ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ

ಈ ವಿಡಿಯೋದಲ್ಲಿ ಸಲ್ಮಾನ್​ ಖಾನ್​ ಅವರು ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಡ್ಯಾನ್ಸ್​ ಮಾಡಿದ್ದಾರೆ. ಅವರ ಸಿಕ್ಸ್​ ಪ್ಯಾಕ್​ ಮಾಯವಾಗಿದೆ.

ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ
ಸಲ್ಮಾನ್​ ಖಾನ್​ ವೈರಲ್​ ವಿಡಿಯೋ
Follow us
TV9 Web
| Updated By: ಮದನ್​ ಕುಮಾರ್​

Updated on: Jan 06, 2022 | 8:07 AM

ನಟ ಸಲ್ಮಾನ್​ ಖಾನ್​ (Salman Khan) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಪ್ರತಿ ಬಾರಿ ಸಿನಿಮಾ (Salman Khan Movies) ವಿಚಾರಕ್ಕೆ ಸದ್ದು ಮಾಡುವ ಅವರು, ಕೆಲವೊಮ್ಮೆ ಟ್ರೋಲ್​ ಕಾರಣದಿಂದ ಚರ್ಚೆಗೆ ಆಹಾರ ಆಗುತ್ತಾರೆ. ಅವರ ಫಿಟ್ನೆಸ್​ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಸಲ್ಲು ಜಿಮ್​ನಲ್ಲಿ ವರ್ಕೌಟ್​ ಮಾಡುವ ಅನೇಕ ವಿಡಿಯೋ ಮತ್ತು ಫೋಟೋಗಳು ಈಗಾಗಲೇ ಜನರ ಗಮನ ಸೆಳೆದಿವೆ. ಸಿನಿಮಾಗಳಲ್ಲಿ ಅವರು ಸಿಕ್ಸ್​ ಪ್ಯಾಕ್​ ಪ್ರದರ್ಶಿಸಿ​ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಪಡೆದುಕೊಂಡಿದ್ದುಂಟು. ಆದರೆ ಸಲ್ಲುಗೆ ಸಿಕ್ಸ್​ ಪ್ಯಾಕ್​ ಇರುವುದು ಸುಳ್ಳು ಎಂದು ನೆಟ್ಟಿಗರು ವಾದ ಮಾಡುತ್ತಿದ್ದಾರೆ. ಅದಕ್ಕೆ ಹೊಸದೊಂದು ವಿಡಿಯೋ ಕಾರಣ ಆಗಿದೆ. ಇದನ್ನು ಕಂಡ ಬಹುತೇಕರು ಕಟುವಾಗಿ ಟ್ರೋಲ್ (Troll)​ ಮಾಡುತ್ತಿದ್ದಾರೆ.

ಸಲ್ಮಾನ್​ ಖಾನ್​ ಅವರು ಡ್ಯಾನ್ಸ್​ ರಿಹರ್ಸಲ್​ ಮಾಡುತ್ತಿರುವ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದಬಂಗ್​ ಟೂರ್​ ಸಲುವಾಗಿ ಅವರು ಡ್ಯಾನ್ಸ್​ ಪ್ರಾಕ್ಟೀಸ್​ ಮಾಡುತ್ತಿರುವ ಸಂದರ್ಭದಲ್ಲಿ ಚಿತ್ರಿಸಿದ ವಿಡಿಯೋ ಇದು ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಸಲ್ಮಾನ್​ ಖಾನ್​ ಅವರು ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಡ್ಯಾನ್ಸ್​ ಮಾಡಿದ್ದಾರೆ. ಸಿಕ್ಸ್​ ಪ್ಯಾಕ್​ ಮಾಯವಾಗಿದೆ. ‘ಸಿಕ್ಸ್​ ಪ್ಯಾಕ್​ ಹೋಗಿ ಫ್ಯಾಮಿಲಿ ಪ್ಯಾಕ್​’ ಆಗಿಬಿಟ್ಟಿದೆ ಎಂದು ಒಂದು ವರ್ಗದ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಲ್ಲು ಸಿಕ್ಸ್​ ಪ್ಯಾಕ್​ ತೋರಿಸುವುದು ಕೇವಲ ಗ್ರಾಫಿಕ್ಸ್​ ಮೂಲಕ ಎಂದು ಕೂಡ ಕೆಲವರು ಕಮೆಂಟ್​ ಮಾಡಿದ್ದಾರೆ.

View this post on Instagram

A post shared by Koimoi.com (@koimoi)

ಸಲ್ಮಾನ್ ಖಾನ್​​ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಕತ್ರಿನಾ ಕೈಫ್​ ಜೊತೆ ‘ಟೈಗರ್​ 3’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಬರ್ತ್​ಡೇ (ಡಿ.27) ಆಚರಿಸಿಕೊಂಡರು. ಆ ವೇಳೆ ಅವರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಉಡುಗೊರೆಗಳು ಬಂದಿವೆ ಎಂಬುದು ದೊಡ್ಡ ಸುದ್ದಿ ಆಗಿತ್ತು.

ಸಲ್ಮಾನ್​ ಖಾನ್​ ಅವರ ತಂದೆ ಸಲೀಮ್​ ಖಾನ್​ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿ, ಚಿತ್ರಕಥೆ ಬರಹಗಾರನಾಗಿ, ನಿರ್ಮಾಪಕನಾಗಿ ಅವರು ಕೆಲಸ ಮಾಡಿದ್ದಾರೆ. ಮಗನ ಜನ್ಮದಿನದ ಪ್ರಯಕ್ತ ಅವರು ಬರೋಬ್ಬರಿ 13 ಕೋಟಿ ರೂಪಾಯಿ ಬೆಲೆಬಾಳುವ ಫ್ಲಾಟ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಸಲ್ಲು ಸಹೋದರಿ ಅರ್ಪಿತಾ ಖಾನ್​ ಅವರು 17 ಲಕ್ಷ ರೂ. ಬೆಲೆಯ ವಾಚ್​ ನೀಡಿದ್ದಾರೆ. ಸಹೋದರ ಸೊಹೈಲ್​ ಖಾನ್​ 25 ಲಕ್ಷ ರೂ. ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇನ್ನೋರ್ವ ಸಹೋದರ ಅರ್ಬಾಜ್​ ಖಾನ್​ ಅವರು ಆಡಿ ಆರ್​ಎಸ್​ ಕ್ಯೂ8 ಕಾರನ್ನು ನೀಡಿದ್ದು, ಅದರ ಬೆಲೆ ಅಂದಾಜು 3 ಕೋಟಿ ರೂ. ಎಂಬ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ:

ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್