ಸೀಕ್ರೆಟ್​ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್​ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್​ ಖಾನ್​; ಕಾರಣ ಏನು?

ಸಲ್ಮಾನ್​ ಖಾನ್​ ಕೊರಳಿನಲ್ಲಿ ಧರಿಸುತ್ತಿದ್ದ ಚೈನ್​ನಲ್ಲಿ ಆ ರಹಸ್ಯ ಕ್ಯಾಮೆರಾ ಇರುತ್ತಿತ್ತು. ಸಂದರ್ಶನದಲ್ಲಿ ಆ ಚೈನ್​ ಅನ್ನು ಸಲ್ಲು ತೋರಿಸಿದ್ದರು.

ಸೀಕ್ರೆಟ್​ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್​ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್​ ಖಾನ್​; ಕಾರಣ ಏನು?
ಸಲ್ಮಾನ್ ಖಾನ್

ನಟ ಸಲ್ಮಾನ್​ ಖಾನ್​ (Salman Khan) ಅವರು ಕಳೆದ ಮೂರೂವರೆ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿಶ್ವಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅನೇಕ ಏಳು-ಬೀಳುಗಳನ್ನು ಕಂಡಿರುವ ಸಲ್ಮಾನ್​ ಖಾನ್​ ತಮ್ಮದೇ ಛಾಪು ಮೂಡಿಸಿದ್ದಾರೆ. ​1989ರಲ್ಲಿ ನಟಿಸಿದ ‘ಮೈನೇ ಪ್ಯಾರ್​ ಕಿಯಾ’ ಸಿನಿಮಾದಿಂದ ಅವರು ದೇಶಾದ್ಯಂತ ಹೆಸರು ಮಾಡಿದರು. ಹೀರೋ ಆಗಿ ಅದು ಅವರ ಮೊದಲ ಸಿನಿಮಾ. ಆ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಮಹಿಳಾಭಿಮಾನಿಗಳ ಸಂಖ್ಯೆ ಹೆಚ್ಚಿತು. ಅಚ್ಚರಿ ಎಂದರೆ ಅನೇಕ ಫೀಮೇಲ್​ ಫ್ಯಾನ್ಸ್​ ಫೋಟೋವನ್ನು ಸಲ್ಮಾನ್​ ಖಾನ್​ ಅವರು ತಮ್ಮ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು! ಅನೇಕ ವರ್ಷಗಳ ಹಿಂದಿನ ಸಂದರ್ಶನದಲ್ಲಿ (Salman Khan Interview) ಈ ಬಗ್ಗೆ ಸಲ್ಲು ಮಾತನಾಡಿದ್ದರು.

ಅದು 1992ರ ಸಮಯದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ. ಆಗ ಸಲ್ಮಾನ್​ ಖಾನ್​ ಅವರಿಗೆ ಇಂಥದ್ದೊಂದು ಪ್ರಶ್ನೆ ಎದುರಾಯಿತು. ‘ನಿಮ್ಮ ಬಳಿ ಸೀಕ್ರೆಟ್​ ಕ್ಯಾಮೆರಾ ಇದೆಯಂತೆ. ನಿಮ್ಮ ಸ್ಟೇಜ್​ ಶೋ ನೋಡಲು ಬರುವ ಮಹಿಳಾಭಿಮಾನಿಗಳ ಫೋಟೋವನ್ನು ನೀವು ಆ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತೀರಂತೆ. ಇದೆಲ್ಲ ನಿಜವೇ’ ಎಂದು ಸಂದರ್ಶಕಿ ಕೇಳಿದ್ದರು. ಹೌದು ಎಂದು ಸಲ್ಮಾನ್​ ಖಾನ್​ ಉತ್ತರಿಸಿದ್ದರು. ಅಲ್ಲದೇ ಕಾರಣವನ್ನೂ ವಿವರಿಸಿದ್ದರು.

ಸಲ್ಮಾನ್​ ಖಾನ್​ ಕೊರಳಿನಲ್ಲಿ ಧರಿಸುತ್ತಿದ್ದ ಚೈನ್​ನಲ್ಲಿ ಆ ರಹಸ್ಯ ಕ್ಯಾಮೆರಾ ಇರುತ್ತಿತ್ತು. ಸಂದರ್ಶನದಲ್ಲಿ ಆ ಚೈನ್​ ಅನ್ನೂ ಸಲ್ಲು ತೋರಿಸಿದ್ದರು. ‘ನನ್ನ ಕಾರ್ಯಕ್ರಮ ನೋಡಲು ಮುಂದಿನ ಸಾಲಿನಲ್ಲಿ ಕುಳಿತ ಎಲ್ಲರ ಫೋಟೋವನ್ನು ಈ ಕ್ಯಾಮೆರಾ ಮೂಲಕ ತೆಗೆಯುತ್ತೇನೆ. ನಂತರ ಅವುಗಳ ಮೇಲೆ ಆಟೋಗ್ರಾಫ್​ ಹಾಕಿ ಅವರಿಗೆ ಕಳಿಸಿಕೊಡುತ್ತೇನೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದರು.

ಕಳೆದ ಮೂರೂವರೆ ದಶಕದಲ್ಲಿ ಸಲ್ಮಾನ್​ ಖಾನ್​ ಹಲವು ಹಂತಗಳನ್ನು ದಾಟಿ ಬಂದಿದ್ದಾರೆ. ವಿಶ್ವಾದ್ಯಂತ ಅವರ ಖ್ಯಾತಿ ಹಬ್ಬಿದೆ. ಬಿಗ್​ ಬಾಸ್​ ನಿರೂಪಕನಾಗಿ ಅವರು ಬ್ಯುಸಿ ಆಗಿದ್ದಾರೆ. ಪ್ರಸ್ತುತ ಅವರ ‘ಟೈಗರ್​ 3’ ಚಿತ್ರದ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ ಅವರಿಗೆ ಫಾರ್ಮ್​ ಹೌಸ್​ನಲ್ಲಿ ಹಾವು ಕಚ್ಚಿದ್ದು ದೊಡ್ಡ ಸುದ್ದಿ ಆಗಿತ್ತು. ಸೂಕ್ತ ಚಿಕಿತ್ಸೆ ಪಡೆದು, ಮರುದಿನವೇ ಅವರು ಬರ್ತ್​ಡೇ ಪಾರ್ಟಿ ಆಯೋಜಿಸಿದ್ದರು. ಇತ್ತೀಚೆಗೆ ಹಾಲಿವುಡ್​ ನಟಿ ಸಮಂತಾ ಲಾಕ್​ವುಡ್​ ಹೆಸರು ಸಲ್ಲು ಜತೆ ತಳುಕು ಹಾಕಿಕೊಂಡಿದೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

Click on your DTH Provider to Add TV9 Kannada