Sunny Leone: ಕಾಲ ಬುಡದಲ್ಲೇ ಶಾರ್ಕ್​ಗಳಿದ್ದರೂ ಸನ್ನಿ ಡೋಂಟ್ ಕೇರ್! ವೈರಲ್ ಆಯ್ತು ವಿಡಿಯೋ

Maldives: ಬಾಲಿವುಡ್ ತಾರೆ ಸನ್ನಿ ಲಿಯೋನ್ ಮಾಲ್ಡೀವ್ಸ್​ನಲ್ಲಿ ಕುಟುಂಬದೊಂದಿಗೆ ದಿನಗಳನ್ನು ಕಳೆಯುತ್ತಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

Sunny Leone: ಕಾಲ ಬುಡದಲ್ಲೇ ಶಾರ್ಕ್​ಗಳಿದ್ದರೂ ಸನ್ನಿ ಡೋಂಟ್ ಕೇರ್! ವೈರಲ್ ಆಯ್ತು ವಿಡಿಯೋ
ಶಾರ್ಕ್ ಜತೆ ಪೋಸ್ ನೀಡುತ್ತಿರುವ ಸನ್ನಿ ಲಿಯೋನ್ (Credits: Sunny Leone/ Instagram)
Follow us
TV9 Web
| Updated By: shivaprasad.hs

Updated on: Jan 12, 2022 | 8:48 PM

ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಸದ್ಯ ಮಾಲ್ಡೀವ್ಸ್​ನಲ್ಲಿದ್ದಾರೆ. ಚಿತ್ರೀಕರಣದಿಂದ ತುಸು ಬ್ರೇಕ್ ತೆಗೆದುಕೊಂಡಿರುವ ಅವರು, ಕುಟುಂಬದೊಂದಿಗೆ ರಜಾ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಮಾಲ್ಡೀವ್ಸ್​ (Maldives) ಡೈರಿಯ ಚಿತ್ರಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಶಾರ್ಕ್​ಗಳೊಂದಿಗೆ (Shark) ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ದಡದಲ್ಲಿ ಕುಳಿತಿರುವ ಸನ್ನಿಯ ಕಾಲ ಬುಡದಲ್ಲಿ ಶಾರ್ಕ್​ಗಳಿವೆ. ಆ ವಿಡಿಯೋ ಹಂಚಿಕೊಂಡಿರುವ ನಟಿ, ‘‘ಈ ಜಾಗದ ಮೇಲೆ ಪ್ರೀತಿಯಾಗಿದೆ. ಸ್ವಚ್ಛಂದವಾಗಿ ವನ್ಯ ಜೀವಿಗಳು ಓಡಾಡಿಕೊಂಡಿವೆ’’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಅನುಭವವನ್ನು ‘ರಾಯಲ್’ ಎಂದೂ ಸನ್ನಿ ಹೇಳಿಕೊಂಡಿದ್ದಾರೆ.

ಸನ್ನಿ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ. ಸುಮಾರು 15 ಲಕ್ಷಕ್ಕೂ ಅಧಿಕ ಜನರು ಅದನ್ನು ವೀಕ್ಷಿಸಿದ್ದು, ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಲವರು ‘ವಾವ್’ ಎಂದಿದ್ದರು, ಮತ್ತೆ ಕೆಲವರು ’ನೋಡಿದರೆ ಭಯವಾಗುತ್ತದೆ’ ಎಂದಿದ್ದಾರೆ.

ಸನ್ನಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

View this post on Instagram

A post shared by Sunny Leone (@sunnyleone)

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ಉಡುಗೆಯೊಂದಿಗೆ ಮಸ್ತ್ ಪೋಸ್ ನೀಡಿರುವ ಚಿತ್ರಗಳನ್ನೂ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಸಮುದ್ರ ಕಿನಾರೆಯಲ್ಲಿ ಮಲಗಿರುವ ಚಿತ್ರ, ಮರಳಿನ ಓಡುತ್ತಿರುವ ವಿಡಿಯೋ ಮೊದಲಾದವುಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಲ್ಲದೇ ವಾಟರ್ ಸ್ಕೂಟರ್​ನಲ್ಲಿ ಸಮುದ್ರದಲ್ಲಿ ಪಯಣಿಸುತ್ತಿರುವ ರೀಲ್ ಕೂಡ ಶೇರ್ ಮಾಡಿದ್ದಾರೆ.

View this post on Instagram

A post shared by Sunny Leone (@sunnyleone)

ಇತ್ತೀಚೆಗೆ ಸನ್ನಿ ಲಿಯೋನ್ ‘ಮಧುಬನ್’ ಆಲ್ಬಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂಬ ಕಾರಣದಿಂದ ಹಾಡಿಗೆ ಅಪಾರ ವಿರೋಧ ವ್ಯಕ್ತವಾಗಿತ್ತು. ಇದೀಗ ಹಾಡಿನ ಆ ಅವತರಣಿಕೆಯನ್ನು ಎಲ್ಲೆಡೆಯಿಂದ ತೆಗೆಯಲಾಗಿದ್ದು, ತಂಡ ಕ್ಷಮೆ ಕೇಳಿದೆ. ಇದಲ್ಲದೇ ಹಲವಾರು ಚಿತ್ರಗಳಲ್ಲಿ ಸನ್ನಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Prabhas: ಪ್ರಭಾಸ್ ಫ್ಯಾನ್ಸ್​​ಗೆ ಸಖತ್ ಸುದ್ದಿ; ಇಲ್ಲಿದೆ ‘ಪ್ರಾಜೆಕ್ಟ್ ಕೆ’ ಕುರಿತ ಹೊಸ ಅಪ್ಡೇಟ್

Reba Monica John: ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ರತ್ನನ್ ಪ್ರಪಂಚ’ ಬೆಡಗಿ ರೆಬಾ ಮೋನಿಕಾ ಜಾನ್

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ