AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ನಿರ್ಧಾರ ಬದಲಿಸಲಿದ್ದಾಳೆ ಭುವಿ? ಹರ್ಷನ ಪ್ರೀತಿ ಒಪ್ಪಿಕೊಳ್ಳುತ್ತಾಳಾ ಭುವನೇಶ್ವರಿ?

ಹರ್ಷ ನನಗೆ ಕೇವಲ ಗೆಳೆಯ ಮಾತ್ರ ಎಂದು ಭುವಿ ಇತ್ತೀಚೆಗೆ ನಿರ್ಧರಿಸಿದ್ದಳು. ಆದರೆ, ಅವಳಲ್ಲಿ ಅದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಅವಳ ಮನಸ್ಸು ಅವಳ ನಿಯಂತ್ರಣಕ್ಕೇ ಸಿಗುತ್ತಿಲ್ಲ.

 ನಿರ್ಧಾರ ಬದಲಿಸಲಿದ್ದಾಳೆ ಭುವಿ? ಹರ್ಷನ ಪ್ರೀತಿ ಒಪ್ಪಿಕೊಳ್ಳುತ್ತಾಳಾ ಭುವನೇಶ್ವರಿ?
ಹರ್ಷ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 19, 2021 | 3:27 PM

Share

‘ಕನ್ನಡತಿ’ ಧಾರಾವಾಹಿ ಹೊಸಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹರ್ಷ ಮತ್ತು ಭುವಿ ಪ್ರೀತಿ ವಿಚಾರ ಹೆಚ್ಚು ಹೈಲೈಟ್​ ಆಗುತ್ತಿದೆ. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಳ್ಳುತ್ತಾಳಾ ಎಂದು ಕಾದು ಕೂತಿದ್ದ ವೀಕ್ಷಕರಿಗೆ ನಿರಾಸೆ ಆಗಿತ್ತು. ಏನೇ ಮಾಡಿದರೂ ಆತನ ಪ್ರೀತಿಯನ್ನು ಒಪ್ಪಿಕೊಳ್ಳಬಾರದು ಎನ್ನುವ ನಿರ್ಧಾರಕ್ಕೆ ಭುವನೇಶ್ವರಿ ಬಂದಿದ್ದಾಳೆ. ಆದರೆ, ಅವಳ ಮನಸ್ಸಿನಲ್ಲಿ ಇರುವ ಗೊಂದಲ ಹೆಚ್ಚುತ್ತಲೇ ಇದೆ. ಪ್ರೀತಿಯನ್ನು ಕಂಟ್ರೋಲ್​ ಮಾಡುವುದಕ್ಕೆ ಅವಳಿಂದ ಸಾಧ್ಯವಾಗುತ್ತಿಲ್ಲ. ಶೀಘ್ರವೇ ಆಕೆ ತನ್ನ ನಿರ್ಧಾರ ಬದಲಿಸಲಿದ್ದಾಳೆ ಎನ್ನುವ ಮಾತು ವೀಕ್ಷಕರ ವಲಯದಿಂದ ಕೇಳಿ ಬಂದಿದೆ.

ಭುವಿ ಹಾಗೂ ವರುಧಿನಿ ತುಂಬಾನೇ ಕ್ಲೋಸ್. ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿದೆ. ವರುಧಿನಿ ಕೂಡ ಹರ್ಷನನ್ನು ಪ್ರೀತಿಸುತ್ತಿದ್ದಾಳೆ. ಈ ವಿಚಾರ ಭುವಿಗೂ ತಿಳಿದಿದೆ. ಈ ಕಾರಣಕ್ಕೆ ಹರ್ಷ ಮುಂದಿಟ್ಟ ಪ್ರೀತಿಯನ್ನು ಒಪ್ಪಿಕೊಳ್ಳೋಕೆ ಅವಳು ಹಿಂಜರಿಯುತ್ತಿದ್ದಾಳೆ. ಒಂದೊಮ್ಮೆ ಪ್ರೀತಿ ಒಪ್ಪಿಕೊಂಡರೆ ವರುಧಿನಿ ಏನಂದುಕೊಳ್ಳುತ್ತಾಳೋ, ಆಕೆಯನ್ನು ಹೇಗೆ ಎದುರಿಸಬೇಕೋ ಎನ್ನುವ ಭಯ ಭುವಿಯನ್ನು ಕಾಡುತ್ತಿದೆ. ಈ ಕಾರಣಕ್ಕೆ ಭುವಿ ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾಳೆ.

ಹರ್ಷ ನನಗೆ ಕೇವಲ ಗೆಳೆಯ ಮಾತ್ರ ಎಂದು ಭುವಿ ಇತ್ತೀಚೆಗೆ ನಿರ್ಧರಿಸಿದ್ದಳು. ಆದರೆ, ಅವಳಲ್ಲಿ ಅದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಅವಳ ಮನಸ್ಸು ಅವಳ ನಿಯಂತ್ರಣಕ್ಕೇ ಸಿಗುತ್ತಿಲ್ಲ. ರಾಣಿಘಡಕ್ಕೆ ಹರ್ಷ ಮತ್ತು ಭುವಿ ತೆರಳಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಇಬ್ಬರೂ ತೆರಳಿದ್ದಾರೆ. ಈ ವೇಳೆ ಹರ್ಷನ ಬಗ್ಗೆ ಭುವಿ ತುಂಬಾನೇ ಕಾಳಜಿ ತೋರಿಸುತ್ತಿದ್ದಾಳೆ.

ಹರ್ಷನ ಜತೆ ಗೆಳೆತನ ಮಾತ್ರ ಇರಬೇಕು ಎಂದು ಭುವಿ ನಿರ್ಧರಿಸಿದ್ದಾಳೆ ಎಂಬುದೇನೋ ನಿಜ. ಆದರೆ, ಅವಳ ಮನಸ್ಸು ಹರ್ಷನತ್ತ ವಾಲುತ್ತಿದೆ. ಹೀಗಾಗಿ, ಭುವಿ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ನಿರ್ಧಾರ ಬದಲಿಸಬಹುದು ಎಂಬ ಅಭಿಪ್ರಾಯ ಪ್ರೇಕ್ಷಕರ ವಲಯದ್ದು. ಈ ಮಧ್ಯೆ, ಹರ್ಷನ ಮದುವೆಯನ್ನು ಮೂರು ತಿಂಗಳಲ್ಲಿ ಮಾಡಬೇಕು ಎಂದು ಆತನ ತಾಯಿ ರತ್ನಮಾಲಾ ನಿರ್ಧರಿಸಿದ್ದಾಳೆ. ಅದಕ್ಕೂ ಮೊದಲೇ ಹರ್ಷ ಹಾಗೂ ಭುವಿ ಒಂದಾಗಬೇಕಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಸದ್ಯ ಎಲ್ಲರನ್ನೂ ಕಾಡುತ್ತಿದೆ. ​

ಇದನ್ನೂ ಓದಿ:ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ

‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​