SBI Annuity Deposit: ಎಸ್​ಬಿಐನ ಈ ಸ್ಕೀಮ್​ನಲ್ಲಿ ಹಣ ಹೂಡಿದರೆ ತಿಂಗಳು ತಿಂಗಳು ಆದಾಯ ಬರುತ್ತೆ

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಈ ವರ್ಷಾಶನ ಯೋಜನೆಯು ಪ್ರತಿ ತಿಂಗಳು ಆದಾಯ ತಂದುಕೊಡುತ್ತದೆ. ಆದರೆ ಹೂಡಿಕೆ ಮಾಡುವ ಮುನ್ನ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ.

SBI Annuity Deposit: ಎಸ್​ಬಿಐನ ಈ ಸ್ಕೀಮ್​ನಲ್ಲಿ ಹಣ ಹೂಡಿದರೆ ತಿಂಗಳು ತಿಂಗಳು ಆದಾಯ ಬರುತ್ತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 12, 2021 | 12:59 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India- ಎಸ್‌ಬಿಐ) ವರ್ಷಾಶನ (Annuity Deposit) ಠೇವಣಿ ಯೋಜನೆ ಒಂದು ವಿಧದ ಸ್ಥಿರ ಠೇವಣಿಯಾಗಿದ್ದು, ನೀವು ಆಯ್ಕೆ ಮಾಡಿದ ಅವಧಿಗೆ ಅದು ಮಾಸಿಕ ಆಧಾರದ ಮೇಲೆ ಫಿಕ್ಸೆಡ್​ ಪಾವತಿಯನ್ನು ನೀಡುತ್ತದೆ. ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ನಿಗದಿತ ಮೊತ್ತವನ್ನು ಖಾತೆದಾರರಿಗೆ ಸಮನಾದ ಮಾಸಿಕ ಕಂತುಗಳಲ್ಲಿ (ಇಎಂಐ) ಒದಗಿಸಲಾಗುತ್ತದೆ. ಇಎಂಐಗಳು ಅಸಲು ಮೊತ್ತದ ಒಂದು ಭಾಗವನ್ನು ಹಾಗೂ ಕಡಿಮೆ ಮಾಡುವ ಅಸಲು ಮೊತ್ತದ (Reducing Principal) ಮೇಲಿನ ಬಡ್ಡಿಯನ್ನು ಒಳಗೊಂಡಿರುತ್ತದೆ. ತ್ರೈಮಾಸಿಕಗಳಲ್ಲಿ ಸೇರ್ಪಡೆ ಆಗಿ, ಮಾಸಿಕ ಮೌಲ್ಯಕ್ಕೆ ರಿಯಾಯಿತಿ ನೀಡುತ್ತದೆ.

1) ಒಬ್ಬ ವ್ಯಕ್ತಿಯು ನಿವಾಸಿ (ರೆಸಿಡೆಂಟ್) ಆಗಿರಬೇಕು, ಅಪ್ರಾಪ್ತ ವಯಸ್ಕನನ್ನು ಸಹ ಒಳಗೊಳ್ಳಬಹುದು. ಖಾತೆಯು ಜಂಟಿಯಾಗಿರಬಹುದು ಅಥವಾ ಒಬ್ಬರ ಹೆಸರಿನಲ್ಲೇ ಇರಬಹುದು.

2) ಗ್ರಾಹಕರು SBI ವರ್ಷಾಶನ ಠೇವಣಿ ಯೋಜನೆಯಲ್ಲಿ ಕನಿಷ್ಠ 25,000 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಇದರಲ್ಲಿ ಗರಿಷ್ಠ ಮಿತಿ ಇಲ್ಲ.

3) SBI ವರ್ಷಾಶನ ಠೇವಣಿ ಯೋಜನೆಯಡಿ ಗ್ರಾಹಕರು 3 ವರ್ಷ, 5 ವರ್ಷ, 7 ವರ್ಷ ಮತ್ತು 10 ವರ್ಷಗಳ ಮೆಚ್ಯೂರಿಟಿ ಆಯ್ಕೆಗಳನ್ನು ಮಾಡಿಕೊಳ್ಳಬಹುದು.

4) ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯು ಠೇವಣಿದಾರರು ಆಯ್ಕೆ ಮಾಡಿದ ಅವಧಿಯ ಠೇವಣಿ/ಸ್ಥಿರ ಠೇವಣಿಗಳಂತೆಯೇ ಬಡ್ಡಿಯ ದರವನ್ನು ನೀಡುತ್ತದೆ. ನೀವು ಐದು ವರ್ಷಗಳವರೆಗೆ ಹಣ ಠೇವಣಿ ಇಟ್ಟಿದ್ದೀರಿ ಎಂದುಕೊಳ್ಳೋಣ. ನಂತರ ನೀವು ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ- ಐದು ವರ್ಷಗಳ ಸ್ಥಿರ ಠೇವಣಿಗೆ ಅನ್ವಯವಾಗುವ ಬಡ್ಡಿದರದ ಪ್ರಕಾರ. ಸದ್ಯಕ್ಕೆ ಎಸ್‌ಬಿಐ ಮೂರರಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇ 5.30ರ ಬಡ್ಡಿದರ ನೀಡುತ್ತದೆ. 5 ರಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ FDಗಳಿಗೆ SBI ಶೇ 5.40ರ ಬಡ್ಡಿದರ ನೀಡುತ್ತದೆ.

ಇದನ್ನೂ ಓದಿ: SBI Special FD: ಎಸ್​ಬಿಐ ವಿಶೇಷ ಎಫ್​ಡಿ ಯೋಜನೆ ಮಾರ್ಚ್ 31, 2022ರ ತನಕ ವಿಸ್ತರಣೆ