‘ಕಾಶ್ಮೀರ ನಮ್ಮದು..’-ಅಲೈ-ಖೈದಾ ಹೆಸರಲ್ಲಿ ಫೇಕ್ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಪಾಕ್ ಉಗ್ರರು !
ಪಾಕಿಸ್ತಾನ ಉಗ್ರರ ಪೋಷಕವಾಗಿದೆ ಎಂಬ ಕಾರಣಕ್ಕೆ ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಸೇರಿ ಇನ್ನೂ ಹಲವು ವೇದಿಕೆಗಳಲ್ಲಿ ತುಂಬ ಸಮಸ್ಯೆ ಎದುರಿಸುತ್ತಿದೆ. ಅಷ್ಟಾದರೂ ಉಗ್ರರರಿಗೆ ಬೆಂಬಲ ನೀಡುವುದನ್ನು ಆ ದೇಶ ಬಿಡುತ್ತಿಲ್ಲ.
ಉಗ್ರ ಸಂಘಟನೆ ಅಲ್-ಖೈದಾ ಇದೀಗ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಶ್ಮೀರ (Kashmir) ನಮ್ಮದು ಎಂದು ಹೇಳಿಕೊಂಡಿದೆ. ಈ ವಾರದಲ್ಲಿ ಅಲ್-ಖೈದಾ (Al-Qaeda) ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡುತ್ತಿರುವ ಎರಡನೇ ವಿಡಿಯೋ ಇದಾಗಿದೆ. ಸುಮಾರು 18 ನಿಮಿಷಗಳ ಈ ವಿಡಿಯೋದಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಗ್ಗೆಯೂ ಮಾತನಾಡಿದ್ದಾರೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭಾರತೀಯ ಸೇನೆ ಚಿತ್ರಹಿಂಸೆ ನೀಡುತ್ತಿದೆ. ಇದೇ ಕಾರಣಕ್ಕೆ ನಾವೂ ಕೂಡ ಭಾರತದ ವಿರುದ್ಧ ಗನ್ ಎತ್ತಿದ್ದೇವೆ ಎಂಬುದನ್ನು ವಿಡಿಯೋದಲ್ಲಿ ಹೇಳಲಾಗಿದೆ. ಕಳೆದ ವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಲ್-ಖೈದಾ ಉಗ್ರರು ಅಸ್ಸಾಂನಲ್ಲಿ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದರು.
ಅಂದಹಾಗೆ ಇದೊಂದು ಫೇಕ್ ವಿಡಿಯೋ..ಭಾರತಕ್ಕೆ ಹೆದರಿಸಲು ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳು, ಭಾರತ ಉಪಖಂಡದಲ್ಲಿ ಇರುವ ಅಲ್-ಖೈದಾ ಹೆಸರಿನಲ್ಲಿ ಇಂಥ ವಿಡಿಯೋ ಬಿಡುಗಡೆ ಮಾಡುತ್ತಿವೆ ಎಂದು ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಮತ್ತು ಭಾರತೀಯ ಗುಪ್ತಚರ ದಳದ ಮೂಲಗಳು ತಿಳಿಸಿದ್ದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ಉಗ್ರರ ಪೋಷಕವಾಗಿದೆ ಎಂಬ ಕಾರಣಕ್ಕೆ ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಸೇರಿ ಇನ್ನೂ ಹಲವು ವೇದಿಕೆಗಳಲ್ಲಿ ತುಂಬ ಸಮಸ್ಯೆ ಎದುರಿಸುತ್ತಿದೆ. ಅಷ್ಟಾದರೂ ಉಗ್ರರರಿಗೆ ಬೆಂಬಲ ನೀಡುವುದನ್ನು ಆ ದೇಶ ಬಿಡುತ್ತಿಲ್ಲ. ಅದರೊಂದಿಗೆ ಹೀಗೆ ಭಾರತದಲ್ಲಿ ಆತಂಕ ಸೃಷ್ಟಿಸಲು ಅಲ್-ಖೈದಾ ಉಗ್ರ ಸಂಘಟನೆಯ ಹೆಸರಿನಲ್ಲಿ ವಿಡಿಯೋ ಬಿಡುಗಡೆ ಮಾಡುತ್ತಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ನಾವು ಕಾಶ್ಮೀರ ಸೇರಿ ವಿಶ್ವದ ಎಲ್ಲೆಡೆ ಇರುವ ಮುಸ್ಲಿಮರ ಬಗ್ಗೆ ಮಾತನಾಡುವ ಹಕ್ಕು ಹೊಂದಿದ್ದೇವೆ ಎಂದು ತಾಲಿಬಾನಿಗಳು ಹೇಳಿದ್ದಾಗಿ ಕಳೆದ ತಿಂಗಳು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ ಈ ಬಗ್ಗೆ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ರನ್ನು ಸಂಪರ್ಕಿಸಿ, ಪ್ರಶ್ನಿಸಿದಾಗ, ನಾವು ಹಾಗೆ ಹೇಳಿಲ್ಲ. ನಮ್ಮ ಮಾತುಗಳನ್ನು ತಿರುಚಿ ವರದಿ ಮಾಡಲಾಗಿದೆ ಎಂದು ತಿಳಿಸಿದ್ದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬರುತ್ತಿದ್ದಂತೆ ಇತ್ತ ಪಾಕಿಸ್ತಾನವೂ ಚಿಗುರಿಕೊಂಡಿದೆ. ತಾಲಿಬಾನಿಗಳು ನಮಗೆ ಕಾಶ್ಮೀರವನ್ನು ಗೆದ್ದುಕೊಡುತ್ತಾರೆ ಎಂಬ ಮಾತುಗಳನ್ನು ಪಾಕ್ನ ಕೆಲವು ಸಚಿವರು ಆಡಿದ್ದರು. ಆದರೆ ತಾಲಿಬಾನ್ ಈ ವಿಚಾರದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುತ್ತಿದೆ. ಭಾರತದ ಬಗ್ಗೆ ಕೆಲವು ವಿಷಯಗಳಲ್ಲಿ ನಮಗೆ ಅಸಮಾಧಾನವಿದ್ದರೂ ಕಾಶ್ಮೀರದ ಬಗ್ಗೆ ನಾವೇನೂ ಮಾತನಾಡುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Rakesh Jhunjhunwala: ಟಾಟಾ ಕಂಪೆನಿಯ ಈ ಷೇರಿನಲ್ಲಿ 3 ಟ್ರೇಡಿಂಗ್ ಸೆಷನ್ನಲ್ಲಿ 310 ಕೋಟಿ ರೂ. ಗಳಿಸಿದ ಜುಂಜುನ್ವಾಲಾ
New Book : ಅಚ್ಚಿಗೂ ಮೊದಲು ; ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನ ನಾಳೆ ಬಿಡುಗಡೆ
Published On - 11:23 am, Tue, 12 October 21