Sonu Nigam: ಕುಟುಂಬವೇ ಕೊವಿಡ್​ಗೆ ತುತ್ತಾದರೂ ಮರೆಯಾಗಿಲ್ಲ ಸೋನು ನಿಗಮ್ ಹಾಸ್ಯಪ್ರಜ್ಞೆ; ಅಷ್ಟಕ್ಕೂ ಗಾಯಕ ಹೇಳಿದ್ದೇನು? 

Covid 19: ಬಹುಭಾಷಾ ಗಾಯಕ ಸೋನು ನಿಗಮ್​ ಕೊರೊನಾ ಪಾಸಿಟಿವ್ ಆಗಿದ್ದಾರೆ. ಅವರ ಕುಟುಂಬದವರಿಗೂ ಸೋಂಕು ತಗುಲಿದೆ. ಈ ಕುರಿತು ನಟ ವಿಡಿಯೋ ಹಂಚಿಕೊಂಡಿದ್ದು, ‘‘ನಮ್ಮದು ಹ್ಯಾಪಿ ಕೊವಿಡ್ ಫ್ಯಾಮಿಲಿ’’ ಎಂದಿದ್ದಾರೆ.

Sonu Nigam: ಕುಟುಂಬವೇ ಕೊವಿಡ್​ಗೆ ತುತ್ತಾದರೂ ಮರೆಯಾಗಿಲ್ಲ ಸೋನು ನಿಗಮ್ ಹಾಸ್ಯಪ್ರಜ್ಞೆ; ಅಷ್ಟಕ್ಕೂ ಗಾಯಕ ಹೇಳಿದ್ದೇನು? 
ಗಾಯಕ ಸೋನು ನಿಗಮ್
Follow us
TV9 Web
| Updated By: shivaprasad.hs

Updated on: Jan 05, 2022 | 5:02 PM

ಬಹುಭಾಷಾ ಗಾಯಕ ಸೋನು ನಿಗಮ್​ಗೆ (Sonu Nigam) ಕೊರೊನಾ ಪಾಸಿಟಿವ್ ಆಗಿದೆ. ಪ್ರಸ್ತುತ ದುಬೈನಲ್ಲಿರುವ (Dubai) ಸೋನು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಸೋಂಕು ತಗುಲಿರುವುದನ್ನು ತಿಳಿಸಿದ್ದಾರೆ. ಸೋನು ಜತೆಗೆ ಅವರ ಪತ್ನಿ, ಪುತ್ರ ಹಾಗೂ ಸೊಸೆಗೂ ಸೋಂಕು ತಗುಲಿದೆ. ವಿಲಾಗ್ (Vlog) ಮೂಲಕ ಮಾಹಿತಿ ಹಂಚಿಕೊಂಡಿರುವ ಗಾಯಕ, ಹಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ‘‘ಹಲವು ಬಾರಿ ಕೊವಿಡ್ ಟೆಸ್ಟ್ (Covid Test) ನಡೆಸಲಾಯಿತು. ಎಲ್ಲದರಲ್ಲೂ ಪಾಸಿಟಿವ್ ಬಂದರೂ ಕೂಡ, ಸೋಂಕಿನ ಲಕ್ಷಣಗಳು ಬಹಳ ಸೌಮ್ಯವಾಗಿವೆ’’ ಎಂದಿದ್ದಾರೆ ಸೋನು. ಅಲ್ಲದೇ ಕೊವಿಡ್ ಜತೆಗೆ ನಾವು ಬದುಕಬೇಕಾಗಬಹುದು ಎಂದೂ ಅವರು ನುಡಿದಿದ್ದಾರೆ.

ಈ ಹಿಂದೆ ಜ್ವರ ಬಂದಿದ್ದ ಘಟನೆಗಳನ್ನು ಸ್ಮರಿಸಿಕೊಂಡಿರುವ ಸೋನು ನಿಗಮ್, ‘‘ಈ ಹಿಂದೆ ಜ್ವರ, ಗಂಟಲು ಸಮಸ್ಯೆಯಿದ್ದಾಗ ಕೂಡ ಶೋಗಳಲ್ಲಿ ಭಾಗವಹಿಸಿದ್ದೇನೆ. ಆಗಿನ ಘಟನೆಗಳಿಗೆ ಹೋಲಿಸಿದರೆ ಈಗ ಲಕ್ಷಣಗಳು ಬಹಳ ಕಡಿಮೆಯಿದೆ’’ ಎಂದಿದ್ದಾರೆ. ವಿಲಾಗ್​ನಲ್ಲಿ ತುಸು ಹಾಡಿರುವ ಸೋನು, ಗಂಟಲು ಸರಿಯಿದೆ, ಹಾಡಬಹುದು ಎಂದು ನಸುನಗುತ್ತಾ ನುಡಿದಿದ್ದಾರೆ.

‘ನಮ್ಮದು ಕೊವಿಡ್ ಕುಟುಂಬ!’ ಎಂದ ಸೋನು: ಸೋನು ಹಾಸ್ಯಪ್ರಜ್ಞೆ ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಕೊವಿಡ್ ಸೋಂಕಿಗೆ ತುತ್ತಾಗಿರುವ ಸಂಕಷ್ಟದ ಸಮಯವನ್ನೂ ಸೋನು ನಗುಮುಖದಿಂದಲೇ ಎದುರಿಸಿದ್ದಾರೆ. ಈ ಕುರಿತು ತಾವೇ ತಮಾಷೆ ಮಾಡಿ ಅಭಿಮಾನಿಗಳನ್ನೂ ನಗಿಸಿದ್ದಾರೆ. ‘‘ಮಗನನ್ನು ಭೆಟಿಯಾಗದೇ ಬಹಳ ಕಾಲವಾಗಿತ್ತು. ಈಗ ಮಗನೊಂದಿಗೆ ಆರಾಮವಾಗಿ ಕಾಲ ಕಳೆಯಬಹುದು. ಆದ್ದರಿಂದ ನಮ್ಮ ಕುಟುಂಬವನ್ನು ಹ್ಯಾಪಿ ಕೊವಿಡ್ ಫ್ಯಾಮಿಲಿ ಎನ್ನಬಹುದು’’ ಎಂದು ನಗುತ್ತಾ ನುಡಿದಿದ್ದಾರೆ ಸೋನು.

ಸೋನು ನಿಗಮ್ ಮಾತು ಇಲ್ಲಿದೆ:

ಕೊವಿಡ್ ಸೋಂಕಿಗೆ ತುತ್ತಾದ ಕಾರಣ, ಸೋನು ಅವರ ಪ್ರವಾಸಗಳೂ ರದ್ದುಗೊಂಡಿವೆ. ಇಲ್ಲವಾದಲ್ಲಿ ಅವರು ಭುವನೇಶ್ರಕ್ಕೆ ತೆರಳಿ ‘ಸೂಪರ್ ಸಿಂಗರ್’ ಶೋದ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಇದೀಗ ಅವರ ಸ್ಥಾನವನ್ನು ಅನು ಮಲಿಕ್ ತುಂಬಲಿದ್ದಾರೆ. ಇದೇ ವೇಳೆ ಪ್ರಸ್ತುತ ಕೊವಿಡ್ ಪ್ರಕರಣಗಳ ಏರಿಕೆಯಿಂದ ಚಿತ್ರರಂಗ ಹಾಗೂ ರಂಗಭೂಮಿ ಬಹಳ ಹೊಡೆತ ಅನುಭವಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅವರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಎಲ್ಲವೂ ಬೇಗ ಸರಿಯಾಗಲಿ ಎಂದಿದ್ದಾರೆ ಸೋನು ನಿಗಮ್.

ಬಾಲಿವುಡ್​ನ ಹಲವು ತಾರೆಯರಿಗೆ ಕೊವಿಡ್: ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಬಾಲಿವುಡ್​​ನ ಹಲವು ತಾರೆಯರು ಸೋಂಕಿಗೆ ತುತ್ತಾಗಿದ್ದಾರೆ. ಹಿರಿಯ ನಟ ಪ್ರೇಮ್ ಚೋಪ್ರಾ ಹಾಗೂ ಅವರ ಪತ್ನಿಗೆ ಕೊರೊನಾ ಕಾಣಿಸಿಕೊಂಡಿತ್ತು. ಇಂದು ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದಲ್ಲದೇ ನೋರಾ ಫತೇಹಿ, ಮೃಣಾಲ್ ಠಾಕೂರ್ ಸೇರಿದಂತೆ ಹಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.

ಇದನ್ನೂ ಓದಿ:

Shubha Poonja: ದೀರ್ಘಕಾಲದ ಗೆಳೆಯ ಸುಮಂತ್ ಜತೆ ಶುಭಾ ಸಿಂಪಲ್ ಶಾದಿ; ಚಿತ್ರಗಳು ಇಲ್ಲಿವೆ

Avinash: ಸಾವಿನ ಕುರಿತು ಸುಳ್ಳುಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ನಟ ಅವಿನಾಶ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ