Rakesh Jhunjhunwala: ಟಾಟಾ ಕಂಪೆನಿಯ ಈ ಷೇರಿನಲ್ಲಿ 3 ಟ್ರೇಡಿಂಗ್ ಸೆಷನ್​ನಲ್ಲಿ 310 ಕೋಟಿ ರೂ. ಗಳಿಸಿದ ಜುಂಜುನ್​ವಾಲಾ

ಭಾರತದ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್​ವಾಲಾ ಅವರ ಪೋರ್ಟ್​ಫೋಲಿಯೋದಲ್ಲಿನ ಟಾಟಾ ಸಮೂಹದ ಈ ಕಂಪೆನಿಯಿಂದ ಕಳೆದ 3 ಟ್ರೇಡಿಂಗ್​ ಸೆಷನ್​ನಲ್ಲಿ ನೂರಾರು ಕೋಟಿ ಗಳಿಕೆ ಕಂಡಿದ್ದಾರೆ. ಯಾವುದು ಆ ಷೇರು ಹಾಗೂ ಎಷ್ಟು ಏರಿಕೆ ಕಂಡಿದೆ ಎಂಬ ವಿವರ ಇಲ್ಲಿದೆ.

Rakesh Jhunjhunwala: ಟಾಟಾ ಕಂಪೆನಿಯ ಈ ಷೇರಿನಲ್ಲಿ 3 ಟ್ರೇಡಿಂಗ್ ಸೆಷನ್​ನಲ್ಲಿ 310 ಕೋಟಿ ರೂ. ಗಳಿಸಿದ ಜುಂಜುನ್​ವಾಲಾ
ರಾಕೇಶ್​ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Oct 12, 2021 | 11:13 AM

ನಜಾರಾ ಟೆಕ್ನಾಲಜೀಸ್, ಟೈಟಾನ್ ಕಂಪೆನಿ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಕೆಲವು ಪೋರ್ಟ್​ಫೋಲಿಯೋ ಸ್ಟಾಕ್​ಳಲ್ಲಿ ಭಾರೀ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಕೇಶ್ ಜುಂಜುನ್ ವಾಲಾ ಅವರ ನಿವ್ವಳ ಮೌಲ್ಯವು ದೊಡ್ಡ ಮಟ್ಟದಲ್ಲಿ ಮೇಲೇರಿದೆ. ಟಾಟಾ ಮೋಟಾರ್ಸ್ ಷೇರುಗಳು ಕಳೆದ 3 ಟ್ರೇಡ್ ಸೆಷನ್‌ಗಳಲ್ಲಿ 335.60 ರೂಪಾಯಿಯಿಂದ (NSEನಲ್ಲಿ 6ನೇ ಅಕ್ಟೋಬರ್ 2021ರಂದು ದಿನದ ಕೊನೆಯ ಬೆಲೆ) NSEಯಲ್ಲಿ 417.8 ರೂಪಾಯಿಗೆ ಏರಿದೆ – ಅಂದರೆ ಕೇವಲ 3 ದಿನಗಳಲ್ಲಿ ಶೇ 25ರಷ್ಟು ಏರಿಕೆಯಾಗಿದೆ. ವಾಹನ ಕಂಪೆನಿಗಳ ಸ್ಟಾಕ್‌ನಲ್ಲಿ ಬೆಲೆ ಏರಿಕೆ ಮುಂದುವರಿದಿದೆ. ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರು ಈ ಟಾಟಾ ಸಮೂಹ ಕಂಪೆನಿಯಲ್ಲಿ ಶೇಕಡಾ 1.14ರಷ್ಟು ಪಾಲನ್ನು ಹೊಂದಿದ್ದಾರೆ. ಈ 3 ದಿನಗಳಲ್ಲಿ ಏರಿಕೆಯಿಂದ 310 ಕೋಟಿ ರೂಪಾಯಿ ಗಳಿಸಿದ್ದಾರೆ.

ಟಾಟಾ ಮೋಟಾರ್ಸ್‌ನಲ್ಲಿ ರಾಕೇಶ್ ಜುಂಜುನ್‌ವಾಲಾ ಹೊಂದಿರುವ ಷೇರು ಪ್ರಮಾಣ ಟಾಟಾ ಮೋಟಾರ್ಸ್‌ನ ಏಪ್ರಿಲ್‌ನಿಂದ ಜೂನ್ 2021ರವರೆಗಿನ ಷೇರ್‌ ಹೋಲ್ಡಿಂಗ್ ಮಾದರಿಯ ಪ್ರಕಾರ, ರಾಕೇಶ್ ಜುಂಜುನ್‌ವಾಲಾ 3,77,50,000 ಷೇರುಗಳನ್ನು ಹೊಂದಿದ್ದಾರೆ. ಇದು ಕಂಪೆನಿಯ ಒಟ್ಟು ಪೇಯ್ಡ್ ಅಪ್ ಕ್ಯಾಪಿಟಲ್​ನ ಶೇಕಡಾ 1.14ರಷ್ಟಾಗಿದೆ. ‘ವಾರೆನ್ ಬಫೆಟ್ ಆಫ್ ಇಂಡಿಯಾ’ ಎನಿಸಿಕೊಂಡಿರುವ ಜುಂಜುನ್​ವಾಲಾ, ಕಂಪೆನಿಯಲ್ಲಿ ತಮ್ಮ ಪಾಲನ್ನು ಏಪ್ರಿಲ್ ನಿಂದ ಜೂನ್ 2021ರ ತ್ರೈಮಾಸಿಕದಲ್ಲಿ ಕಡಿತಗೊಳಿಸಿದ್ದರು. ಆ ತನಕ 4,27,50,000 ಟಾಟಾ ಮೋಟಾರ್ಸ್ ಷೇರುಗಳನ್ನು ಅಥವಾ ಮಾರ್ಚ್ 2021ರ ತ್ರೈಮಾಸಿಕದಲ್ಲಿ ಕಂಪೆನಿಯಲ್ಲಿ ಶೇ 1.29ರಷ್ಟು ಪಾಲನ್ನು ಹೊಂದಿದ್ದರು. 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಷೇರುದಾರರು ಹೊಂದಿರುವ ಶೇಕಡಾವಾರು ಪ್ರಮಾಣದ ಬಗ್ಗೆ ಘೋಷಿಸಿಲ್ಲ.

ನಿವ್ವಳ ಮೌಲ್ಯದ ಹೆಚ್ಚಳ ರಾಕೇಶ್ ಜುಂಜುನ್ ವಾಲಾ 3,77,50,000 ಟಾಟಾ ಮೋಟಾರ್ಸ್ ಷೇರುಗಳನ್ನು ಹೊಂದಿದ್ದು, ಈ ಕಂಪೆನಿಯ ಪ್ರತಿ ಷೇರಿಗೆ ರೂ. 335.60ರಿಂದ ರೂ.417.80ಕ್ಕೆ ಏರಿಕೆಯಾಗಿದೆ – ಪ್ರತಿ ಷೇರಿಗೆ ರೂ. 82.20 ಹೆಚ್ಚಳ ಕಳೆದ 3 ಟ್ರೇಡ್ ಸೆಷನ್‌ಗಳಲ್ಲಿ ಆಗಿದ್ದು, 310 ಕೋಟಿ ರೂಪಾಯಿ (82.20 x 3,77,50,000) ಗಳಿಕೆ ಆಗಿದೆ.

ಟಾಟಾ ಮೋಟಾರ್ಸ್ ಷೇರು ಬೆಲೆ ಅಂದಾಜು ಈ ವಾಹನ ಕಂಪೆನಿಯ ಷೇರಿನ ಕೌಂಟರ್‌ನಲ್ಲಿ ಪಾಸಿಟಿವ್ ಆಗಿದ್ದಾರೆ. ಟಾಟಾ ಮೋಟಾರ್ಸ್ ಷೇರಿನ ಬೆಲೆಯು ಮುಕ್ತಾಯದ ಆಧಾರದ ಮೇಲೆ ರೂ. 400ಕ್ಕೆ ಹೊಸ ಬ್ರೇಕ್ಔಟ್ ನೀಡಿದೆ ಎಂದು ಷೇರು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಮೋಟಾರ್ಸ್ ಷೇರು ಬೆಲೆ ಗುರಿಯ ಕುರಿತು ಮಾತನಾಡುತ್ತಾ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಟಾಟಾ ಮೋಟಾರ್ಸ್ ಮುಕ್ತಾಯದಲ್ಲಿ ರೂ. 400ರ ದರವನ್ನು ಮುರಿದಿದೆ. ಅಂದರೆ ಷೇರುಗಳು ಈಗಲೂ ಚಾರ್ಟ್​ನಲ್ಲಿ ಧನಾತ್ಮಕವಾಗಿವೆ. ಟಾಟಾ ಮೋಟಾರ್ಸ್ ಷೇರುಗಳನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ 450 ರೂಪಾಯಿಗೆ ಖರೀದಿಸಬಹುದು, ಪ್ರತಿ ಷೇರಿಗೆ 390 ರುಪಾಯಿಗೆ ಸ್ಟಾಪ್​ ಲಾಸ್​ ಕಾಯ್ದುಕೊಳ್ಳಬಹುದು,” ಎಂದಿದ್ದಾರೆ.

(ಎಚ್ಚರಿಕೆ: ಈ ಲೇಖನದಲ್ಲಿನ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಯಕ್ತಿಕವಾಗಿ ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪೆನಿಗಳದ್ದೇ ಹೊರತು ಟಿವಿ9 ನೆಟ್​ವರ್ಕ್​ಗೆ ಸಂಬಂಧಿಸಿದ್ದಲ್ಲ.)

ಇದನ್ನೂ ಓದಿ: Akasa Airlines: ರಾಕೇಶ್​ ಜುಂಜುನ್​ವಾಲಾ ಬೆಂಬಲಿತ ಆಕಾಶ ಏರ್​ಲೈನ್ಸ್​ಗೆ ಸರ್ಕಾರದ ನೋ ಅಬ್ಜೆಕ್ಷನ್

Rakesh Jhunjhunwala: ಒಂದೇ ತಿಂಗಳಲ್ಲಿ ರಾಕೇಶ್​ ಜುಂಜುನ್​ವಾಲಾಗೆ ಈ ಷೇರಿನಿಂದ 145 ಕೋಟಿ ರೂಪಾಯಿ ಗಳಿಕೆ

Published On - 11:12 am, Tue, 12 October 21

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ