ಸಾನಿಯಾಗೆ ತಿಳಿಯಿತು ಹರ್ಷ-ಭುವಿ ಲವ್​ ಸ್ಟೋರಿ; ಭುವನೇಶ್ವರಿಗೆ ಮುಂದಿದೆ ಸಂಕಷ್ಟ

ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಭುವಿ ಮನೆಗೆ ತೆರಳಿದ್ದಳು ವರುಧಿನಿ. ಇವಳನ್ನು ಸಾನಿಯಾ ಹಿಂಬಾಲಿಸಿಕೊಂಡು ಹೋಗಿದ್ದಳು. ಭುವಿ ಮನೆಯನ್ನು ಸಾನಿಯಾ ಪರಿಶೀಲನೆ ನಡೆಸಿದ್ದಳು. ಆಗ ಅವಳಿಗೆ ಭುವಿಗೆ ಹರ್ಷ ಕೊಟ್ಟ ಸೀರಿ ಸಿಕ್ಕಿದೆ.

ಸಾನಿಯಾಗೆ ತಿಳಿಯಿತು ಹರ್ಷ-ಭುವಿ ಲವ್​ ಸ್ಟೋರಿ; ಭುವನೇಶ್ವರಿಗೆ ಮುಂದಿದೆ ಸಂಕಷ್ಟ
ಹರ್ಷ-ಭುವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 05, 2022 | 1:26 PM

‘ಕನ್ನಡತಿ’ ಧಾರಾವಾಹಿ (Kannadathi Serial) ಮಹತ್ವದ ಘಟ್ಟ ತಲುಪಿದೆ. ಒಂದು ಕಡೆ ಹರ್ಷ ಮತ್ತು ಭುವಿ (Harsha And Bhuvi) ನಡುವೆ ಪ್ರೀತಿ ಮೊಳೆಯುತ್ತಿದೆ. ಮತ್ತೊಂದೆಡೆ ಇವರಿಬ್ಬರ ನಡುವಿನ ಪ್ರೀತಿ ವಿಚಾರ ‘ಕನ್ನಡತಿ’ ವಿಲನ್​ ಸಾನಿಯಾಗೆ ತಿಳಿದು ಹೋಗಿದೆ. ಇದರಿಂದ ಭುವಿಗೆ ಮುಂದೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಭುವಿಗೆ ತೊಂದರೆ ಕೊಡೋಕೆ ಈಗಾಗಲೇ ಸಾನಿಯಾ ಸಾಕಷ್ಟು ಪ್ಲ್ಯಾನ್​ ಮಾಡಿಕೊಂಡಿದ್ದಾಳೆ. ಮುಂದೇನಾಗುತ್ತದೆ ಎನ್ನುವ ಕುತುಹಲ ಸದ್ಯ ವೀಕ್ಷಕರನ್ನು ಕಾಡುತ್ತಿದೆ.

ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಭುವಿ ಮನೆಗೆ ತೆರಳಿದ್ದಳು ವರುಧಿನಿ. ಇವಳನ್ನು ಸಾನಿಯಾ ಹಿಂಬಾಲಿಸಿಕೊಂಡು ಹೋಗಿದ್ದಳು. ಭುವಿ ಮನೆಯನ್ನು ಸಾನಿಯಾ ಪರಿಶೀಲನೆ ನಡೆಸಿದ್ದಳು. ಆಗ ಅವಳಿಗೆ ಭುವಿಗೆ ಹರ್ಷ ಕೊಟ್ಟ ಸೀರಿ ಸಿಕ್ಕಿದೆ. ಇದರಿಂದ ಹರ್ಷ ಮತ್ತು ಭುವಿ ನಡುವೆ ಪ್ರೀತಿ ಇದೆ ಎನ್ನುವ ವಿಚಾರ ಖಚಿತವಾಗಿದೆ. ಇದನ್ನು ತಿಳಿದ ಸಾನಿಯಾ ಸಾಕಷ್ಟು ಉರಿದುಕೊಂಡಿದ್ದಾಳೆ. ಅಲ್ಲದೆ, ಭುವಿ ವಿರುದ್ಧ ಹಗೆ ಸಾಧಿಸಲು ಮುಂದಾಗಿದ್ದಾಳೆ.

ಸಾನಿಯಾ ಹಾಗೂ ಭುವಿ ಕಚೇರಿಯಲ್ಲಿ ರಾತ್ರಿವರೆಗೂ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಭುವಿಯನ್ನು ಕರೆದುಕೊಂಡು ಹೋಗಲು ಹರ್ಷ ಬಂದಿದ್ದ. ಈ ವಿಚಾರ ಸಾನಿಯಾಗೆ ಗೊತ್ತಾಗಿದೆ. ಈ ಕಾರಣಕ್ಕೆ ನಾನೇ ಮನೆಯವರೆಗೆ ಬಿಡುತ್ತೇನೆ ಎಂದು ಭುವಿಯನ್ನು ಕರೆದುಕೊಂಡು ಹೋಗಿದ್ದಾಳೆ ಸಾನಿಯಾ. ಹೀಗಾಗಿ, ಹರ್ಷನ ಜತೆ ತೆರಳೋ ಅವಕಾಶ ಭುವಿಗೆ ತಪ್ಪಿ ಹೋಗಿತ್ತು.

ಭುವಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಸಾನಿಯಾ ಶಪಥ ಮಾಡಿದ್ದಾಳೆ. ಮುಂದಿನ ದಿನಗಳಲ್ಲಿ ಈ ರೀತಿಯ ಮತ್ತಷ್ಟು ಮಾಸ್ಟರ್​ಮೈಂಡ್​ ಪ್ಲ್ಯಾನ್​ಗಳನ್ನು ಮಾಡಿ ಭುವಿ ಮತ್ತು ಹರ್ಷನ ವಿರುದ್ಧ ಹಗೆ ತೀರಿಸಿಕೊಳ್ಳುವ ಪ್ರಯತ್ನವನ್ನು ಸಾನಿಯಾ ಮಾಡಬಹುದು. ಹೀಗಾಗಿ, ಭುವಿಗೆ ಮತ್ತಷ್ಟು ಸಂಕಷ್ಟ ಇದೆ ಎಂಬ ಮಾತು ವ್ಯಕ್ತವಾಗಿದೆ.

ಭುವಿ ಎದುರು ಹರ್ಷ ಪ್ರೀತಿ ಹೇಳಿಕೊಂಡಿದ್ದಾನೆ. ಇಬ್ಬರ ನಡುವೆ ಒಳ್ಳೆಯ ಆಪ್ತತೆ ಮೂಡಿದೆ. ಇವರು ಮದುವೆ ಆಗಬೇಕು ಎಂಬುದು ಹರ್ಷನ ತಾಯಿ ರತ್ನಮಾಲಾ ಆಸೆ ಕೂಡ ಹೌದು. ಆದರೆ, ಇದಕ್ಕೆ ಅಡ್ಡಿ ಮಾಡೋಕೆ ಸಾನಿಯಾ ಯಾವ ರೀತಿಯಲ್ಲಿ ಪ್ರಯತ್ನ ಮಾಡಬಹುದು ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ:  ನಿರ್ಧಾರ ಬದಲಿಸಲಿದ್ದಾಳೆ ಭುವಿ? ಹರ್ಷನ ಪ್ರೀತಿ ಒಪ್ಪಿಕೊಳ್ಳುತ್ತಾಳಾ ಭುವನೇಶ್ವರಿ?

ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ

Published On - 1:25 pm, Wed, 5 January 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು