AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್​ ವ್ಯತ್ಯಯ ತಪ್ಪಿಸಲು ಮಹತ್ವದ ಹೆಜ್ಜೆ; 24ಗಂಟೆಯೂ ಕಲ್ಲಿದ್ದಲು ಪೂರೈಕೆಗಾಗಿ ರೈಲು ಸಂಚಾರ

Coal Crisis: ಸೋಮವಾರ 1.77 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲನ್ನು ವರ್ಗಾಯಿಸಲಾಗಿದೆ. ಕಳೆದ ವರ್ಷ ಇದೇ ದಿನ 1.48 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲು ಮಾತ್ರ ಟ್ರಾನ್ಸ್​ಫರ್​ ಆಗಿತ್ತು.

ವಿದ್ಯುತ್​ ವ್ಯತ್ಯಯ ತಪ್ಪಿಸಲು ಮಹತ್ವದ ಹೆಜ್ಜೆ; 24ಗಂಟೆಯೂ ಕಲ್ಲಿದ್ದಲು ಪೂರೈಕೆಗಾಗಿ ರೈಲು ಸಂಚಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Oct 12, 2021 | 10:35 AM

ದೇಶದಲ್ಲಿ ಸದ್ಯ ಬಹುಮಟ್ಟಿಗೆ ಸುದ್ದಿಯಾಗುತ್ತಿರುವುದು ಕಲ್ಲಿದ್ದಲು ಕೊರತೆ (Coal Crisis)ಮತ್ತು ವಿದ್ಯುತ್ ಪೂರೈಕೆ (Power Supply)ಯಲ್ಲಿ ವ್ಯತ್ಯಯ. ಈ ಕಲ್ಲಿದ್ದಲು ಅಭಾವ ದೇಶದ ದೆಹಲಿ, ತಮಿಳುನಾಡು, ರಾಜಸ್ಥಾನ, ಪಂಜಾಬ್​ ರಾಜ್ಯಗಳಲ್ಲಿ ವಿದ್ಯುತ್​ ಸಮಸ್ಯೆ ತಂದೊಡ್ಡಬಹುದು. ಹಾಗೇ ಇನ್ನೂ ಕೆಲವು ರಾಜ್ಯಗಳಲ್ಲೂ ಕೂಡ ವಿದ್ಯುತ್​ ವ್ಯತ್ಯಯ ಆಗಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ ಭಾರತೀಯ ರೈಲ್ವೆ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯುತ್​ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು ರೈಲುಗಳು ದಿನದ 24 ಗಂಟೆ ಸಂಚಾರ ನಡೆಸಲು ಪ್ರಾರಂಭ ಮಾಡಿವೆ. ಕಲ್ಲಿದ್ದಲಿನ ಅಭಾವ ಒಂದು ತುರ್ತುಪರಿಸ್ಥಿತಿ ಎಂದು ರಾಷ್ಟ್ರೀಯ ಸಾಗಣೆದಾರರು ಘೋಷಣೆ ಮಾಡಿದ್ದು, 24 ಗಂಟೆ ಕಲ್ಲಿದ್ದಲು ಸಾಗಣೆಗಾಗಿ ಕಂಟ್ರೋಲ್​ ರೂಂ ರಚನೆ ಮಾಡಿ ಎಂದು ರೈಲ್ವೆ ಎಲ್ಲ ವಲಯಗಳ ಪ್ರಧಾನ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. 

ಸೋಮವಾರ 1.77 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲನ್ನು ವರ್ಗಾಯಿಸಲಾಗಿದೆ. ಕಳೆದ ವರ್ಷ ಇದೇ ದಿನ 1.48 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲು ಮಾತ್ರ ಟ್ರಾನ್ಸ್​ಫರ್​ ಆಗಿತ್ತು. ಇನ್ನು ಒಂದು ದಿನ ಬೇಡಿಕೆ 500 ರೇಕ್ಸ್​ಗೆ ತಲುಪಿದರೂ, ಸಾಗಣೆದಾರರು ಅದನ್ನು ಆರಾಮಾಗಿ ಪೂರೈಕೆ ಮಾಡುತ್ತಾರೆ.  ದೇಶದ ಪೂರ್ವ ಭಾಗದ ಕಲ್ಲಿದ್ದಲು ವಲಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಬರುತ್ತಿದೆ. ಪೂರ್ವ ಮಧ್ಯ ರೈಲ್ವೆ ವಲಯದ ರೈಲುಗಳು ಆ ಕಲ್ಲಿದ್ದಲನ್ನು ಪೂರೈಸುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಕಲ್ಲಿದ್ದಲು ಅಗತ್ಯ ಇರುವ ರಾಜ್ಯಗಳಿಗೆ ಸಂಪೂರ್ಣ ಪ್ರಮಾಣದಲ್ಲಿ ಅದನ್ನು ಪೂರೈಸುವ ಮೂಲಕ ವಿದ್ಯುತ್​ ಕೊರತೆ ನೀಗಿಸಲು ಸಿದ್ಧರಿದ್ದೇವೆ ಎಂದು ರೈಲ್ವೆ ರಾಷ್ಟ್ರೀಯ ಸಾಗಣೆದಾರರು ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಎದುರಾಗಿರುವ ಸಂದರ್ಭ ಒಂದೆರಡು ದಿನಕ್ಕೆಲ್ಲ ಸರಿ ಹೋಗುವಂಥದ್ದಲ್ಲ. ಆದರೆ ಕಲ್ಲಿದ್ದಲು ಸಾಗಣೆಗೆ ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದೇವೆ. ಕಲ್ಲಿದ್ದಲು ಲೋಡಿಂಗ್​, ಅನ್​ಲೋಡಿಂಗ್​ ಸೇರಿ ಎಲ್ಲ ರೀತಿಯ ಮೇಲ್ವಿಚಾರಣೆಗಳನ್ನೂ ಸರಿಯಾಗಿ ಮಾಡಲಾಗುವುದು ಎಂದು ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ಯೂಷನ್‌ ಕ್ಲಾಸ್​ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದಕ್ಕೆ ಗಲಾಟೆ; ಐವರ ಮೇಲೆ ಹಲ್ಲೆ

Karnataka Rain: ಕರ್ನಾಟಕದ ಹಲವು ಕಡೆ ಭಾರಿ ಮಳೆ; ಫೋಟೋಗಳು ಇಲ್ಲಿವೆ

Published On - 9:54 am, Tue, 12 October 21

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ