ಈ ಕುರಿತು ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’’ ಎಂದು ಶುಭಾ ಬರೆದುಕೊಂಡಿದ್ದಾರೆ.
ಶುಭಾ ಪೂಂಜ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
View this post on Instagram
ಶುಭಾ ಹಾಗೂ ಸುಮಂತ್ ದೀರ್ಘಕಾಲದ ಸ್ನೇಹಿತರು. ಶುಭಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯನ ಜತೆಯಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಅವರು ಹಂಚಿಕೊಂಡಿದ್ದ ಕೆಲವು ಚಿತ್ರಗಳು ಇಲ್ಲಿವೆ.
View this post on Instagram
View this post on Instagram
View this post on Instagram
2004ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶುಭಾ, ‘ಜಾಕ್ಪಾಟ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ‘ಚಂಡ’, ‘ಮೊಗ್ಗಿನ ಮನಸು’ ಖ್ಯಾತಿ ತಂದುಕೊಟ್ಟವು. ಮೊಗ್ಗಿನ ಮನಸು ಚಿತ್ರದ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ನಟಿ ಪಡೆದಿದ್ದಾರೆ. ಇತ್ತೀಚೆಗೆ ‘ನರಗುಂದ ಬಂಡಾಯ’ ಚಿತ್ರದಲ್ಲಿ ಶುಭಾ ಬಣ್ಣಹಚ್ಚಿದ್ದರು.
ಇದನ್ನೂ ಓದಿ:
Ek Love Ya: ಸ್ಯಾಂಡಲ್ವುಡ್ಗೆ ಕೊರೊನಾತಂಕ; ಬಹುನಿರೀಕ್ಷಿತ ‘ಏಕ್ ಲವ್ ಯಾ’ ರಿಲೀಸ್ ಮುಂದೂಡಿಕೆ