ಮೈಸೂರಿನ ಶೋ ರೂಂನಲ್ಲಿ ವಿಷಕಾರಿ ಹಾವು! ವಿಡಿಯೋ ಇದೆ

ಮೈಸೂರಿನ ಶೋ ರೂಂನಲ್ಲಿ ವಿಷಕಾರಿ ಹಾವು! ವಿಡಿಯೋ ಇದೆ

TV9 Web
| Updated By: sandhya thejappa

Updated on: Dec 19, 2021 | 4:09 PM

ಜಗತ್ತಿನ ನಾಲ್ಕು ಅತಿ ವಿಷಕಾರಿ ಹಾವುಗಳಲ್ಲಿ ಇದು ಒಂದು. ಭಾರಿ ಗಾತ್ರದ ಕಾರಣ ಪ್ಲಾಸ್ಟಿಕ್ ಬಕೆಟ್​ನಲ್ಲಿ ಸಂರಕ್ಷಣೆ ಮಾಡಲಾಗಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ಮೈಸೂರಿನ ಹುಣಸೂರು ರಸ್ತೆಯ ಬೆಳವಾಡಿ ಹುಂಡೈ ಸರ್ವಿಸ್ ಸೆಂಟರ್​ನಲ್ಲಿ ವಿಷಕಾರಿ ಹಾವೊಂದು ಪತ್ತೆಯಾಗಿದೆ. ಭಾರಿ ಗಾತ್ರದ ಮಂಡಲದ ಹಾವು ಬಾಗಿಲ ಬಳಿ ಅಡಗಿತ್ತು. ಉರುಗ ಸಂರಕ್ಷಕ ಸೂರ್ಯಕೀರ್ತಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಮಂಡಲದ ಹಾವಿನ ಬಗ್ಗೆ ಅಲ್ಲಿದ್ದ ಜನರಿಗೆ ಮಾಹಿತಿ ನೀಡಿದ್ದಾರೆ. ಜಗತ್ತಿನ ನಾಲ್ಕು ಅತಿ ವಿಷಕಾರಿ ಹಾವುಗಳಲ್ಲಿ ಇದು ಒಂದು. ಭಾರಿ ಗಾತ್ರದ ಕಾರಣ ಪ್ಲಾಸ್ಟಿಕ್ ಬಕೆಟ್​ನಲ್ಲಿ ಸಂರಕ್ಷಣೆ ಮಾಡಲಾಗಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ತೆಂಗಿನಕಾಯಿ ಮಂಡಿಗೆ ಬಂದಿದ್ದ ನಾಗರಹಾವೊಂದು ಬಂದಿತ್ತು. ಮಂಡಿ ಒಳಗಿದ್ದ ಬೀರುವಿನಲ್ಲಿ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಉರುಗ ಸಂರಕ್ಷಕ ಹರೀಶ್ ಎಂಬುವವರು ರಕ್ಷಣೆ ಮಾಡಿದ್ದಾರೆ.