‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​

83 Movie Press Meet: 3ಡಿ ಅವತರಣಿಕೆಯಲ್ಲೂ ‘83’ ಚಿತ್ರ ಬಿಡುಗಡೆ ಆಗುತ್ತಿದೆ. ಮೊದಲ ದಿನವೇ ದೊಡ್ಡ ಪರದೆಯಲ್ಲಿ ಈ ಸಿನಿಮಾ ನೋಡಲು ಕಿಚ್ಚ ಸುದೀಪ್​ ಉತ್ಸುಕರಾಗಿದ್ದಾರೆ.

TV9kannada Web Team

| Edited By: Madan Kumar

Dec 19, 2021 | 10:18 AM

ಕಿಚ್ಚ ಸುದೀಪ್ (Kichcha Sudeep)​ ಅವರಿಗೆ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅಭಿಮಾನಿಗಳಿದ್ದಾರೆ. ಈಗ ಅವರು ‘83’ ಸಿನಿಮಾವನ್ನು (83 Movie) ಕನ್ನಡದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. 1983ರ ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾರತ ತಂಡ ಜಯಶಾಲಿಯಾದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕನ್ನಡಕ್ಕೂ ಡಬ್​ ಆಗಿ ಈ ಚಿತ್ರ ಡಿ.24ರಂದು ತೆರೆಕಾಣಲಿದೆ. ಶನಿವಾರ (ಡಿ.18) ಬೆಂಗಳೂರಿನಲ್ಲಿ ನಡೆದ ‘83’ ಸುದ್ದಿಗೋಷ್ಠಿಯಲ್ಲಿ ರಣವೀರ್​ ಸಿಂಗ್​ ಮತ್ತು ಕಿಚ್ಚ ಸುದೀಪ್​ ಪಾಲ್ಗೊಂಡಿದ್ದರು. ಈ ವೇಳೆ ರಣವೀರ್​ ಸಿಂಗ್​ (Ranveer Singh) ಅವರಿಗೆ ಸುದೀಪ್​ ಕೆಲವು ಕನ್ನಡ ಡೈಲಾಗ್​ ಹೇಳಿಕೊಟ್ಟರು. ಅದನ್ನು ಅಚ್ಚುಕಟ್ಟಾಗಿ ಹೇಳಿದ ರಣವೀರ್​ಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು. ಈ ಸಿನಿಮಾವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದಾರೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ. 3ಡಿ ಅವತರಣಿಕೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಮೊದಲ ದಿನವೇ ದೊಡ್ಡ ಪರದೆಯಲ್ಲಿ ‘83’ ನೋಡಲು ಸುದೀಪ್​ ಕೂಡ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:

ಸುದೀಪ್​ ಬಗ್ಗೆ ರಣವೀರ್​ ಸಿಂಗ್​ ಪ್ರೀತಿಯ ಮಾತು; ‘83’ ಚಿತ್ರಕ್ಕೆ ಸ್ಟಾರ್​ ನಟರ ಕಾತರ

ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada