AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ek Love Ya: ಸ್ಯಾಂಡಲ್​ವುಡ್​ಗೆ ಕೊರೊನಾತಂಕ; ‘ಏಕ್​ ಲವ್ ಯಾ’ ರಿಲೀಸ್ ಮುಂದೂಡಿದ ಪ್ರೇಮ್ ಫ್ಯಾನ್ಸ್​​ಗೆ ಹೇಳಿದ್ದೇನು?

Prem: ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಚಿತ್ರತಂಡ ರಿಲೀಸ್ ದಿನಾಂಕವನ್ನು ಮುಂದೂಡಿದೆ. ನಿರ್ದೇಶಕ ಪ್ರೇಮ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Ek Love Ya: ಸ್ಯಾಂಡಲ್​ವುಡ್​ಗೆ ಕೊರೊನಾತಂಕ; ‘ಏಕ್​ ಲವ್ ಯಾ’ ರಿಲೀಸ್ ಮುಂದೂಡಿದ ಪ್ರೇಮ್ ಫ್ಯಾನ್ಸ್​​ಗೆ ಹೇಳಿದ್ದೇನು?
‘ಏಕ್​ ಲವ್ ಯಾ’ ಪೋಸ್ಟರ್​
TV9 Web
| Edited By: |

Updated on:Jan 05, 2022 | 4:01 PM

Share

ಪ್ರೇಮ್ (Prem) ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಚಿತ್ರ ಈಗಾಗಲೇ ಹಾಡುಗಳ ಮೂಲಕ ಸಿನಿಪ್ರೇಮಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿತ್ತು. ವಾಸ್ತವವಾಗಿ ನಿನ್ನೆ ಅಂದರೆ ಜನವರಿ 4ಕ್ಕೆ ಚಿತ್ರದ ಟ್ರೈಲರ್ (Trailer) ಬಿಡುಗಡೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಚಿತ್ರತಂಡ ಅದನ್ನು ಮುಂದೂಡಿತ್ತು. ಇದರಿಂದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ನಿರ್ಮಾಪಕಿ ರಕ್ಷಿತಾ ಪ್ರೇಮ್ (Rakshita Prem) ಚಿತ್ರದ ಟ್ರೈಲರ್ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಚಿತ್ರತಂಡ ಅನಿವಾರ್ಯವಾಗಿ ತನ್ನ ನಿರ್ಧಾರ ಬದಲಾಯಿಸಿದೆ. ಎಲ್ಲಾ ನಿಗದಿಯಂತೆ ನಡೆಯುವುದಾಗಿದ್ದರೆ ಜನವರಿ 21ಕ್ಕೆ ‘ಏಕ್ ಲವ್ ಯಾ’ ತೆರೆಕಾಣಬೇಕಿತ್ತು. ಆದರೆ ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಮತ್ತೆ ನಿಯಮಾವಳಿಗಳನ್ನು ಹೇರಿದೆ. ಅದರಂತೆ ಚಿತ್ರಮಂದಿರಗಳು ಅರ್ಧ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಇದು ಬಿಗ್ ಬಜೆಟ್ ಚಿತ್ರಗಳ ಕಲೆಕ್ಷನ್​ಗೆ ಹೊಡೆತ ನೀಡಲಿದೆ. ಇದೇ ಕಾರಣದಿಂದ ಪರಭಾಷೆಯ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ದಿನಾಂಕ ಮುಂದೂಡಿವೆ. ಪ್ರಸ್ತುತ ಪ್ರೇಮ್ ಕೂಡ ತಮ್ಮ ನಿರ್ದೇಶನದ ಚಿತ್ರವನ್ನು ನಿಗದಿತ ದಿನಾಂಕದಂದು ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ.

ಚಿತ್ರದ ಬಿಡುಗಡೆ ಮುಂದೂಡಿದ ಪ್ರೇಮ್; ಹೇಳಿದ್ದೇನು? ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರೇಮ್, ಜನವರಿ 21ಕ್ಕೆ ‘ಏಕ್ ಲವ್ ಯಾ’ ತೆರೆಕಾಣಬೇಕಿತ್ತು. ಎಲ್ಲೆಡೆಯೂ ಈ ಕುರಿತು ಪ್ರಚಾರವನ್ನು ಮಾಡಿದ್ದೆವು. ಆದರೆ ಕೊರೊನಾ ಕಾರಣಗಳಿಂದ ಅದನ್ನು ಮುಂದೂಡುತ್ತಿದ್ದೇವೆ. ವೀಕೆಂಡ್ ಕರ್ಫ್ಯೂ ಹಾಗೂ ಚಿತ್ರಮಂದಿರಗಳ ಸಾಮರ್ಥ್ಯದಲ್ಲಿ ಕಡಿತಗೊಳಿಸಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲವೂ ಸರಿಯಾದ ತಕ್ಷಣ ಅಭಿಮಾನಿಗಳ ಮುಂದೆ ‘ಏಕ್ ಲವ್ ಯಾ’ವನ್ನು ತರಲಾಗುವುದು. ಅಲ್ಲಿಯವರೆಗೂ ಪ್ರೀತಿ ಹಾಗೂ ಹಾರೈಕೆಗಳಿರಲಿ ಎಂದಿದ್ದಾರೆ.

ಪ್ರೇಮ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾ ನಾಯಕನಾಗಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಹಾಗೂ ರೀಷ್ಮಾ ನಾಣಯ್ಯ ಮುಖ್ಯಪಾತ್ರ ನಿಭಾಯಿಸಿದ್ದಾರೆ. ಚಿತ್ರದ ಐದು ಹಾಡುಗಳು ಈಗಾಗಲೇ ಜನರ ಮನಗೆದ್ದಿದ್ದವು. ಮುಂದಿನ ದಿನಗಳಲ್ಲಿ ಚಿತ್ರದ ಟ್ರೈಲರ್, ಆರನೇ ಹಾಡು ಹಾಗೂ ಸಿನಿಮಾದ ರಿಲೀಸ್ ದಿನಾಂಕವನ್ನು ಕೊರೊನಾ ಕಡಿಮೆಯಾದ ನಂತರ ತಿಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಪ್ರಸ್ತುತ ಕರ್ನಾಟಕದಲ್ಲಿ ಸರ್ಕಾರ ಹೊಸದಾಗಿ ನಿಯಮಾವಳಿಗಳನ್ನು ಹೇರಿರುವುದರಿಂದ ಕೆಲ ಸಮಯದವರೆಗೆ ಬಿಗ್ ಬಜೆಟ್ ಚಿತ್ರಗಳು ತೆರೆಕಾಣುವುದು ಅನುಮಾನ. ಈಗಾಗಲೇ ಎರಡು ಲಾಕ್​ಡೌನ್​ಗಳಿಂದ ತತ್ತರಿಸಿರುವ ಚಿತ್ರರಂಗಕ್ಕೆ ಇದು ಮತ್ತಷ್ಟು ಹೊಡೆತ ನೀಡಿದೆ. ಚಿತ್ರತಂಡಗಳು ಈ ಕುರಿತು ಕಾದುನೋಡುವ ತಂತ್ರಕ್ಕೆ ಮೊರೆಹೋಗಿವೆ.

ಇದನ್ನೂ ಓದಿ:

ಸಾನಿಯಾಗೆ ತಿಳಿಯಿತು ಹರ್ಷ-ಭುವಿ ಲವ್​ ಸ್ಟೋರಿ; ಭುವನೇಶ್ವರಿಗೆ ಮುಂದಿದೆ ಸಂಕಷ್ಟ

‘ದಿ ವಿಲನ್​’ ನಟಿಯ ಹಾಟ್​ ಅವತಾರ; ವೈರಲ್​ ಆಗಿವೆ ಆ್ಯಮಿ ಜಾಕ್ಸನ್ ಫೋಟೋಗಳು

Published On - 1:51 pm, Wed, 5 January 22