ಅವಿನಾಶ್ ಸುಳ್ಳು ಸುದ್ದಿಯ ಕುರಿತು ಪ್ರತಿಕ್ರಿಯಿಸಿದ್ದು, ‘‘ಆರಾಮವಾಗಿದ್ದೇನೆ. ಬೆಳಗ್ಗೆ ವರ್ಕೌಟ್ ಮಾಡಿದ್ದೇನೆ’’ ಎಂದಿದ್ದಾರೆ. ಅಲ್ಲದೇ ಇಂತಹ ಸುದ್ದಿ ಹರಿದಾಡಿದ್ದರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.
ಜೇಮ್ಸ್ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿರುವ ಅವಿನಾಶ್:
ಪ್ರಸ್ತುತ ‘ಜೇಮ್ಸ್’ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿರುವುದಾಗಿ ಅವಿನಾಶ್ ತಿಳಿಸಿದ್ದಾರೆ. ಪುನೀತ್ ನಟನೆಯ ಕೊನೆಯ ಚಿತ್ರ ಇದಾಗಿತ್ತು. ಇದೀಗ ಚಿತ್ರತಂಡ ಶೂಟಿಂಗ್ ನಡೆಸುತ್ತಿದ್ದು, ಚಿತ್ರ ಮುಕ್ತಾಯದ ಹಂತದಲ್ಲಿದೆ. ನಟ ಅವಿನಾಶ್ ಈ ಕುರಿತು ಮಾತನಾಡಿ, ಅಪ್ಪು ಇಲ್ಲದೇ ಶೂಟಿಂಗ್ ಮಾಡೋದು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Ek Love Ya: ಸ್ಯಾಂಡಲ್ವುಡ್ಗೆ ಕೊರೊನಾತಂಕ; ಬಹುನಿರೀಕ್ಷಿತ ‘ಏಕ್ ಲವ್ ಯಾ’ ರಿಲೀಸ್ ಮುಂದೂಡಿಕೆ
ಮನೆಯಲ್ಲಿ ಕುಳಿತು ನೋಡಬಹುದು ‘ಪುಷ್ಪ’ ಚಿತ್ರ; ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ಗೆ ದಿನಾಂಕ ನಿಗದಿ