AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಆಲೋಚನೆಗಳು ವ್ಯವಸ್ಥಿತವಾಗಿರಬೇಕು ಮತ್ತು ಕ್ರಮಬದ್ಧವಾಗಿರಬೇಕು: ಡಾ ಸೌಜನ್ಯ ವಶಿಷ್ಠ

ನಮ್ಮ ಆಲೋಚನೆಗಳು ವ್ಯವಸ್ಥಿತವಾಗಿರಬೇಕು ಮತ್ತು ಕ್ರಮಬದ್ಧವಾಗಿರಬೇಕು: ಡಾ ಸೌಜನ್ಯ ವಶಿಷ್ಠ

TV9 Web
| Updated By: shivaprasad.hs|

Updated on: Dec 19, 2021 | 7:28 AM

Share

ಪರಿಸ್ಥಿತಿಯನ್ನು ನಾವು ಬದಲಾಯಿಸಲಾರೆವು ಆದರೆ ನಮ್ಮ ಆಲೋಚನೆಗಳನ್ನು ಬದಲಾಯಿಸಬಲ್ಲೆವು ಮತ್ತು ಮುಂದೆ ಅಗಲಿರುವ ಪರಿಸ್ಥಿತಿಯನ್ನು ಬದಲಾಯಿಸಬಲ್ಲೆವು ಎಂದು ಡಾ ಸೌಜನ್ಯ ಹೇಳುತ್ತಾರೆ.

ಇವತ್ತಿನ ಸಂಚಿಕೆಯಲ್ಲೂ ಡಾ ಸೌಜನ್ಯ ವಶಿಷ್ಠ ಅವರು ನಾವು ಮಾಡುವ ಆಲೋಚನೆಗಳ ಬಗ್ಗೆ ಮಾತಾಡಿದ್ದಾರೆ. ನಾವು ಯಾವುದೇ ಕೆಲಸದಲ್ಲಿ ಮುಳುಗಿದರೂ ನಮ್ಮ ಮನಸ್ಸು ಆಲೋಚನೆ ಮಾಡುವುದನ್ನು ಮಾತ್ರ ನಿಲ್ಲಿಸಲಾರದು. ಯಾಕೆಂದರೆ ನಮ್ಮ ಮೆದುಳಿಗಿರುವ ಕೆಲಸವೇ ಅದು. ಆದರೆ ಕಪೋಕಲ್ಪಿತ ಆಲೋಚನೆಗಳನ್ನು ಮಾಡುತ್ತಾ ನಮ್ಮ ಮನಸ್ಥಿತಿಯನ್ನು ಕೆಡಿಸಿಕೊಳ್ಳುವುದರಲ್ಲಿ ಯಾವುದೇ ಆರ್ಥವಿಲ್ಲ. ನಮ್ಮ ಆಲೋಚನೆಗಳು ವ್ಯವಸ್ಥಿತವಾಗಿರಬೇಕು ಮತ್ತು ಕ್ರಮಬದ್ಧವಾಗಿರಬೇಕು ಎಂದು ಸೌಜನ್ಯ ಹೇಳುತ್ತಾರೆ. ಸಾಮಾನ್ಯವಾಗಿ ಮುಂದೆ ಆಗಲಿರುವ ಸಂಗತಿಗಳ ಬಗ್ಗೆಯೇ ನಾವು ವಿನಾಕಾರಣ ಯೋಚಿಸುತ್ತೇವೆ, ಎಲ್ಲಿ ಕೆಡುಕು ಕಾದಿದೆಯೋ ಆಂತ ಭಯಭೀತರಾಗುತ್ತೇವೆ. ಅಂಥ ಯೋಚನೆಗಳನ್ನು ಇಟ್ಟುಕೊಳ್ಳುವುದೇ ತಪ್ಪು ಎಂದು ಅವರು ಹೆಳುತ್ತಾರೆ.

ರೇಡಿಯೋ ಕೇಂದ್ರಗಳಿಗೆ ಅವುಗಳದ್ದೇ ಆದ ಒಂದು ಫ್ರೀಕ್ವೆನ್ಸಿ ಇರುವ ಹಾಗೆ ನಮ್ಮ ಆಲೋಚನೆಗಳಿಗೂ ಬೇರೆ ಬೇರೆ ತೆರನಾದ ಫ್ರೀಕ್ವೆನ್ಸಿ ಇರುತ್ತದೆ ಎಂದು ಸೌಜನ್ಯ ಹೇಳುತ್ತಾರೆ. ನಾವು ಒಳ್ಳೆಯ ಸಂಗತಿಗಳನ್ನು ಇಲ್ಲವೇ ಒಳ್ಳೆಯ ವ್ಯಕ್ತಿಗಳನ್ನು ನೆನಸಿಕೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಮತ್ತು ನಮ್ಮಲ್ಲಿ ಸಂತೋಷದ ಭಾವನೆ ಉಂಟಾಗುತ್ತದೆ. ಕೆಟ್ಟ ವ್ಯಕ್ತಿಗಳ ಬಗ್ಗೆ ಯೋಚನೆ ಮಾಡಿದಾಗ, ನಮಗೆ ಮೋಸ ಮಾಡಿದವರನ್ನು ಕುರಿತು ಆಲೋಚಿಸಿದಾಗ ಸಿಟ್ಟು ಬರುತ್ತದೆ ಮತ್ತು ಅದು ಮನಶಾಂತಿಯನ್ನು ಕದಡುತ್ತದೆ.

ಪರಿಸ್ಥಿತಿಯನ್ನು ನಾವು ಬದಲಾಯಿಸಲಾರೆವು ಆದರೆ ನಮ್ಮ ಆಲೋಚನೆಗಳನ್ನು ಬದಲಾಯಿಸಬಲ್ಲೆವು ಮತ್ತು ಮುಂದೆ ಅಗಲಿರುವ ಪರಿಸ್ಥಿತಿಯನ್ನು ಬದಲಾಯಿಸಬಲ್ಲೆವು ಎಂದು ಡಾ ಸೌಜನ್ಯ ಹೇಳುತ್ತಾರೆ. ನಾವು ಕೆಟ್ಟ ಪರಿಸ್ಥಿಯಲ್ಲಿರುವಾಗಲೂ ಒಳ್ಳೆಯ ಪರಿಣಾಮ ಆಗುವುದರ ಬಗ್ಗೆ ಯೋಚಿಸಬೇಕು. ಅನುಭವಗಳಿಂದ ಪಾಥ ಕಲಿತು ಬದುಕಿನಲ್ಲಿ ಮುಂದೆ ಸಾಗಬೇಕು. The flow of life is beyond amazing ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.

ಇದನ್ನೂ ಓದಿ:   Viral Video: ತನ್ನ ಒಡತಿಯ ಜನ್ಮದಿನಕ್ಕೆ ಚಪ್ಪಾಳೆ ತಟ್ಟಿ ಶುಭಾಶಯ ಹೇಳಿದ ಶ್ವಾನ; ಮುದ್ದಾದ ವಿಡಿಯೋ ಇಲ್ಲಿದೆ