ಪ್ರತಿ ಯುನಿಟ್‌ಗೆ 1.50 ರೂಪಾಯಿ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಜೆಸ್ಕಾಂ

ಜೆಸ್ಕಾಂನ ಲೋಪಗಳಿಂದಲೇ ದರ ಹೆಚ್ಚಳ ಎಂದು ಆರೋಪಗಳು ಕೇಳಿ ಬಂದಿದ್ದು, ರಾಜ್ಯದ ವಿದ್ಯುತ್ ನಿಗಮಗಳ ಪೈಕಿ ಜೆಸ್ಕಾಂನಲ್ಲಿಯೇ ಅತೀ ಹೆಚ್ಚು ದರ ನಿಗದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: preethi shettigar

Dec 19, 2021 | 10:57 AM

ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿದ್ಯುತ್ ದರ ಏರಿಕೆಯ ಶಾಕ್​ ಮತ್ತೆ ಎದುರಾಗುವ ಸಾಧ್ಯತೆಗಳು ಕಾಣುತ್ತಿವೆ. ಇದಕ್ಕೆ ಕಾರಣ ವಿದ್ಯುತ್ ದರ ಹೆಚ್ಚಳಕ್ಕೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯುನಿಟ್‌ಗೆ 1.50 ರೂಪಾಯಿ ದರ ಹೆಚ್ಚಳಕ್ಕೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಒಂದೇ ವರ್ಷದಲ್ಲಿ 3 ಬಾರಿ ಜೆಸ್ಕಾಂ (Jescom) ದರ ಹೆಚ್ಚಿಸಿದ್ದು, ಈಗ 4ನೇ ಬಾರಿ ದರ ಹೆಚ್ಚಳಕ್ಕೆ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್​ಗೆ (KERC) ಪ್ರಸ್ತಾವನೆ ನೀಡಿದೆ. ಸದ್ಯ ಜೆಸ್ಕಾಂನ ದರ ಹೆಚ್ಚಳ ಪ್ರಸ್ತಾವನೆಗೆ ಕೈಗಾರಿಕಾ ಸಂಘಟನೆಗಳು, ರೈತರು ಮತ್ತು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದರ ಹೆಚ್ಚಳಕ್ಕೆ ಆಕ್ಷೇಪಣೆ ಸಲ್ಲಿಸಿರುವ ರಾಯಚೂರಿನ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್, ಈ ಬಗ್ಗೆ ಸಿಎಂ ಬಸವರಾಜ್​ ಬೊಮ್ಮಾಯಿ ಅವರಿಗೆ ಆಕ್ಷೇಪಣೆ ಸಲ್ಲಿಸಿದೆ. ಸದ್ಯ ಜೆಸ್ಕಾಂನ ಲೋಪಗಳಿಂದಲೇ ದರ ಹೆಚ್ಚಳ ಎಂದು ಆರೋಪಗಳು ಕೇಳಿ ಬಂದಿದ್ದು, ರಾಜ್ಯದ ವಿದ್ಯುತ್ ನಿಗಮಗಳ ಪೈಕಿ ಜೆಸ್ಕಾಂನಲ್ಲಿಯೇ ಅತೀ ಹೆಚ್ಚು ದರ ನಿಗದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

3 ಬಾರಿ ಜೆಸ್ಕಾಂ ದರ ಹೆಚ್ಚಳ
2020 ನವೆಂಬರ್​ನಲ್ಲಿ ಪ್ರತಿ ಯುನಿಟ್​ಗೆ 0.40 ಪೈಸೆ ಹೆಚ್ಚಳ.

2021 ಜನವರಿಯಲ್ಲಿ ಪ್ರತಿ ಯುನಿಟ್​ಗೆ 0.05-0.08 ಪೈಸೆ ಹೆಚ್ಚಳ.

2021ಜೂನ್​ನಲ್ಲಿ ಪ್ರತಿ ಯುನಿಟ್​ಗೆ 0.30 ಪೈಸೆ ಹೆಚ್ಚಳ.

ಇದನ್ನೂ ಓದಿ:

ಘೋರ ಸುದ್ದಿ: ಅಕ್ರಮ ವಿದ್ಯುತ್​ಗೆ ರೈತ ಬಲಿ; ಅದಕ್ಕೆ ವಿದ್ಯುತ್ ಅಳವಡಿಸಿದ್ದ ಜಮೀನು ಮಾಲೀಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ವಿದ್ಯುತ್​ ವ್ಯತ್ಯಯ ತಪ್ಪಿಸಲು ಮಹತ್ವದ ಹೆಜ್ಜೆ; 24ಗಂಟೆಯೂ ಕಲ್ಲಿದ್ದಲು ಪೂರೈಕೆಗಾಗಿ ರೈಲು ಸಂಚಾರ

Follow us on

Click on your DTH Provider to Add TV9 Kannada