AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾದಲ್ಲೇ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿಯನ್ನೂ ಹೊಗಳಿದ ಅಮೆರಿಕದ ಕಾರ್ಪೊರೇಟ್ ನಾಯಕ

ಏಷ್ಯಾದ ಆರ್ಥಿಕ ಶಕ್ತಿಗಳಲ್ಲಿ ಭಾರತವು ಪ್ರಮುಖ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಡಿಜಟಲೈಸೇಷನ್ ಆಗುತ್ತಿರುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಅಮೆರಿಕದ ಕಾರ್ಪೊರೇಟ್ ನಾಯಕ ಜಾನ್ ಚೇಂಬರ್ಸ್.

ಏಷ್ಯಾದಲ್ಲೇ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿಯನ್ನೂ ಹೊಗಳಿದ ಅಮೆರಿಕದ ಕಾರ್ಪೊರೇಟ್ ನಾಯಕ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Oct 12, 2021 | 4:26 PM

ಅಮೆರಿಕದ ಉನ್ನತ ಕಾರ್ಪೊರೇಟ್ ನಾಯಕ ಮತ್ತು ಸಿಸ್ಕೋ ಮಾಜಿ ಸಿಇಒ ಜಾನ್ ಚೇಂಬರ್ಸ್ ಅವರು ಮಾತನಾಡಿ, ಚೀನಾದ ಇತ್ತೀಚಿನ ಅನಿರೀಕ್ಷಿತ ನಡೆ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲಿನ ದಮನ ನೀತಿ ನಂತರ ಏಷ್ಯಾದ ಮುಂದಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. “ನಾನು 1995ರಲ್ಲಿ ಚೀನಾದಲ್ಲಿ ವೃತ್ತಿಜೀವನವನ್ನು ಆರಂಭಿಸಿದೆ. ಆದರೆ ಅಲ್ಲಿ ತುಂಬಾ ಅನಿರೀಕ್ಷಿತತೆ ಇದೆ ಮತ್ತು ಇದು ಗೆಲುವು-ಸೋಲಿನ ಸನ್ನಿವೇಶವಾಗಿದೆ. ನೀವು ಊಹಿಸುವ ಸಾಮರ್ಥ್ಯ ಹೊಂದಿರಬೇಕು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕಾನೂನುಗಳು ಏನಾಗಲಿದೆ ಎಂಬುದು ನಿಮಗೆ ತಿಳಿಯುವುದಿಲ್ಲ,” ಎಂದು ಫೋರ್ಬ್ಸ್ 30 ವರ್ಷ ವಯಸ್ಸಿನೊಳಗಿನವರ ಸಂವಾದದಲ್ಲಿ ಚೇಂಬರ್ಸ್ ಹೇಳಿದ್ದಾರೆ.

“ನಾನು ಏಷ್ಯಾದ ಯಾವುದಾದರೂ ಒಂದು ದೇಶದ ಮೇಲೆ ಬಾಜಿ ಕಟ್ಟಬೇಕಾದರೆ ಅದು ಭಾರತ. ನಾನು ಭಾರತದ ಮೇಲೆ ಎರಡು ಬಾರಿ ಬಾಜಿ ಕಟ್ಟುತ್ತೇನೆ,” ಎಂದು ಅಮೆರಿಕದ ಉನ್ನತ ಕಾರ್ಪೊರೇಟ್ ನಾಯಕ ಹೇಳಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಅಲಿಬಾಬ ಸಮೂಹದ ಸಂಸ್ಥಾಪಕ ಜಾಕ್ ಮಾ ಅವರು ನಿಯಮಾವಳಿ ಒತ್ತಡ ಇಲ್ಲದೆ ನಾವೀನ್ಯತೆ ನಡೆಯಲು ಅವಕಾಶ ನೀಡುವ ಅಗತ್ಯದ ಬಗ್ಗೆ ಮಾತನಾಡಿದ ನಂತರ ಚೀನಾ ಟೆಕ್ ಸಂಸ್ಥೆಗಳ ಮೇಲೆ ಸರಣಿ ಶಿಸ್ತುಕ್ರಮಗಳನ್ನು ಆರಂಭಿಸಿದೆ. ಅಧಿಕಾರಿಗಳು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಕಠಿಣವಾದ ದತ್ತಾಂಶ ರಕ್ಷಣೆ ಕಾನೂನುಗಳನ್ನು ಪರಿಚಯಿಸಿದ್ದಾರೆ. ಈ ಕ್ರಮದಿಂದಾಗಿ ಚೀನಾದ ಮೇಲೆ ಹಲವು ವರ್ಷಗಳಿಂದ ಹೂಡಿಕೆ ಮಾಡುತ್ತಾ ಬಂದಿರುವ ಅನೇಕ ಜಾಗತಿಕ ಹೂಡಿಕೆದಾರರನ್ನು ಕೆರಳಿಸಿದೆ.

“ಭಾರತದ ಪ್ರಧಾನಿ ಮೋದಿ ವಿಶ್ವದ ಅಗ್ರ ಮೂರು ನಾಯಕರಲ್ಲಿ ಒಬ್ಬರು. ದೇಶವನ್ನು ಡಿಜಿಟಲೀಕರಣಗೊಳಿಸುವ ಅವರ ಕಾರ್ಯತಂತ್ರವು ಅತ್ಯುನ್ನತವಾಗಿದೆ,” ಎಂದು ಚೇಂಬರ್ಸ್ ಹೇಳಿದ್ದಾರೆ. ಚೇಂಬರ್ಸ್ ಸದ್ಯಕ್ಕೆ ಜೆಸಿ 2 ವೆಂಚರ್ಸ್‌ನ ಸ್ಥಾಪಕ ಮತ್ತು ಸಿಇಒ. ಪ್ರಪಂಚದಾದ್ಯಂತ ದೊಡ್ಡ ಬದಲಾವಣೆ ತಂದ ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡಲು ಅವರು ಹೆಸರುವಾಸಿಯಾಗಿದ್ದಾರೆ. ಎಎಸ್‌ಎಪಿಪಿ, ಆಸ್​ಪೈರ್ ಫುಡ್ ಗ್ರೂಪ್, ಬಾಲ್ಬಿಕ್ಸ್, ಬ್ಲೂಮ್ ಎನರ್ಜಿ, ಕ್ಲೌಡ್‌ಲೀಫ್ ಮತ್ತು ಇತರ ಹಲವು ಮಾರುಕಟ್ಟೆ ಪರಿವರ್ತನೆಗಳಿಗೆ ಕಾರಣವಾಗುವ ವರ್ಗಗಳು ಮತ್ತು ಭೌಗೋಳಿಕತೆಗಳಲ್ಲಿ ಕಂಪೆನಿಗಳು ಹೂಡಿಕೆ ಮಾಡುತ್ತಿವೆ. ಚೇಂಬರ್ಸ್ ಅವರು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾಲುದಾರಿಕೆ ವೇದಿಕೆಯ (ಯುಎಸ್ಐಎಸ್​ಪಿಎಫ್) ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಯುಪಿಐ ವಹಿವಾಟಿನಲ್ಲಿ ಗಮನಾರ್ಹ ಪ್ರಗತಿ: ಆರ್ಥಿಕತೆ ಮುನ್ನಡೆಯ ದ್ಯೋತಕ ಎಂದ ಸಚಿವ ಅಶ್ವಿನಿ ವೈಷ್ಣವ್

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?