‘ಬಡವರ, ಸಾಮಾನ್ಯರ ಪರವಾಗಿ ನನ್ನ ಹೋರಾಟ ಸದಾ ಇರುತ್ತದೆ’; ಇಂದ್ರಜಿತ್​ ಲಂಕೇಶ್​

‘ಯಾವತ್ತೂ ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ. ಬಡವರು, ದಲಿತರು ಮತ್ತು ಸಾಮಾನ್ಯರ ಪರವಾಗಿ ನಿಲ್ಲುತ್ತೇನೆ’ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Dec 19, 2021 | 3:54 PM

ಇಂದ್ರಜಿತ್ ಲಂಕೇಶ್​ (Indrajit Lankesh) ಅವರು ಅನೇಕ ವಿಚಾರಗಳ ಬಗ್ಗೆ ಆಗಾಗ ಹೇಳಿಕೆ ನೀಡುತ್ತಲೇ ಇರುತ್ತಾರೆ. ಅವರ ವಿರುದ್ಧವೂ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆ ಬಗ್ಗೆ ಇಂದ್ರಜಿತ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಇಂಥ ಪ್ರತಿಭಟನೆಗಳು ನನ್ನ ತಂದೆ ಲಂಕೇಶ್​ ವಿರುದ್ಧವೂ ನಡೆದಿದೆ. ಯಾವತ್ತೂ ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ. ಬಡವರು, ದಲಿತರು ಮತ್ತು ಸಾಮಾನ್ಯರ ಪರವಾಗಿ ನಿಲ್ಲುತ್ತೇನೆ. ಎಲ್ಲೇ ಅನ್ಯಾಯ ಆದರೂ ಧ್ವನಿ ಎತ್ತುತ್ತೇನೆ’ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ. ‘ನನ್ನ ಸಹೋದರಿ ಗೌರಿ ಲಂಕೇಶ್ (Gauri Lankesh) ಹೋರಾಟ ಮಾಡುತ್ತಲೇ ಕೊಲೆಯಾಗಿ ಹೋದಳು. ನಾನು ಸಹ ಹೋರಾಟ ಮಾಡಿಕೊಂಡು ಬಂದವನು. ನನಗೆ ಮಸಿ ಬಳಿಯುವುದಿರಲಿ, ಕೊಲೆ ಮಾಡುತ್ತೇನೆಂದು ಬೆದರಿಸಿದರೂ ನಾನು ಹೆದರುವುದಿಲ್ಲ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

ಇದನ್ನೂ ಓದಿ:

‘ಸಿನಿಮಾ ನಟರು ಟ್ವೀಟ್​ ಮಾಡಿದ್ರೆ ಸಾಲದು’; ಬೆಳಗಾವಿ ಹೋರಾಟದ ಬಗ್ಗೆ ಇಂದ್ರಜಿತ್​ ಲಂಕೇಶ್​ ಹೇಳಿಕೆ

‘ಕನ್ನಡದ ಬಾವುಟಕ್ಕೆ ಮರ್ಯಾದೆ ಕೊಡಲೇ ಬೇಕು’; ಧ್ರುವ ಸರ್ಜಾ ಖಡಕ್​ ಮಾತು

Follow us on

Click on your DTH Provider to Add TV9 Kannada