ​​ (Vagator beach) ವಿವಾಹ ಸಮಾರಂಭ ನಡೆಯಲಿದೆ. ಮಧ್ಯಾಹ್ನದ ನಂತರ ಕಾರ್ಯಕ್ರಮ ಜರುಗಲಿದ್ದು, ಸಮುದ್ರಾಭಿಮುಖವಾಗಿ ನಡೆಯುವ ವಿಶೇಷ ವಿವಾಹ ಮಹೋತ್ಸವ ಇದಾಗಿರಲಿದೆ. ಇದಲ್ಲದೇ ಡಾನ್ಸ್​ ಮೂಲಕವೇ ಹೆಸರು ಮಾಡಿರುವ ಮೌನಿ ವಿವಾಹ ಸಮಾರಂಭದಲ್ಲೂ ವಿಶೇಷ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದಾರಂತೆ. ಜನವರಿ 28ರಂದು ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ಮೌನಿ ತಮ್ಮ ಸ್ನೇಹಿತರಾದ ಪ್ರತೀಕ್ ಉಟೇಕರ್ ಹಾಗೂ ರಾಹುಲ್ ಶೆಟ್ಟಿ ಅವರೊಂದಿಗೆ ಅಭ್ಯಾಸವನ್ನೂ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮೌನಿ ರಾಯ್, ಸೂರಜ್ ನಂಬಿಯಾರ್:

Mouni Roy

ಮೌನಿ ರಾಯ್, ಸೂರಜ್ ನಂಬಿಯಾರ್

ಸದ್ಯದ ಮಾಹಿತಿಯ ಪ್ರಕಾರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್, ಏಕ್ತಾ ಕಪೂರ್, ವಿನ್ಯಾಸಗಾರ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ವಿವಾಹದಲ್ಲಿ ಭಾಗವಹಿಸಲಿದ್ದಾರೆ. ಮೌನಿ ರಾಯ್ ಗೋವಾ ಹಾಗೂ ಮುಂಬೈ ನಡುವೆ ಓಡಾಡುತ್ತಾ ತಯಾರಿ ಗಮನಿಸುತ್ತಿದ್ದಾರೆ. ಮದುಮಗ ಸೂರಜ್ ನಂಬಿಯಾರ್ ಕೂಡ ಭಾರತಕ್ಕೆ ಆಗಮಿಸಿದ್ದಾರೆ, ಆದರೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದಿವೆ ಬಾಲಿವುಡ್ ವರದಿಗಳು.

ಇದನ್ನೂ ಓದಿ:

‘ಈ ಜಾಥಾದ ಚಿತ್ರಕಥೆ ಸರಿಯಿಲ್ಲ; ಕಥೆಯೇ ಫ್ಲಾಪ್​’: ಮೇಕೆದಾಟು ಪಾದಯಾತ್ರೆ ಬಗ್ಗೆ ನಟಿ ಶ್ರುತಿ ಖಂಡನೆ

Trisha Krishnan: ಜೀವನದಲ್ಲಿ ಮೊದಲ ಬಾರಿಗೆ ‘ನೆಗೆಟಿವ್’ ರಿಪೋರ್ಟ್ ನೋಡಿ ಖುಷಿಪಟ್ಟ ತ್ರಿಷಾ; 2022ಕ್ಕೆ ರೆಡಿ ಎಂದ ನಟಿ

Published On - 3:53 pm, Wed, 12 January 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್